‘ನಾತಿಚರಾಮಿ’ ಕೃತಿಯು ಸಂತೋಷ್ ಕುಮಾರ್ ಮೆಹಂದಳೆ ಅವರ ಕಾದಂಬರಿಯಾಗಿದೆ. ವಿಪರೀತ ಸಂಭಾವಿತರಂತೆ ವೇದಿಕೆಯ ಮೇಲೆ ಮೆರೆಯುತ್ತಾ, ಅಗತ್ಯಕ್ಕೆ ತಕ್ಕಂತೆ ಖಾಸಗಿ ಸಂಗತಿಗಳನ್ನು ಬದಲಾಯಿಸಿಕೊಳ್ಳುವ ಚಾಲಾಕಿತನದ ವ್ಯಕ್ತಿತ್ವ, ಉನ್ನತ ಹುದ್ದೆಯಲ್ಲಿದ್ದೂ, ಚೆಂದವಿದ್ದು, ತನಗೆಂದೂ ಗದರದ ಗಂಡನಾಗಿದ್ದರೂ ಹೆಂಡತಿಗೆ ಬೇಡವಾಗುವ, ಸಾಮಾಜಿಕ ತಾಣಗಳಲ್ಲಿ ಒಳ್ಳೆಯತನದ ಸೋಗು ಹಾಕಿ, ಮತ್ತೆ ಬಣ್ಣಬಿಚ್ಚಿಕೊಳ್ಳುವ ಮನಸ್ಥಿತಿಗಳು ಎಲ್ಲವೂ ಇಲ್ಲಿ ಅಚ್ಚಾಗಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ, ಈ ಪುಸ್ತಕದ ಭಿನ್ನತೆಗೆ ಕಾರಣವಾಗುವ ಅಂಶವೆಂದರೆ, ಸಾಮಾನ್ಯವಾಗಿ ಸ್ತ್ರೀ ಲೋಕದಲ್ಲಿ "ಕಾಮಾಲೆ ಕಣ್ಣಿನವನು" ಎಂದೇ ಹಣೆಪಟ್ಟಿ ಅಂಟಿಸಿಕೊಳ್ಳುವ ಗಂಡಸಿನ ಮನೋಸ್ಥಿತಿಯನ್ನು ಲೇಖಕರು ಬಿಚ್ಚಿಟ್ಟ ಪರಿ. ಬಹುಶಃ ಗಂಡಿನ ಬಗ್ಗೆಯೂ ಈ ರೀತಿ ವಿಶಾಲದೃಷ್ಟಿಕೋನದಿಂದ ನೋಡಬಹುದೆನ್ನುವುದನ್ನು ಅತೀ ಅಪರೂಪಕ್ಕೆ ಎಂಬಂತೆ ತೋರಿಸಿಕೊಟ್ಟ ಪುಸ್ತಕಗಳಲ್ಲಿ ಇದೂ ಒಂದು. ಪುರುಷನೆಂಬ ಹಲಸಿನ ಹಣ್ಣನ್ನು ಮೇಣ ತಾಗಿಸಿಕೊಳ್ಳದೆ ಬಿಡಿಸಿದ್ದೇ ಆದರೆ ಅದರ ಸಿಹಿ ಸವಿದವರಿಗೇ ಗೊತ್ತು ಎನ್ನುವ ಲೇಖಕರು, ಪುರುಷನೇಕೆ ವ್ಯಘ್ರನಾಗುತ್ತಾನೆ, ಹತಾಶನಾಗುತ್ತಾನೆ, ಕುಡಿತಕ್ಕೆ ಅಂಟಿಕೊಳ್ಳುತ್ತಾನೆ, ಇನ್ನೊಬ್ಬಳ ಸಲುಗೆಗೆ ಬೀಳುತ್ತಾನೆ, ಮೌನಕೂಪಕ್ಕೆ ಜಾರುತ್ತಾನೆ ಎಂಬುದಕ್ಕೆಲ್ಲಾ ವಿವರಣೆಗಳನ್ನು ನೀಡುತ್ತಲೇ ಓದುಗರನ್ನು ಹೊಸ ದೃಷ್ಟಿಕೋನಕ್ಕೆ ಒಡ್ಡಿಕೊಳ್ಳುವಂತೆ ಮಾಡಿದ್ದಾರೆ.
