ರಂಗಮ್ಮನ ವಠಾರ-ನಿರಂಜನ ಅವರ ಕಾದಂಬರಿ. "ವಠಾರ ಜೀವನವೆಂದರೆ ಅತ್ಯಂತ ಕೀಳುತಮವಾದ ಬದುಕಲ್ಲ. ಅದಕ್ಕೂ ಮಾನವೀಯ ಮುಖವಿದೆ. ಅಲ್ಲಿಯೂ ಮನುಷ್ಯರೇ ವಾಸಿಸುತ್ತಾರೆ. ಎಂದು ಪ್ರತಿಪಾದಿಸುವ ಕೃತಿ ಇದು.
ಮಧ್ಯಮ ವರ್ಗದ ಜನತೆಗೆ ಅದೂ ಬೆಂಗಳೂರಿನಂತಹ ನಗರದಲ್ಲಿ ವಠಾರ ಜೀವನವೇ ಆಶ್ರಯ. ವಠಾರ ಜೀವನ ಎಂದರೆ ಕೊಳಚೆ ಪ್ರದೇಶವಲ್ಲ. ಅಲ್ಲಿ ಹೃದಯವಂತರೂ ಇರುತ್ತಾರೆ. ಹತ್ತು ಹಲವು ಅಸಾಮಾನ್ಯವಾದ ನೋವುಗಳನ್ನು ಸಹಿಸಿಯೂ ಅವರು ಜೀವನ ಪ್ರೀತಿಸುತ್ತಾರೆ. ಇತರರೊಂದಿಗೆ ಸಹಬಾಳ್ವೆಯ ಬದುಕನ್ನು ಸಾಗಿಸುತ್ತಾರೆ. ದುಃಖದ ಮಧ್ಯೆಯೂ ಹೇಗೆ ನಗುನಗುತ್ತಾ ಬರ್ಬರ ದಿನಗಳನ್ನು ದೂಡುತ್ತಾರೆ ಎಂಬುದರ ಹೃದಯಂಗಮವಾದ ಚಿತ್ರಣ ಇಲ್ಲಿದೆ.
ವಠಾರ ಜೀವನದಲ್ಲಿಯೂ ನೈಜ ಪ್ರೇಮ ಜನ್ಮ ತಾಳುತ್ತದೆ. ಸರಸವೂ ವಿರಸವಾಗುತ್ತದೆ. ಶಿಕ್ಷಕಿತರು, ಸುಸಂಸ್ಕೃತರು, ಅನಾಗರಿಕರೂ ಒಂದೆಡೆ ಬಾಳುತ್ತಾರೆ. ಅದೊಂದು ತುಂಬಾ ಕುತೂಹಲಕಾರಿಯಾಗ ಜಗತ್ತು. ಇಲ್ಲಿಯ ಒಂದೊಂದು ಕುಟುಂಬವೂ ದಿನಕ್ಕೆ ಮೂರೇ ಕೊಡ ನೀರಿನಲ್ಲಿ ದಿನಗಳನ್ನು ದೂಡುವ ಸಹನೆ, ಮನೋಸ್ಥೈರ್ಯ ಹೊಂದಿದೆ. ಒಟ್ಟಿನಲ್ಲಿ, ವಠಾರದ ಕುತೂಹಲಕಾರಿ ಹಾಗೂ ಅಚ್ಚರಿಯ ಜಗತ್ತನ್ನು ರಸವತ್ತಾಗಿ ಚಿತ್ರಿಸಿದ ಕಾದಂಬರಿ ಇದು.
ವಠಾರದ ಜನ ಎಂದು ಮೂಗು ಮುರಿಯುವವರು ಒಂದು ಬಾರಿ ಆತ್ಮಾವಲೋಕನ ಮಾಡಿಕೊಳ್ಳುವಂತೆ, ಅವರೆಡೆಗೂ ನೋಡಿ ಜೀವನ ಪ್ರೀತಿ ಹೆಚ್ಚಿಸಿಕೊಳ್ಳುವಂತೆ ಪ್ರೇರೇಪಿಸುವ ಕಾದಂಬರಿ ಇದು.
ಕನ್ನಡದ ಪ್ರತಿಭಾವಂತ ಲೇಖಕ, ಖ್ಯಾತ ಬರಹಗಾರ ನಿರಂಜನ ಅವರು ಹುಟ್ಟಿದ್ದು 15-06-1924ರಂದು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೇಸುಬ್ರಹ್ಮಣ್ಯದ ಸಮೀಪದ ಕುಳಗುಂದದಲ್ಲಿ. ತಾಯಿ ಚೆನ್ನಮ್ಮ. ಸುಳ್ಯದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಓದು. ನೀಲೇಶ್ವರದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ಖ್ಯಾತ ವೈದ್ಯೆ, ಲೇಖಕಿ ಅನುಪಮಾ ನಿರಂಜನ ಅವರೊಂದಿಗೆ ವಿವಾಹವಾದರು. ನಿರಂಜನ ಅವರು ಒಬ್ಬ ಖ್ಯಾತ ಬರಹಗಾರ ಹಾಗೂ ಹೋರಾಟಗಾರ. ಅವರ ಮೊದಲ ಹೆಸರು ಕುಳಕುಂದ ಶಿವರಾಯ. ಅವರು 20ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಗಾಂಧೀಜಿ, ಕಾರ್ಲ್ ಮಾರ್ಕ್ಸ್, ವ್ಲಾಡಿಮಿರ್ ಲೆನಿನ್ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ...
READ MOREತಾಯಿನಾಡು ಮತ್ತು ಚಿತ್ರಗುಪ್ತ ಪತ್ರಿಕೆಗಳಿಗೆ 50-60 ರ ದಶಕದಲ್ಲಿ ಪುಸ್ತಕ ವಿಮರ್ಶೆಗಳನ್ನು ಮಾಡುತ್ತಿದ್ದವರು - ‘ಪುಸ್ತಕಪ್ರಿಯ’ ಹೆಸರಿನ ಹೆಚ್.ಆರ್. ನಾಗೇಶರಾವ್ ಅವರು ಐದು ದಶಕಗಳ ಹಿಂದಿನ ವಿಮರ್ಶೆಯ ಸ್ವರೂಪದ ಸ್ಯಾಂಪಲ್‍ಗಳು ಇಲ್ಲಿದೆ. ರಂಗಮ್ಮನ ವಠಾರ (ಕಾದಂಬರಿ. ಲೇಖಕರು: ಶ್ರೀ ‘ನಿರಂಜನ’, ಪ್ರಕಾಶಕರು: ವಾಹಿನಿ ಪ್ರಕಾಶನ, ಜಯಚಾಮರಾಜ ರಸ್ತೆ, ಬೆಂಗಳೂರು-2, ಬೆಲೆ: ಒಂದೂವರೆ ರೂಪಾಯಿ)
-ಪುಸ್ತಕಪ್ರಿಯ, ತಾಯಿನಾಡು, ‘ಪ್ರಕಟಣ ಪ್ರಪಂಚ’ ಅಂಕಣ; ೨೫-೯-೧೯೫೪
ಕೃಪೆ: ಗೂಗಲ್