ಸಾಮ್ರಾಟ

Author : ತ್ವಯ್ಯಿಬ್‌ ಸುರಿಬೈಲ್‌

Pages 156

₹ 200.00




Year of Publication: 2025
Published by: ಆಕ್ರತಿ ಆಶಯ ಪಬ್ಲಿಕೇಶನ್‌
Address: Maximus Complex Light House Hill road Mangaluru
Phone: 7019225774

Synopsys

‘ಸಾಮ್ರಾಟ’ ಮುಹಮ್ಮದ್ ತ್ವಯ್ಯಿಬ್ ಸುರಿಬೈಲ್ ಅವರ ಕಾದಂಬರಿಯಾಗಿದೆ. ಸಾಮಾನ್ಯವಾಗಿ ಉದಯೋನ್ಮುಖ ಸಾಹಿತ್ಯವು ಚುಟುಕು, ಹನಿಗವನ, ಕವನ, ಸಣ್ಣಕತೆಗಳಿಂದ ತೊಡಗುತ್ತದೆ. ಆದರೆ ತಯ್ಯಬ್ ಮೊದಲ ಯತ್ನದಲ್ಲೇ ಕಾದಂಬರಿಯನ್ನು ಬರೆದಿರುವುದು ಅಚ್ಚರಿಯ ಸಂಗತಿ. ತಯ್ಯಬ್ ಚಾರಿತ್ರಿಕ ವಸ್ತುವನ್ನು ಆಧರಿಸಿ ಈ ಕಾದಂಬರಿಯನ್ನು ರಚಿಸಿದ್ದಾರೆ. ಇದು ಫ್ಯಾಂಟಿಸಿಯಿಂದ ಕೂಡಿದೆ. ಪ್ರಕೃತಿಯ ವರ್ಣನೆ ದಟ್ಟವಾಗಿದೆ. ಹದಿಹರೆಯಕ್ಕೆ ಪೂರಕ ಎಂಬಂತೆ ಪ್ರೀತಿ- ಪ್ರೇಮದ ಸ್ಪರ್ಶವಿದೆ. ಯುದ್ಧದ ಭೀಕರತೆಯಿದೆ. ತಕ್ಕಡಿಯಲ್ಲಿ ತೂಕ ಹಾಕಿದಂತೆ ಸೋಲು-ಗೆಲುವನ್ನು ಸಮಾನವಾಗಿ ಕಾಣುವ ಪ್ರಯತ್ನ ಮಾಡಲಾಗಿದೆ. ರಾಜ-ರಾಣಿಯರ ಮಾನವೀಯ ಮುಖವೂ ಇದೆ. ಕೆಲವು ಕಡೆ ಪಾತ್ರಗಳ ಮೂಲಕ ಹೇಳಬಹುದಾದ ಸಂಗತಿಗಳನ್ನು ತಯ್ಯಬ್ ಸ್ವತಃ ಹೇಳಿಕೊಂಡಿದ್ದರೂ ಕೂಡ ಕಾದಂಬರಿಯ ಪ್ರತೀ ಅಧ್ಯಾಯದ ಆರಂಭ ಮತ್ತು ಅಂತ್ಯವು ಸಾಮಾನ್ಯ ಓದುಗರನ್ನು ಸೆಳೆಯುವಂತಿದೆ.

Related Books