ಮನಸ್ಸನ್ನು ತೆರೆದಿಟ್ಟರೆ, ಗಂಡನಿಗೆ, ಹೆಂಡತಿಗೆ, ಪ್ರೇಯಸಿಗೆ, ಪ್ರಿಯಕರನಿಗೆ, ಅಷ್ಟೇ ಏಕೆ ಎಲ್ಲವನ್ನೂ ಮೊನಚು ಕಣ್ಣುಗಳಿಂದ ನೋಡುವ ಸಮಾಜಕ್ಕೂ ಕಲಿಯುವುದು ಬಹಳಷ್ಟಿದೆ. ಇದನ್ನು ಓದಿ ಒಂದಷ್ಟು ಆತ್ಮ ವಿಮರ್ಶೆಗೆ ಒಡ್ಡಿಕೊಂಡರೆ ನಮ್ಮ ಓರೆಕೋರೆಗಳನ್ನು ಕೂಡಾ ಸರಿಪಡಿಸಿಕೊಳ್ಳುವ ಒಂದಷ್ಟು ಪಾಠಗಳು ಕೂಡಾ ಇಲ್ಲಿವೆ.
ಕನ್ನಡ ಪ್ರಮುಖ ಕಾದಂಬರಿಕಾರ, ಅಂಕಣಗಾರ, ಕಥೆಗಾರ, ವೈಜ್ಞಾನಿಕ ಮತ್ತು ಪರಿಸರ ಸಂಬಂಧಿ ಬರಹಗಾರರಲ್ಲಿ ಸಂತೋಷ್ ಮೆಹಂದಳೆಯವರು ಒಬ್ಬರು. ಅವರು ಸಣ್ಣ ಕಥೆಗಳು, ಕಾದಂಬರಿಗಳು, ಸಾಮಾಜಿಕ ಮತ್ತು ವೈಜ್ಞಾನಿಕ ಲೇಖನಗಳು, ಪರಿಸರ ಸಂಬಂಧಿ ಚಿತ್ರ ಲೇಖನಗಳು, ಅಂಕಣ ಬರಹಗಳು, ಪತ್ತೆದಾರಿ ಮತ್ತು ವೈಜ್ಞಾನಿಕ ಕಥಾ ಸಾಹಿತ್ಯ, ಪ್ರವಾಸಿ ಕಥನಗಳು, ಸೈನ್ಸ್ ಫಿಕ್ಷನ್, ಛಾಯಾಗ್ರಹಣ ಮತ್ತು ಅಷ್ಟೆ ಜವಾಬ್ದಾರಿಯುತವಾಗಿ ಪಟ್ಟಾಗಿ ಬರೆಯಬಲ್ಲ ದೈತ್ಯ ಕಸುವಿನ ಸಾಹಿತ್ಯಿಕ ಕಸುಬುದಾರರು. " ತರಂಗ, ಕರ್ಮವೀರ ಸುಧಾ ಪ್ರಜಾವಾಣಿ, ವಿಜಯವಾಣಿ, ಸಂಯುಕ್ತ ಕರ್ನಾಟಕ, ಉದಯವಾಣಿ, ವಿಜಯ ಕರ್ನಾಟಕ, ಓ ಮನಸೇ, ತುಷಾರ, ಮಯೂರ, ಕನ್ನಡ ಪ್ರಭ, ಕಸ್ತೂರಿ, ಉತ್ಥಾನ ಮತ್ತು ಪ್ರತಿ ವರ್ಷದ ...
