'ನಾತಿ ಚರಾಮಿ' ಆರತಿ ವೆಂಕಟೇಶ್ ಅವರ ಕಾದಂಬರಿಯಾಗಿದೆ. ಲೇಖಕ ಆರತಿ ವೆಂಕಟೇಶ್‌ರವರು ವೃತ್ತಿಯಲ್ಲಿ ವೈದ್ಯರು ಪ್ರವೃತ್ತಿಯಿಂದ ಬರಹಗಾರರು. 30 ಕಾದಂಬರಿಗಳು ಹಾಗೂ ಕೆಲವು ಕಥೆಗಳನ್ನು ರಚಿಸಿದ್ದಾರೆ. ಇವರ 15 ಕಾದಂಬರಿಗಳು ನಾಡಿನ ಜನಪ್ರಿಯ ವಾರಪತ್ರಿಕೆ ಹಾಗೂ ಮಾಸಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು ಜನಪ್ರಿಯತೆಗಳಿಸಿವೆ. ಹವ್ಯಾಸದ ಇನ್ನೊಂದು ಮಜಲು ಕಿರುತೆರೆಯ ಧಾರಾವಾಹಿಗಳ ಕಥಾ ವಿಸ್ತರಣೆ ಹಾಗೂ ಸಂಭಾಷಣೆ ರಚನೆ. ‘ಮುಕ್ತ’ ಧಾರವಾಹಿಯ ಕಥಾ ವಿಸ್ತರಣೆ ಹಾಗೂ ಸಂಭಾಷಣೆ ರಚಿಸಿದ್ದಾರೆ. ( ಬೆನ್ನುಡಿಯಿಂದ) ಪ್ರಕಾಶಕರು.
ಕಾದಂಬರಿಗಾರ್ತಿ ಆರತಿ ವೆಂಕಟೇಶ್ ಅವರು 1964 ಫೆಬ್ರವರಿ 15ರಂದು ಜನಿಸಿದರು. ತಂದೆ ನವರತ್ನರಾಮ್, ತಾಯಿ ಉಷಾ ನವರತ್ನರಾಮ್. ’ಆಶಾಕಿರಣ, ಅಮೃತಬಿಂದು, ನಿನಗಾಗಿ ನಾನೋಡಿ ಬಂದೆ, ಜೀವನ ಸಂಧ್ಯಾ, ಅಗೋಚರ, ಮುಕುಕಿದೀ ಮಬ್ಬಿನಲಿ, ಮಾಫಲೇಶುಕದಾಚನ, ಯಾವ ಮುರಳಿ ಕರೆಯಿತು, ತಲ್ಲಣಿಸದಿರು ಮನವೆ, ಧರಿತ್ರಿ’ ಮುಂತಾದ 30ಕ್ಕೂ ಹೆಚ್ಚು ಕಾದಂಬರಿ ರಚಿಸಿದ್ದಾರೆ. ...
READ MORE