ಪ್ರೇಮ ಸೇತು ಲೇಖಕಿ ವಾಣಿ ಅವರು ರಚಿಸಿರುವ ಕಾದಂಬರಿ. ಈ ಕಾದಂಬರಿ ಪಾತ್ರಗಳು ಓದುಗರನ್ನನ್ನು ಸಾಂಸಾರಿಕ ಕಥಾನಕದತ್ತ ಕರೆದೊಯ್ಯುತ್ತವೆ. ರುಕ್ಮಿಣಿ ರಾಮಣ್ಣರ ಇಬ್ಬರು ಮಕ್ಕಳೆಂದರೆ ರತ್ನ ಮತ್ತು ಮಧು. ರತ್ನ ಶಾಲೆಯಲ್ಲಿ ಯಾವಾಗಲೂ ಉನ್ನತ ದರ್ಜೆಯಲ್ಲಿ ಪಾಸಾಗುತ್ತಿದ್ದರೆ, ಅಣ್ಣ ಮಧು ಬೋರ್ಡ್ ಎಕ್ಸಾಮ್ ನಲ್ಲಿ ಪ್ರತಿ ಸಲವೂ ಫೇಲಾಗುತ್ತಿದ್ದನು. ಮಧುಗೆ ತಕ್ಕಂತಿದ್ದವನು ಅವನ ಉತ್ತರ ಭಾರತದ ಸ್ನೇಹಿತ ಬದರಿಪ್ರಸಾದ. ಬದರಿಪ್ರಸಾದ ತನ್ನ ತಾಯಿಯನ್ನು ಕಳೆದುಕೊಂಡಿದ್ದರಿಂದ, ತನ್ನ ಕುಟುಂಬದ ಬಾಂಧವ್ಯದಿಂದ ವಂಚಿತನಾಗಿದ್ದನು. ಅವನಿಗೆ ಕೌಟುಂಬಿಕ ಆತ್ಮೀಯತೆಯನ್ನು ನೀಡಿದ್ದು ಮಧುನ ತಾಯಿ ರುಕ್ಮಿಣಿ. ಮಧು ಮನೆಯ ಸಂಬಂಧ ಮತ್ತಷ್ಟು ಗಾಢವಾಗಿದ್ದು ಅವನ ಕುಟುಂಬ ಮುಂಬೈಗೆ ತೆರಳಿ ಅಲ್ಲೇ ನೆಲೆಸಿದಾಗ ಇಲ್ಲಿಂದಲೇ ಈ ಕಥೆಯು ತಿರುವುಗಳನ್ನು ಪಡೆಯುತ್ತಾ ಸಾಗುತ್ತದೆ. ಹದಿಹರೆಯಕ್ಕೆ ಕಾಲಿಟ್ಟ ರತ್ನ ಅರಿವಿಲ್ಲದಂತೆಯೇ ಬದರಿಪ್ರಸಾದನಿಗೆ ಹತ್ತಿರವಾಗುತ್ತಾಳೆ. ತಂದೆ ನೋಡಿದ ಸಂಬಂಧವನ್ನು ನಿರಾಕರಿಸುತ್ತಾಳೆ. ಆಗಲೂ ಮಗಳ ಬಗ್ಗೆ ಅಪಾರ ಒಲವಿದ್ದ ತಂದೆ ತಾಯಿಗೆ, ರತ್ನಳ ಕುರಿತು ಕಿಂಚಿತ್ತೂ ಕೆಟ್ಟ ವಿಚಾರಗಳು ಬರುವುದಿಲ್ಲ. ಹೀಗಿರಲು ರತ್ನ ಕಾಗದ ಬರೆದಿಟ್ಟು ಬದರಿಯೊಂದಿಗೆ ಹೋಗುತ್ತಾಳೆ. ಆಗ ರುಕ್ಮಿಣಿ ಮತ್ತು ರಾಮಣ್ಣರಿಗಾದ ಮಾನಸಿಕ ಯಾತನೆಯನ್ನು ಈ ಕಾದಂಬರಿಯಲ್ಲಿ ಮನಮುಟ್ಟುವಂತೆ ಚಿತ್ರಿಸಲಾಗಿದೆ.
ವಾಣಿ- ಕನ್ನಡದ ಪ್ರಮುಖ ಲೇಖಕಿಯರಲ್ಲಿ ಒಬ್ಬರು. ಎಸ್.ಎಸ್.ಎಲ್.ಸಿ. ತನಕ ಶಿಕ್ಷಣ ಪಡೆದಿದ್ದ ಅವರು 1917 ಮೇ 12ರಂದು ಮೈಸೂರಿನ ಶ್ರೀರಂಗಪಟ್ಟಣದಲ್ಲಿ ಜನಿಸಿದರು. ತಂದೆ ಟಿ. ನರಸಿಂಗರಾಯರು, ತಾಯಿ ಹಿರಿಯಕ್ಕಮ್ಮ. ಬಿಡುಗಡೆ, ಎರಡು ಕನಸು, ಶುಭ ಮಂಗಳ, ಕಾವೇರಿಯ ಮಡಿಲಲ್ಲಿ, ಹೊಸ ಬೆಳಕು, ಅನಿರೀಕ್ಷಿತ, ಪ್ರೇಮ ಸೇತು, ತ್ರಿಶೂಲ, ಸುಲಗ್ನ ಸಾವಧಾನ, ನೆರಳು ಬೆಳಕು, ಚಿನ್ನದ ಪಂಜರ, ಮನೆಮಗಳು, ಅವಳ ಭಾಗ್ಯ, ಅಂಜಲಿ, ಬಾಳೆಯ ನೆರಳು, ಹೂವು ಮುಳ್ಳು, ಬಲೆ, ಅಲೆನೆಲೆ, ಹಾಲು ಒಡೆದಾಗ ಇವರ ಜನಪ್ರಿಯ ಕಾದಂಬರಿಗಳು. ಅವರ ಹಲವು ಕಾದಂಬರಿಗಳು ಚಲನಚಿತ್ರವಾಗಿ ಪ್ರಸಿದ್ದಿಯನ್ನು ಗಳಿಸಿತು. ಕಸ್ತೂರಿ, ನಾಣಿಯ ಮದುವೆ, ಬಾಬು ...
READ MORE