READ MORE“ಆಕೆಯ ಪ್ರೀತಿ ಅನೈತಿಕ... ಹಾದರವಾಗುತ್ತದೆಯೋ ಹೊರತಾಗಿ ಪ್ರೇಮಿಸಬಲ್ಲ ಹಕ್ಕು ಆಕೆಗೂ ಇದೆ ಎಂಬ ಧ್ವನಿಯೇ ಮೂಡುವುದಿಲ್ಲ” “ಮಕ್ಕಳಾದ ಮಾತ್ರಕ್ಕೆ ಮೆಚ್ಯೂರಿಟಿ ಬರುವಂತಿದ್ದರೆ ಭಾರತದ ನಾರಿಯರೆಲ್ಲ ಜಗದ್ ವಿಖ್ಯಾತಿ ಪಡೆದಿರುತ್ತಿದ್ದರು” “ “ಪ್ರೀತಿ ಪಡ್ಕೊಳ್ಳೋ ವಿಷಯದಲ್ಲಿ ಹೆಣ್ಣಿಗೆ ಧೈರ್ಯ ಜಾಸ್ತಿ, ಅದೇ ಆ ಪ್ರೀತಿನ ಕಳಕೊಳ್ಳೋ ಭಯನು ಅವಳಿಗೇ ಜಾಸ್ತಿ” ಇಂತಹ ಮನಸ್ಸನ್ನ ಕಾಡುವ ವಾಕ್ಯಗಳು ಪ್ರತಿಯೊಂದು ಕಥಾನಕದಲ್ಲಿಯೂ ಇದೆ
ಪ್ರೀತಿಸುವ ಮನಸ್ಸುಗಳಿಗಾಗಿ “ನಾತಿಚರಾಮಿ”
(ಹೆಣ್ಣು ಗಂಡುಗಳ ಖಾಸಗಿ ಬದುಕಿನ ಭಾವನಾತ್ಮಕ ಕದಲಕುವಿಗೆ ಅಕ್ಷರ ರೂಪ ಕೊಡುವ ಪ್ರಯತ್ನ)
ಪ್ರೆಭುವರಿ ೧೪ ಪ್ರೇಮಿಗಳ ದಿನ. ಪ್ರೀತಿ ಪ್ರೇಮ ಸಮಾಜದಲ್ಲಿನ ಸಹಜ ಪ್ರತಿಕ್ರಿಯೆಗಳು. ಅನಾದಿಕಾಲದಿಂದಲ್ಲೂ ಇವತ್ತಿನವರೆಗೂ ಪ್ರೀತಿ ಪ್ರೇಮದ ಬಗ್ಗೆ ಬಂದAತಹ ಸಾಹಿತ್ಯಕ್ಕೆ ಲೆಕ್ಕವಿಲ್ಲ. ಗಂಡು ಹೆಣ್ಣುಗಳ ನಡುವಿನ ಪ್ರೀತಿಗೆ ಹತ್ತು ಹಲವಾರು ರೂಪ.ಇವತ್ತಿನ ಸಾಮಾಜಿಕ ಜಾಲತಾಣಗಳ ನಾಗಲೋಟದಲ್ಲಿ ಪ್ರೀತಿಗೆ ನೂರಾರು ಮುಖ. ಇಬ್ಬರ ನಡುವಿನ ಸಂಬAಧಗಳು ಸಮಾಜಕ್ಕೆ ಒಂದು ರೀತಿಯಾಗಿ ಕಂಡರೆ ನಿಜವಾದ ಅರ್ಥ ಅವರಿಬ್ಬರಿಗೆ ಮಾತ್ರ ಗೊತ್ತಿರಲ್ಲೂ ಸಾದ್ಯ. ಇಂತಹ ಸೂಕ್ಷö್ಮ ವಿಚಾರಗಳನಿಟ್ಟುಕೊಂಡು ಸಂತೋಷಕುಮಾರ ಮೆಹಂದಳೆಯವರು ಪ್ರೇಮಿಗಳ ದಿನಾಚರಣೆಗೆ ಸರಿಯಾಗಿ ಪ್ರೇಮವನ್ನು ಧ್ಯಾನಿಸುವವರಿಗಾಗಿ ಒಂದು ಉತ್ತಮ ಪುಸ್ತಕ “ನಾತಿಚರಾಮಿ” ನೀಡಾದ್ದಾರೆ. ಮನಸ್ಸುಗಳ ಮಾತಿನ ಗುಚ್ಛವಾಗಿರುವ ನಾತಿಚರಾಮಿ ಮೆಹಂದಳೆಯವರ ೧೭ನೇ ಕೃತಿ.”