ಕೌಟುಂಬಿಕ ಸಂಬಂಧಗಳ ಜೊತೆ ಜೊತೆಗೇ, ಸಮಾಜದಲ್ಲಿ ಧರ್ಮ, ಜಾತಿಗಳ ಹೆಸರಲ್ಲಿ ಬೇರ್ಪಡುವ ಮನಸ್ಸುಗಳನ್ನು ಜೊತೆಗೂಡಿಸುವ ಹಂಬಲಿಕೆ ಈ ಕಾದಂಬರಿಯಲ್ಲಿದೆ. ಒಂದು ಮನೆತನದ ಕತೆಯಾಗಿ ಆರಂಭಗೊಳ್ಳುವ ನಿರೂಪಣೆ, ಜಾತಿ, ಧರ್ಮಗಳಾಚೆಗೆ ವಿಸ್ತಾರಗೊಂಡು ಸಕಲ ಮನುಷ್ಯರ ಕತೆಯಾಗಿ ನಮ್ಮನ್ನು ಒಳಗೊಳ್ಳುತ್ತದೆ. ಸಿನಿಮೀಯ ರೀತಿಯಲ್ಲಿ ಕತೆಯನ್ನು ನಿರೂಪಿಸುವ ಮೂಲಕ ಎಲ್ಲ ವರ್ಗಗಳಿಗೂ ಹತ್ತಿರವಾಗುವ ರೀತಿಯಲ್ಲಿ ಕತೆಯನ್ನು ನಿರೂಪಿಸುತ್ತಾ ಹೋಗುತ್ತಾರೆ. ಸರಳ ಭಾಷೆ ಕಾದಂಬರಿಯ ಇನ್ನೊಂದು ಹೆಗ್ಗಳಿಕೆ. ಕೌಟುಂಬಿಕ ಬಂಧವನ್ನು ಗಟ್ಟಿ ಮಾಡುವ ಪ್ರಯತ್ನದಲ್ಲಿ ವಿದ್ಯಾವಂತಳಾದ ರೊಹರಾ ಪಾತ್ರವನ್ನು ತೀರಾ ಕಠಿಣವಾಗಿಸುತ್ತಾರೆ ಅನ್ನಿಸುತ್ತದೆ.
ಮುಹಮ್ಮದ್ ಕುಳಾಯಿ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು. ಕೃತಿಗಳು: ಕಾಡಂಕಲ್ ಮನೆ (ಕಾದಂಬರಿ), ನನ್ನೊಳಗಿನ ನಾನು: ಬಿ.ಎ. ಮೊಹಿನುದ್ದೀನ್ ಆತ್ಮಕಥನ, ಚೌಟರ ಮಿತ್ತಬೈಲ್ ಯಮುನಕ್ಕ (ಕಾದಂಬರಿ) ...
READ MORE