ಮುನಿಸಂಚಾರ ( ಕಾಲ ಜ್ಞಾನಿಯ ಕಾಲ ಪ್ರಯಾಣ )

Author : ಅಶೋಕ

Pages 320

₹ 280.00




Year of Publication: 2020
Published by: ವಂಶಿ ಪಬ್ಲಿಕೇಷನ್ಸ್
Address: # 4, ಗಾಯಿತ್ರಿ ಕಾಂಪ್ಲೆಕ್ಸ್‌, ಟಿ ಬಿ ಬಸ್‌ ಸ್ಟಾಪ್‌ ಹತ್ತಿರ, ಬಿ ಹೆಚ್‌ ರಸ್ತೆ, ಸುಭಾಷ್ ‌ ನಗರ, ನೆಲಮಂಗಲ, ಬೆಂಗಳೂರು-562123
Phone: 9916595916

Synopsys

ಮುನಿಸಂಚಾರ-ಲೇಖಕ ಅಶೋಕ ಅವರ ಕಾದಂಬರಿ. ಕಾಲಜ್ಞಾನಿಯ ಕಾಲ ಪ್ರಯಾಣ ಎಂಬುದು ಈ ಕೃತಿಯ ಉಪಶೀರ್ಷಿಕೆ. ಕಾಲ ಎನ್ನುವುದು ಸರ್ವವ್ಯಾಪಿ. ಇಡೀ ಬ್ರಹ್ಮಾಂಡದಲ್ಲಿ ಕಾಲವು ನಿತ್ಯ ನಿರಂತರ ಸತ್ಯ. ನಿಲ್ಲದೆ ಸದಾ ಚಲಿಸುತ್ತಿರುವ ಈ ಕಾಲದಲ್ಲಿ ಮನುಷ್ಯ ಬ್ರಹ್ಮಾಂಡದ ಆದಿ ಮತ್ತು ಅಂತ್ಯವನ್ನು ಕಂಡುಹಿಡಿಯಲು ಪ್ರಯತ್ನಪಡುತ್ತಲೇ ಇದ್ದಾನೆ, ಆದರೆ ಕೆಲವೊಮ್ಮೆ ತನಗೆ ಅರಿವಿಲ್ಲದೆ ಕಾಲದಲ್ಲಿ ಬಂಧಿಯಾಗುತ್ತಾನೆ. ದಟ್ಟವಾದ ಕಾಡಿನಲ್ಲಿ ಹೇರಳವಾಗಿ ಆಯುರ್ವೇದ ಸಸ್ಯಗಳು ದೊರಕುವ ಒಂದು ಜಾಗವಿದೆ. ಅದರ ಹೆಸರೇ ಅತೀಂದ್ರಬೆಟ್ಟ. ಈ ಬೆಟ್ಟದ ತಪ್ಪಲಲ್ಲಿ ಸಾವಿರಾರು ವರ್ಷಗಳಿಂದ ಆಯುಷ್ಮಾನ್‌ ಜನಾಂಗದವರು ವಾಸಿಸುತ್ತಿದ್ದಾರೆ. ಅತೀಂದ್ರಬೆಟ್ಟ ಅದೆಷ್ಟು ನಿಗೂಢತೆಗಳನ್ನು ತನ್ನೊಡಲ್ಲಿ ಬಚ್ಚಿಟ್ಟುಕೊಂಡಿದೆ ಎಂದರೆ  ಇಲ್ಲಿನ ನಿಗೂಢತೆಗಳನ್ನು ಹುಡುಕಲು ಬರುವ ಯಾವೊಬ್ಬನೂ ಜೀವಸಹಿತ ಉಳಿದಿಲ್ಲ. ಜ್ಞಾನಮೂರ್ತಿ ಎಂಬ ವಿಜ್ಞಾನಿ ಈ ಬೆಟ್ಟಕ್ಕೆ ಬಂದು ಆಯುಷ್ಮಾನ್ಗಳ ವಿಶ್ವಾಸಗಳಿಸಿ ಅತೀಂದ್ರಬೆಟ್ಟದ ನಿಗೂಢತೆ ಮತ್ತು ಆಯುಷ್ಮಾನ್‌ ಜನಾಂಗದ ಅಗೋಚರತೆಯನ್ನು ಕಂಡುಹಿಡಿಯಲು ಪ್ರಯತ್ನಿಸಿ ನಿಗೂಢವಾಗಿಯೇ ಅಗೋಚರತೆಗೆ ಬಲಿಯಾದ. ಜ್ಞಾನಮೂರ್ತಿಯ ಸಾವನ್ನು ಕಂಡುಹಿಡಿಯಲು ಇವನ ಮಗ ಹರ್ಷ ಮತ್ತದೇ ನಿಗೂಢತೆಯ ಹಿಂದೆ ಬಿದ್ದ. ಜ್ಞಾನಮೂರ್ತಿ ತನ್ನ ಸಾವಿನ ಮುಂಚೆ ಪತ್ತೇದಾರಿ ಚಿದಾನಂದನಿಗೆ ಬರೆದ ಪತ್ರದಲ್ಲಿನ ವಿಷಯಗಳನ್ನು ಇಟ್ಟುಕೊಂಡು ತಂದೆ ಸಾವಿನ ರಹಸ್ಯವನ್ನು ಹುಡುಕುತ್ತಾ ತನ್ನ ಜೀವನವನ್ನೇ ಕಳೆದುಬಿಟ್ಟ. ತನಗೇ ಅರಿವಿಲ್ಲದೆ ಕಾಲದಲ್ಲಿ ಬಂದಿಯಾದ. ಬಂಧನದಿಂದ ಹೊರಬರಲು ಪ್ರಯತ್ನಿಸಿ ಕಾಲದಲ್ಲಿ ಲೀನವಾದ. ಅತೀಂದ್ರಬೆಟ್ಟದ ರಹಸ್ಯ ಯಾವುದು? ಆಯುಷ್ಮಾನರ ಜೊತೆಗಿದ್ದ ಪಂಚವರ್ಣ ಜನಾಂಗ ಯಾವುದು? ಪಂಚವರ್ಣ ಜನಾಂಗದಲ್ಲಿದ್ದ ದಾಸಿಸ್‌ಗಳೆಂದರೆ ಯಾರು? ಈ ಕಾಡುಜನಗಳ ಅಗೋಚರವನ್ನು, ರಹಸ್ಯಗಳನ್ನು ಜ್ಞಾನಮೂರ್ತಿ ಮತ್ತು ಮಗ ಹರ್ಷ ಭೇದಿಸುತ್ತಾರೋ ಇಲ್ಲವೋ ಎಂಬುವುದೇ "ಮುನಿಸಂಚಾರ" ಕಾದಂಬರಿಯ  ಹೂರಣ.

 

About the Author

ಅಶೋಕ
(06 January 1986)

ಲೇಖಕ ಅಶೋಕ ಅವರು ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಹೊಳಲಕೆರೆ (ಹುಟ್ಟೂರು ಶಿವಮೊಗ್ಗ ಜಿಲ್ಲೆಯ ಸಾಗರ) ಗ್ರಾಮದವರು. .ಹೊಳಲಕೆರೆಯಿಂದ ಪ್ರಾರಂಭಗೊಂಡು ದೊಡ್ಡಮೇಟಿಕುರ್ಕೆಯಲ್ಲಿ ಸಾಗಿ ಅರಸೀಕೆರೆಯಲ್ಲಿ ವಿದ್ಯಾಭ್ಯಾಸ  ಪಡೆದರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದು, ‘ಮುನಿಸಂಚಾರ’ ಇವರ  ಮೊದಲನೆ ಕಾದಂಬರಿ.  ...

READ MORE

Related Books