ಪ್ರೀತಿ ಎಂದರೆ ದಾಂಪತ್ಯ ದ್ರೋಹವಾ?” ಎನ್ನುವ ಮನಸ್ಸಿನ ಮಾತಿನೊಂದಿಗೆ ಪ್ರಾರಂಭವಾಗುವ ಕೃತಿ “ಮಳೆ ಮತ್ತು ನೀನು ಎರಡು ಧೋ.. ಧೋ” ... ಅನ್ನುವ ಮನಸ್ಸಿನ ನಿರಾಳತೆಯೊಂದಿಗೆ ಕೊನೆಯಾಗುತ್ತದೆ. ಈ ಒಂದು ಕೃತಿ ಓದಿ ಮುಗಿಸಿದಾಗ ನಾವು ಪ್ರತಿ ಪ್ರೇಮದ ಬಗ್ಗೆ ಇಟ್ಟುಕೊಂಡಿರುವ ಕಟ್ಟುಕೊಂಡಿರುವ ಭ್ರಮೆಯೆಂಬ ಗೊಡೆಗಳು ಕಳಚಿಬಿಳುತ್ತದೆ. ಮನಸ್ಸು ನಿಜ ಪ್ರೀತಿ ಹುಡುಕಲು ಪ್ರಾರಂಭಿಸುತ್ತದೆ.ಗAಡು ಮತ್ತು ಹೆಣ್ಣು ಅವರವರ ಮನಸ್ಸಿನ ದೃಷ್ಠಿಕೋನದಿಂದ ಪ್ರೀತಿಯನ್ನು ಹೇಗೆ ಕಾಣುತ್ತಾರೆ ಅನ್ನುವದನ್ನು ಹೌದು ಹೌದು ಅಂತ ಮನಸ್ಸಿಗೆ ಅನ್ನಿಸುವಂತೆ ಬರೆದಿದ್ದಾರೆ. “ಎಲ್ಲ ಮರೆತು ಕಾಮದಲ್ಲಿ ತೊಡಗುವುದು ಬಹು ಸುಲಭ.ಆದರೆ ಅದಾದ ನಂತರವೂ ದಿನವಿಡೀ ಒಬ್ಬರನ್ನೊಬ್ಬರು ಭರಿಸೋದಿದೆಯಲ್ಲ ಅದು ನಿಜವಾದ ಟೆಸ್ಟು” ವಾಕ್ಯದೊಂದಿಗೆ ಓದಲು ತೆರೆದುಕೊಳ್ಳುವ ಕೃತಿಯಲ್ಲಿ ಮನಸ್ಸನ್ನು ಕಾಡುವ ಸಾಕಷ್ಟು ಭಾವನಾತ್ಮಕ, ಸಂಗತಿಗಳಿವೆ. “ಆಕೆಯ ಪ್ರೀತಿ ಅನೈತಿಕ... ಹಾದರವಾಗುತ್ತದೆಯೋ ಹೊರತಾಗಿ ಪ್ರೇಮಿಸಬಲ್ಲ ಹಕ್ಕು ಆಕೆಗೂ ಇದೆ ಎಂಬ ಧ್ವನಿಯೇ ಮೂಡುವುದಿಲ್ಲ” “ಮಕ್ಕಳಾದ ಮಾತ್ರಕ್ಕೆ ಮೆಚ್ಯೂರಿಟಿ ಬರುವಂತಿದ್ದರೆ ಭಾರತದ ನಾರಿಯರೆಲ್ಲ ಜಗದ್ ವಿಖ್ಯಾತಿ ಪಡೆದಿರುತ್ತಿದ್ದರು” “ “ಪ್ರೀತಿ ಪಡ್ಕೊಳ್ಳೋ ವಿಷಯದಲ್ಲಿ ಹೆಣ್ಣಿಗೆ ಧೈರ್ಯ ಜಾಸ್ತಿ, ಅದೇ ಆ ಪ್ರೀತಿನ ಕಳಕೊಳ್ಳೋ ಭಯನು ಅವಳಿಗೇ ಜಾಸ್ತಿ” ಇಂತಹ ಮನಸ್ಸನ್ನ ಕಾಡುವ ವಾಕ್ಯಗಳು ಪ್ರತಿಯೊಂದು ಕಥಾನಕದಲ್ಲಿಯೂ ಇದೆ. ಈ ಕೃತಿಯಲ್ಲಿ ಬರುವ ೨೨ ತಲೆಬರಹಗಳ ಕಥಾನಕದಲ್ಲಿ ಮಹಿಳೆ ಮತ್ತು ಪುರುಷರು ಪ್ರೀತಿಯಲ್ಲಿ ಅನುಭವಿಸಿದ ಸಿಹಿ ಕಹಿ ಅನುಭವಗಳನ್ನು ಸರಿಸಮಾನವಾಗಿ ಭಾವನಾತ್ಮಕವಾಗಿ ತೆರೆದಿರಿಸಿದ್ದಾರೆ. ಅತಿಯಾದ ಒಳ್ಳೆಯತನದಿಂದ ಪ್ರೀತಿ ಕಳೆದುಕೊಳ್ಳುವ ಗಂಡಸು, ಅದಮ್ಯವಾಗಿ ಪ್ರೀತಿ ವ್ಯಕ್ತಪಡಿಸಿದ ತಪ್ಪಿಗೆ ಹೆಸರುಕೆಡಿಸಿಕೊಳ್ಳುವ ಹೆಣ್ಣು, ಪ್ರೀತಿ ಮತ್ತು ಕಾಮದ ನಡುವಿನ ತೆಳುವಾದ ಅಂತರವನ್ನು ಅರ್ಥೈಸಿಕೊಳ್ಳದ ಸಮಾಜ ಇದೆಲ್ಲವನ್ನು ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಘಟನೆಗಳ ಆಧರಿಸಿ ಈ ಕೃತಿ ರಚನೆಯಾಗಿದೆ ಎಂದು ಹೇಳಬಹುದು. ಕೃತಿ ಓದುತ್ತ ಹೋದ ಹಾಗೇ ನಮ್ಮ ಸುತ್ತ ಮುತ್ತ ಇಂತಹದೊAದು ನಡೆಯುತ್ತಿದೆಯಲ್ಲಾ ಅನಿಸತೊಡಗುತ್ತದೆ. ”ಅರ್ಥೇಚ ಧಂಏðಚ ಕಾಮೇಚ” ಕಥಾನಕದಲ್ಲಿ ಬರುವ ಮೂರ್ತಿ ಪಾತ್ರಧಾರಿ ಪ್ರತಿ ಪುರುಷನಲ್ಲಿಯೂ ಇದ್ದಾನೆ. ಅದೇ ರೀತಿ ಈ ಕೃತಿಯಲ್ಲಿ ಬರುವ ನಾತಿಚರಾಮಿ ಪ್ರತಿ ಮಹಿಳೆಯಲ್ಲಿಯೂ ಇರುತ್ತಾಳೆ ಅನ್ನುವದನ್ನು ಮರೆಯಬಾರದು.ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿದ್ದಾರೆ ಅನ್ನುವ ಕಾಲಘಟ್ಟದಲ್ಲಿ ಬಿಡುಗಡೆಯಾದ ಒಂದೇ ವಾರಕ್ಕೆ ಎರಡನೇ ಮುದ್ರಣ ಕಾಣುತ್ತಿರವ ನಾತಿಚರಾಮಿ ಕೃತಿ ೧೮೪ ಪುಟಗಳನ್ನು ಹೊಂದಿದು ಸಾಹಿತ್ಯಲೋಕ ಪಬ್ಲಿಕೇಷನ್ ಪ್ರಕಟಿಸಿದೆ. ಪ್ರೀತಿಸುವ ಮನಸ್ಸುಗಳಿಗಾಗಿ “ನಾತಿಚರಾಮಿ”
==================================
ವಿನಾಯಕ ಎಲ್ ಪಟಗಾರ, ಬೆಟ್ಕುಳಿ,ಕುಮಟಾ(ಉ.ಕ)
೯೫೩೮೨೩೯೦೦೩