ಪಂಚ ಮ ಗಳ ನಡುವೆ

Author : ಸತ್ಯಕಾಮ (ಅನಂತ ಕೃಷ್ಣಾಚಾರ್ಯ ಶಹಾಪುರ)

Pages 173

₹ 100.00




Year of Publication: 2010
Published by: ಐಬಿಎಚ್‌ ಪ್ರಕಾಶನ

Synopsys

ಪಂಚ’ಮ’ಗಳ ನಡುವೆ – ಸತ್ಯಕಾಮರ ಈ ಕೃತಿಯು  ತಂತ್ರಶಾಸ್ತ್ರಕ್ಕೆ ಸಂಬಂಧಿಸಿದ್ದಾಗಿದೆ. ಸ್ವತಂತ್ರ ಭಾವನೆಯ ಮೂಲದ್ರವ್ಯದಿಂದ ಮೈದಾಳಿದ ವ್ಯವಸ್ಥೆ ’ತಂತ್ರ’ ಸ್ವಾತಂತ್ಯ್ರಕ್ಕೆ ಗತಿಶೀಲತೆಯೇ ಗುಣಧರ್ಮವಾಗಿದೆ. ನಿರ್ಭಯತೆ, ಸ್ವಾತಂತ್ಯ್ರಗಳ ತ್ರಿಕೋಣವಾಗಿದೆ. ತಂತ್ರವನ್ನು ಸಂಪ್ರದಾಯ ಎಂದು ಕರೆದಾಗ ಅದರ ಸ್ವಾತಂತ್ಯ್ರವನ್ನು ಮೊಟಕು ಮಾಡುತ್ತೇವೆ’. ಎಂಬ ನಿಲುವನ್ನು ಈ ಕೃತಿಯ ಮೂಲಕ ಸತ್ಯಕಾಮರು ತಿಳಿಸಿದ್ದಾರೆ. ಮದ್ಯ, ಮಾಂಸ, ಮೈಥುನ, ಮಂತ್ರ, ಮುದ್ರಾ ಇವು ತಂತ್ರಶಾಸ್ತ್ರ ಪ್ರಯೋಗಕ್ಕೆ ಅವಶ್ಯವಾದ ಮುಖ್ಯವಾದ ಐದು ಸಂಗತಿಗಳು ಇವುಗಳ ಸೂಕ್ಷ್ಮ ಅವಲೋಕನವನ್ನು ಈ ಕೃತಿ ಮಾಡುತ್ತದೆ. ಓದುಗರ ಸಂಯಮಕ್ಕೆ ಧಕ್ಕೆ ಬಾರದಂತೆ ಧೈರ್ಯ ಸಾಹಸ ಸಂಯಮಗಳ ಆಳವನ್ನು ಈ ಕೃತಿ ತೆರೆದಿಡುವ ಪ್ರಯತ್ಮ ಮಾಡುತ್ತದೆ. 

ಭಾರತೀಯ ತತ್ವಶಾಸ್ತ್ರದ ಒಂದು ಭಾಗವಾದ ತಾಂತ್ರಿಕ ವಿದ್ಯೆಯನ್ನು ಆಳವಾಗಿ ಅಧ್ಯಯನ ಮಾಡಿದವರು ’ಸತ್ಯಕಾಮ’. ತಂತ್ರವನ್ನು ಅನುಸರಿಸಿ, ಆಚರಿಸಿ, ಅನುಭವಿಸಿ ಬರೆದವರಲ್ಲಿ  ಅವರು ಒಬ್ಬರು. ತಂತ್ರವನ್ನು ಆಧರಿಸಿದ ಸಾಹಿತ್ಯ ವಿರಳ ಎನ್ನುವ ಕಾರಣಕ್ಕೆ ಹೀಗೆ ಮಾಡಿದರೋ ಅಥವಾ ಅನುಭವ ದ್ರವ್ಯವಾಗಿದ್ದ ಕಾರಣಕ್ಕೆ ಅದು ಅವರ ಕೃತಿಗಳಲ್ಲಿ ಮೂಡಿಬಂತೋ ತಿಳಿಯದು. ಆದರೆ ತಂತ್ರ ವಿದ್ಯೆಯನ್ನು ಅನುಸರಿಸಿ ಅವರು ರಚಿಸಿದ ಕೃತಿಗಳನ್ನು ಕನ್ನಡ ಜ್ಞಾನವಲಯವನ್ನು ಮತ್ತೊಂದು ಬದಿಯಲ್ಲಿ ಹಿಗ್ಗಿಸಿವೆ ಎನ್ನುವುದಂತೂ ಸತ್ಯ. ’ಪಂಚ 'ಮ' ಗಳ ನಡುವೆ’ ಕೃತಿ ಅವರ ತಂತ್ರದರ್ಶನದ ಫಲ. ತಂತ್ರ ಎನ್ನುವುದು ನಂಬುಗೆ. ನಂಬುವುದು ಬಿಡುವುದು ಓದುಗರಿಗೆ ಬಿಟ್ಟಿದ್ದು. ಆದರೆ ಆ ಕುರಿತು ಹೇಳುವುದನ್ನು ನಿಲ್ಲಿಸಲಾರೆ ಎಂಬ ಧಾಟಿಯಲ್ಲಿ ಅವರು ಕೃತಿಯನ್ನು ಮಂಡಿಸಿದ್ದಾರೆ. 

