"ನಟನಾರಾಯಣಿ" ಶಂಕರ ಮೊಕಾಶಿ ಪುಣೇಕರ್ ಅವರ ಕಾದಂಬರಿಯಾಗಿದೆ. "ನಟನಾರಾಯಣಿ" ಈ ಹೆಸರಿನಲ್ಲೇ ರಹಸ್ಯವಿದ್ದಂತೆ ಕಾಣುತ್ತದೆ. ಮೊದಲು ಅದನ್ನು ಪರಿಹರಿಸೋಣ. ನಾರಾಯಣ ಜೋಶಿ, ನಾಣ ನೆಂದು ಕರೆಸಿಕೊಳ್ಳುವ ಅನಾಥ ಬಾಲಕ. ಧಾರವಾಡದ ದೇಸಾಯಿಯವರ ಮನೆಯಲ್ಲಿ ಅಡಿಗೆಯ ಹುಡುಗನಾಗಿ ಬೆಳೆದು ಸಂಗೀತ ಕಲಿಯುವ ಹುಮ್ಮಸ್ಸಿನಿಂದ ಮನೆ ಬಿಟ್ಟು ಹೋಗುವ ಯೋಜನೆ ಹಾಕಿಕೊಳ್ಳುತ್ತಾನೆ. ಅದು ವಿಫಲವಾಗಿ ಧುಂಡಶಿಯ ವೀರಭದ್ರ ಶೆಟ್ಟರ ಧುಂಡೇಶ್ವರ ನಾಟಕ ಕಂಪೆನಿಯಲ್ಲಿ ಹಾಡುತ್ತಾ ಹೆಣ್ಣಿನ ಪಾತ್ರ ವಹಿಸುವಂಥ ಪರಿಸ್ಥಿತಿ ಉಂಟಾಗುತ್ತದೆ. ನಾಟಕಗಳಲ್ಲಿ ರಂಗುರಂಗಿನ ಪೋಷಾಕಿನಲ್ಲಿ ಸುಂದರಾಂಗಿಯಾಗಿ ರಸಿಕರ ಮನ ಸೂರೆಗೊಂಡ ನಾಣನಿಗೆ ಸಿಕ್ಕಿದ ಬಿರುದು ನಟನಾರಾಯಣಿ. ಅವನನ್ನು ಹೆಣ್ಣಾಗಿಯೇ ಪ್ರೇಕ್ಷಕರು ಗುರುತಿಸುತ್ತಾರೆ. ನಾಣನು ನಾಟಕ ಕಂಪನಿ ಸೇರುವ ಮುನ್ನ ಜುಬೇದ ಸ್ತ್ರೀಪಾತ್ರಧಾರಿಣಿಯಾಗಿ, ಉತ್ತಮ ಗಾಯಕಿಯಾಗಿ ಪ್ರಸಿದ್ಧಳಾಗಿದ್ದಳು. ಅವಳು ಕಂಪನಿಗೆ ಮುಂಚಿತವಾಗಿ ತಿಳಿಸದೆ ಬೇರೆ ಕಂಪನಿಗೆ ಹೋದ ಕಾರಣ ವಿಧಿ ಇಲ್ಲದೆ ತರಾತುರಿಯಲ್ಲಿ ನಾಣನನ್ನು ನೇಮಿಸಿಕೊಂಡರು. ಈ ಅವಕಾಶವನ್ನು ನಾಣ ಸರಿಯಾಗಿ ಉಪಯೋಗಿಸಿ ಕೊಂಡು ಜನಪ್ರಿಯನಾಗುತ್ತಾನೆ. ಇದನ್ನು ಲೇಖಕರು ಒಂಟಿತನದಿಂದ ಅಸ್ತಿತ್ವವಾದಕ್ಕೆ ತೆರಳಿದ ಮಜಲು ಎನ್ನುತ್ತಾರೆ.
ಶಂಕರ ಮೊಕಾಶಿ ಪುಣೇಕರ ಅವರು ಹುಟ್ಟಿದ್ದು 1928, ಧಾರವಾಡದಲ್ಲಿ. ಅಲ್ಲಿಯೇ ತಮ್ಮ ಶಿಕ್ಷಣವನ್ನು ಮುಗಿಸಿದರು. ಬಿ.ಎ.ಪದವಿ ಮುಗಿದ ನಂತರ ನಾಲ್ಕು ವರ್ಷಗಳ ಕಾಲ ವಿಜಾಪುರ, ಕಾರವಾರ, ಧಾರವಾಡಗಳಲ್ಲಿ ಪ್ರೌಢಶಾಲಾ ಶಿಕ್ಷಕರಾಗಿದ್ದರು. ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಎಂ.ಎ.ಪದವಿ ಮತ್ತು ಪಿಎಚ್.ಡಿ ಪದವಿಯನ್ನು ಪಡೆದರು. ಬೆಳಗಾವಿಯ ಆರ್.ಪಿ.ಡಿ.ಕಾಲೇಜು, ಲಿಂಗರಾಜ ಕಾಲೇಜು, ಮುಂಬಯಿಯ ಕೆ.ಸಿ.ಕಾಲೇಜು, ಐ.ಐ.ಟಿಗಳಲ್ಲಿ ಅಧ್ಯಾಪಕರಾಗಿ, ಕರ್ನಾಟಕ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದರು. 1988ರಲ್ಲಿ ನಿವೃತ್ತಿಯ ನಂತರ ಮೂರು ವರ್ಷಗಳ ಕಾಲ ಶ್ರೀ ಸತ್ಯಸಾಯಿಬಾಬಾ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಕನ್ನಡ ಮತ್ತು ಇಂಗ್ಲಿಷ್ ...
READ MORE