ರೂಪಾಂತರ

Author : ಗಿರಿ ಹೆಗ್ಡೆ

Pages 98

₹ 125.00




Published by: ಋತುಮಾನ ಟ್ರಸ್ಟ್
Address: ಎಫ್-3, ಎ ಬ್ಲಾಕ್, ಶಾಂತಿನಿಕೇತನ ಅಪಾರ್ಟ್ಮೆಂಟ್, ಶಾಂತಿನಿಕೇತನ ಬಡಾವಣೆ, ಅರೆಕೆರೆ, ಬನ್ನೇರುಘಟ್ಟ ರಸ್ತೆ, ಬೆಂಗಳೂರು- 560076.
Phone: 9480009997

Synopsys

`ರೂಪಾಂತರ’ ಗಿರಿ ಅವರ ಕೃತಿಯಾಗಿದೆ. ಅತ್ಯಂತ ಕಿರಿದಾದ ವಿಸ್ತೀರ್ಣದಲ್ಲಿ ಇಡೀ ಮಾನವ ಕುಲದ ಸಂವೇದನೆಯನ್ನು ಕಟ್ಟಿಕೊಡುವ, ಮನುಷ್ಯನ ಮೂಲಭೂತ ಅಸ್ತಿತ್ವವಾದವನ್ನು ಇದು ಪ್ರಶ್ನಿಸುತ್ತದೆ. ಕಾದಂಬರಿ ಮೂಡಿ ಬಂದಿರುವುದು ಕೆಲವೇ ಪುಟಗಳಲ್ಲಾದರೂ ಅದು ವಿಸ್ತರಿಸುವ ಸಾಧ್ಯತೆಗಳು ಅನಂತವಾದುದಾಗಿದೆ. ಇಂದಿಗೆ ನಾವು ಕಾಣುತ್ತಿರುವ ಜಾಗತಿಕ ಮಟ್ಟದ ತವಕ ತಲ್ಲಣಗಳನ್ನು ಸುಮಾರು ನೂರು ವರ್ಷಗಳ ಹಿಂದೆಯೇ ಗ್ರಿಗೋರ್ ಸಾಂಸನ ಮೂಲಕ ಕಾಫ್ಕ ತೆರೆದಿಡುತ್ತಾನೆ. ಫ್ರಾನ್ಸ್ ಕಾಫ್ಕ ಇಲ್ಲಿ ಅಸ್ತಿತ್ವದ ಅಸಂಬದ್ಧತೆ, ಆಧುನಿಕ ಬದುಕಿನಲ್ಲಿನ ಪರಕೀಯ ಭಾವ, ಸರ್ವಾಧಿಕಾರದ ಕ್ರೌರ್ಯದ ಸುತ್ತ ಕೌಶಲ್ಯಪೂರ್ಣವಾಗಿ ಬಲೆ ಹೆಣೆಯುತ್ತಾ ಹುಳುವಾಗಿ ರೂಪಾಂತರಗೊಂಡ ಮುಖ್ಯ ಪಾತ್ರ ಗ್ರಿಗೋರ್ ಸಾಂಸನ ಮನುಷ್ಯತ್ವದ ಹುಡುಕಾಟ, ಒದ್ದಾಟದ ಕತೆಯನ್ನು ಹೇಳುತ್ತಾನೆ.

About the Author

ಗಿರಿ ಹೆಗ್ಡೆ

‘ಗಿರಿ ಹೆಗ್ಡೆ ಅವರು ಮೂಲತಃ ಮಲೆನಾಡಿನ ಸಾಗರ ತಾಲೂಕಿನ ಗೋಟಗಾರು ಹಳ್ಳಿಯವರು. ಮೈಸೂರು ವಿಶ್ವವಿದ್ಯಾಲಯದಿಂದ ಮನೋವಿಜ್ಞಾನದಲ್ಲಿ ಎಂ.ಎ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಡಿ.ಎಂ.ಎಸ್.ಪಿ. ಪೂರೈಸಿದ್ದಾರೆ. ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಲ್ಲಿ ಮನೋವಿಜ್ಞಾನದ ಅಧ್ಯಾಪಕರಾಗಿದ್ದರು. 1970 ರಲ್ಲಿ ಅಮೇರಿಕಕ್ಕೆ ಹೋಗಿ ಸದರ್ನ್ ಇಲನಾಯ್ ಯೂನಿವರ್ಸಿಟಿಯಲ್ಲಿ ವಾಕ್ ಶ್ರವಣ ವಿಜ್ಞಾನದಲ್ಲಿ ಪಿ. ಹೆಚ್.ಡಿ ಪದವಿ ಪಡೆದರು. ಕ್ಯಾಲಿಪೋರ್ನಿಯಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿ, outstanding professor ಎಂಬ ಮನ್ನಣೆಗೆ ಪಾತ್ರರಾಗಿ, 30 ವರ್ಷ ಸೇವೆ ಸಲ್ಲಿಸಿ, ಸದ್ಯ ನಿವೃತ್ತರು. 25ಕ್ಕೂ ಹೆಚ್ಚು ವೈಜ್ಞಾನಿಕ ಮತ್ತು ತಾಂತ್ರಿಕ ಪುಸ್ತಕಗಳನ್ನು ಬರೆದಿದ್ದು, ಪ್ರಸ್ತುತ ಕ್ಯಾಲಿಪೋರ್ನಿಯಾದ ಕ್ಲೋವಿಸ್ ಎಂಬ ಪಟ್ಟಣದಲ್ಲಿ ವಾಸವಿದ್ಧಾರೆ. ...

READ MORE

Related Books