‘ವಿವಶ’ ಗುರುರಾಜ್ ಸನಿಲ್ ಅವರ ಕಾದಂಬರಿಯಾಗಿದೆ; ಶ್ರೀ ಗುರುರಾಜ್ ಸನಿಲ್ ಅವರೊಬ್ಬ ಖ್ಯಾತ ಉರಗತಜ್ಞ ಮತ್ತು ಸಾಹಿತಿಯಾಗಿ ನಾಡಿನಾದ್ಯಂತ ಪ್ರಸಿದ್ಧರು. ಇವರು ತಮ್ಮ ವಿಶೇಷ ಜೀವನಾನುಭವಗಳಿಂದ ಈವರೆಗೆ ಹತ್ತು ವಿಭಿನ್ನ ಕೃತಿಗಳನ್ನು ಬರೆದು ಕನ್ನಡ ಸಾಹಿತ್ಯಲೋಕಕ್ಕೆ ಮಹತ್ವದ ಕೊಡುಗೆ ನೀಡಿದವರು. 'ಹಾವು ನಾವು (ಪರಿಷ್ಕೃತ ಮೂರು ಆವೃತ್ತಿಗಳು)' ದೇವರಹಾವು ನಂಬಿಕೆ, ವಾಸ್ತವ' 'ನಾಗಬೀದಿಯೊಳಗಿಂದ' 'ಹುತ್ತದ ಸುತ್ತಮುತ್ತ' 'ವಿಷಯಾಂತರ' 'ಕಮರಿದ ಸತ್ಯಗಳು ಚಿಗುರಿದ ಸುದ್ದಿಗಳು' 'ನಾಗಬನವೆಂಬ ಸ್ವರ್ಗೀಯ ತಾಣ' ಎಂಬ ಕೃತಿಗಳೊಂದಿಗೆ ಕಥೆಗಾರರೂ ಆಗಿ 'ಗುಡಿ ಮತ್ತು ಬಂಡೆ' ಕಥಾಸಂಕಲನ ಹಾಗೂ 'ವಿವಶ' ಮತ್ತು 'ಆವರ್ತನ' ಕಾದಂಬರಿಗಳನ್ನು ಬರೆದು ಕಾದಂಬರಿಕಾರಾಗಿಯೂ ಗುರುತಿಸಿಕೊಂಡಿದ್ದಾರೆ. ಹಸಿರು ಪರಿಸರದ ಕುರಿತು ಅಪಾರ ಕಾಳಜಿಯಿಂದ ಹುಟ್ಟಿಕೊಂಡ 'ನಮ್ಮ ಮನೆ ನಮ್ಮ ಮರ' ಎಂಬ ಅಭಿಯಾನ ತಂಡದ ಮುಖ್ಯ ಸದಸ್ಯರಾಗಿರುವ ಶ್ರೀಯುತರು ಈವರೆಗೆ 15000ಕ್ಕೂ ಮಿಕ್ಕ ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ. ಕಳೆದ 38 ವರ್ಷಗಳಿಂದ 26 ಸಾವಿರಕ್ಕೂ ಮಿಕ್ಕ ಹಾವುಗಳನ್ನು ಸಂರಕ್ಷಿಸುತ್ತ ಬಂದ ಸಂದರ್ಭಗಳಲ್ಲಿ ಹದಿಮೂರು ಬಾರಿ ವಿಷದ ಹಾವುಗಳ ಕಡಿತಕ್ಕೂ ಒಳಗಾಗಿ ಒಮ್ಮೆ ಕೆಲವು ದಿನಗಳ ಕಾಲ 'ಕೋಮಾ' ಸ್ಥಿತಿಯಲ್ಲಿದ್ದು ಬಂದಿದ್ದರೂ ಧೃತಿಗೆಡದೆ ಪರಿಸರ ಮತ್ತು ಉರಗ ಜೀವಿಗಳ ಕುರಿತು ಜನಜಾಗ್ರತಿ ಮೂಡಿಸುತ್ತ ಪ್ರಸ್ತುತ ಉಡುಪಿಯ ಪುತ್ತೂರಿನಲ್ಲಿ ವಾಸವಿದ್ದಾರೆ.
ಲೇಖಕ ಗುರುರಾಜ್ ಸನಿಲ್ ಅವರು ಮೂಲತಃ ಉಡುಪಿ ಜಿಲ್ಲೆಯ ತೆಂಕುಪೇಟೆಯವರು. ತಂದೆ ಶೇಷಪ್ಪ, ತಾಯಿ ಸುಂದರಿ. ಪ್ರಾಥಮಿಕ ಶಿಕ್ಷಣ ಉಡುಪಿಯ ಕಡಿಯಾಳಿ ಶಾಲೆಯಲ್ಲಿ ಮತ್ತು ಪ್ರೌಢ ವಿದ್ಯಾಭ್ಯಾಸವನ್ನು ಮುಂಬೈ ಪೋರ್ಟ್ ಹೈಸ್ಕೂಲಿನಲ್ಲೂ ಪೂರೈಸಿದರು. ಹವ್ಯಾಸದೊಂದಿಗೆ ಇವರ ಉರಗ ತಜ್ಞರು. 25 ಸಾವಿರಕ್ಕೂ ಅಧಿಕ ಹಾವುಗಳನ್ನು ಹಿಡಿದ ದಾಖಲೆ ಇವರದ್ದು. ಹಾವಿನ ಮೊಟ್ಟೆಗಳನ್ನು ಸಂಗ್ರಹಿಸಿ, ಕಾವು ನೀಡಿ ಮರಿಗಳನ್ನು ಮಾಡಿದ ನಂತರ ಅವುಗಳನ್ನು ಕಾಡಿಗೆ ಬಿಟ್ಟ ಪ್ರಸಂಗಗಳೂ ಇವೆ. "ನಮ್ಮ ಮನೆ ನಮ್ಮ ಮರ ಸಂಸ್ಥೆಯೊಂದಿಗೆ ಈವರೆಗೆ 10ಸಾವಿರಕ್ಕೂ ಅಧಿಕ ಗಿಡಗಳನ್ನು ಬೆಳೆಸಿದ್ದಾರೆ. ಕೃತಿಗಳು: ಹಾವು ನಾವು , ಹಾವು ನಾವು, ದೇವರ ಹಾವು : ನಂಬಿಕೆ ...
READ MORE