ʼಅಭಿನಂದನೆʼ ಸಾಮಾಜಿಕ ಕಾದಂಬರಿಯನ್ನು ಲೇಖಕಿ ಸಾಯಿಸುತೆ ಅವರು ರಚಿಸಿದ್ದಾರೆ. ಈ ಕೃತಿಯ ಕುರಿತು ಲೇಖಕಿ ಸಾಯಿಸುತೆ, ‘ನಂಬುಗೆ ಬದುಕಿನ ನೆಲೆಗಟ್ಟು, ಅದಕ್ಕೊಂದು ಚೌಕಟ್ಟು ಪ್ರೀತಿಯ ಸೆಲೆ. ಇಲ್ಲಿ ನಂಬುಗೆಯೆ ಭಕ್ತಿಯಾಗುತ್ತದೆ. ನಂಬುಗೆಯೆ ಭಯವಾಗುತ್ತದೆ. ಅದೇ ಬದುಕಿನ ಬಂಧನವಾಗುತ್ತದೆ. ಇಲ್ಲಿ ರಾಗ ಅನುರಾಗಗಳು ಇದ್ದಂತೆ, ಬದುಕಿಗೆ ಸ್ವರ ಅಪಸ್ವರಗಳು ಕೂಡ ಇರುತ್ತದೆ. ಅಪಸ್ವರದ ಎಳೆ ಇಡೀ ಬದುಕನ್ನು ಸರ್ವನಾಶವಾಗಿಸಿ ಬಿಡುತ್ತದೆ. ಮನಗಳಲ್ಲಿ ಅರಳಿದ ಮಲ್ಲಿಗೆ ಬಾಡಿಸಿ ಬಿಡುತ್ತದೆ. ಇಲ್ಲಿ ಎಲ್ಲ ಆಕರ್ಷಣೆಗಳು ಒಂದು ವಿಶಾಲಾರ್ಥವಾಗಿ ಗೋಚರಿಸುತ್ತದೆ. ಇದಕ್ಕೆ ಕಾರಣರಾದ ವ್ಯಕ್ತಿಗಳನ್ನ ದ್ವೇಷಿಸುವುದೇ ಚಾರುಲತಾ ಅಂಥವರಿಗೆ ಸಾಧ್ಯವಾಗಬಹುದು ಎಂದು ಹೇಳುತ್ತಾರೆ..
ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ನಂತರದಲ್ಲಿ ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ಬೆಳೆಸಿಕೊಂಡ ...
READ MORE