‘ಬಿಲ್ವಪತ್ರೆ’ ಕೃತಿಯು ಗೌತಮ್ ಬೆಂಗಾಳೆ ಅವರ ರೋಮಾಂಚನಕಾರಿ ಕಾದಂಬರಿಯಾಗಿದೆ. ಕೃತಿಯ ಬೆನ್ನುಡಿಯಲ್ಲಿ ಲೇಖಕ ಹೀಗೆ ಪ್ರಸ್ತಾಪಿಸಿದ್ದಾರೆ: `ಓದು ನನ್ನೊಳಗಿನ ಆಲೋಚನಾ ಶಕ್ತಿಯನ್ನು ಒಂದು ಹಂತಕ್ಕೆ ಜಾಗೃತಗೊಳಿಸಿದೆ. ಪ್ರವಾಸ ಮತ್ತು ಪ್ರಯಾಸಗಳು ನನಗೆ ಜೀವನದ ಹಲವು ಆಯಾಮಗಳನ್ನು ತಿಳಿಸಿ ಹೇಳಿವೆ. ಇನ್ನು ಮುಗಿಯಿತು ಎಂಬ ಇಳಿಜಾರಿನಿಂದ, ಇನ್ನು ಸಾಕು ಎನ್ನುವಂತಹ ಏಳಿಗೆಯವರೆಗಿನ ನನ್ನ ಜೀವನದ ಏರಿಳಿತದ ದಾರಿಗಳು ಹಲವು ಪ್ರಶ್ನೆಗಳಿಗೆ ಉತ್ತರ ಕೊಟ್ಟಿವೆ. ಒಂದಿಷ್ಟು ಪ್ರಶ್ನೆಗಳಿಗೆ ಉತ್ತರ ಸಿಗುವುದೇ ಇಲ್ಲ ಎಂಬುದನ್ನು ದಾರಿಯಲ್ಲಿ ಸಿಕ್ಕಿದ ಪಾತ್ರಗಳು ಹೇಳಿ ಹೋಗಿವೆ. ಇನ್ನುಳಿದಂತೆ ಆತ್ಮವಿಮರ್ಶೆ ಮಾಡಿಕೊಂಡರೆ ನಾನಿಷ್ಟು ಕ್ರಿಮಿನಲ್ಲಾ...? ಎಂದು ಹಲವು ಬಾರಿ ಅನ್ನಿಸಿದರೆ, ಅಲ್ಲಿಗೆ ಎಲ್ಲರಂತೆ ನಾನು. ಈ ಪುಸ್ತಕವನ್ನು ಓದಿದರೆ, ನಾನು, ನನ್ನ ವ್ಯಕ್ತಿತ್ವ ನಿಮಗೆ ಅನಾವರಣವಾಗಿ ಬಿಡುತ್ತದೆ' ಎಂದಿದ್ದಾರೆ.
ಲೇಖಕ ಗೌತಮ್ ಬೆಂಗಳೆ ಶಿರಸಿಯ ಬೆಂಗಳೆಯವರು. ಇಂಜಿನೀಯರಿಂಗ್ ಪದವೀಧರರು. ಪ್ರಸ್ತುತ ಆಲ್ಫ್ ಕಾಮರ್ಸ್ ಎಂಬ ಕಂಪನಿಯ ಸಂಸ್ಥಾಪಕ ಸದಸ್ಯರು. ಕಂಪನಿಯಲ್ಲಿ ಪ್ರೋಗ್ರಾಮರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಳ್ಳಿಯ ಹಸಿರು, ಕೃಷಿಯ ಒಡನಾಟ , ದೇಶ ಸುತ್ತುವುದು, ಪುಸ್ತಕ ಓದುವುದು ಹೆಚ್ಚು ಆಸಕ್ತಿ. 'ಆತ್ಮ ಸಂವೇದನಾ' ಅವರ ಚೊಚ್ಚಲ ಕಾದಂಬರಿ. ಹಾಗೂ 'ಪ್ರತಿವ್ಯೂಹ' ಎರಡನೇ ಕಾದಂಬರಿ. ...
READ MORE