ಪಂಚ’ಮ’ಗಳ ನಡುವೆ ಬರಿ ತಂತ್ರಶಾಸ್ತ್ರದ ಪುಸ್ತಕವಾಗಿರದೇ ಶ್ರೇಷ್ಠ ಸಾಹತ್ಯ ಗ್ರಂಥದ ಸಾಲಿಗೂ ಸೇರುವಂತದ್ದು. ಓದುಗರಲ್ಲಿ ಕುತೂಹಲವನ್ನು ಹುಟ್ಟಿಸುತ್ತದೆ. ಚಿಕ್ಕ ಚಿಕ್ಕ ಮಾತುಗಳು, ಅಲಂಕಾರಿಕ ವಾಕ್ಯಗಳು, ರಸವತ್ತಾದ ವರ್ಣನೆಗಳು. ನಡು ನಡುವೆ ಸಂಸ್ಕೃತ ಶ್ಲೋಕಗಳು ಇವೆ.

About the Author

ಸತ್ಯಕಾಮ (ಅನಂತ ಕೃಷ್ಣಾಚಾರ್ಯ ಶಹಾಪುರ)
(02 March 1920 - 20 October 1998)

’ಸತ್ಯಕಾಮ’ ಎಂಬುದು ಅನಂತ ಕೃಷ್ಣಾಚಾರ್ಯ ಶಹಾಪುರ ಅವರ ಕಾವ್ಯನಾಮ. ತಮ್ಮ ಕಾದಂಬರಿ ಹಾಗೂ ತಂತ್ರವಿದ್ಯೆ, ಕೃಷಿಯ ಮೂಲಕ ನಾಡಿನ ಮನೆ ಮಾತಾದವರು ’ಸತ್ಯಕಾಮ’. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಗಲಗಲಿಯಲ್ಲಿ 1920ರ ಮಾರ್ಚ್ 2ರಂದು ಜನಿಸಿದರು. (ಕೆಲವು ಕಡೆ ಏಪ್ರಿಲ್ 16 ಎಂದು ದಾಖಲಾಗಿದೆ.)  ಆರಂಭಿಕ ಶಿಕ್ಷಣವನ್ನು ಗಲಗಲಿಯಲ್ಲಿ ಪಡೆದ ಅವರು ಮುಲ್ಕಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಶಾಲೆಯ ಗೊಡವೆಗೇ ಹೋಗದೆ ಒಂದು ವರ್ಷ ಗಲಗಲಿಯಲ್ಲಿಯೇ ಕಳೆದರು. 1935ರಲ್ಲಿ ಬಾಗಲಕೋಟೆಯ ಸಕ್ರಿ ಹೈಸ್ಕೂಲಿಗೆ ಸೇರಿದರಾದರೂ ಓದು ಮುಂದುವರಿಸಲಿಲ್ಲ. ಭಾರತದಲ್ಲಿ ಉಪ್ಪಿನ ಸತ್ಯಾಗ್ರಹ ನಡೆಯುತ್ತಿದ್ದ 1930-31ರಲ್ಲಿ ಬಾಲಕ ಅನಂತ ...

READ MORE

Related Books