ಲೇಖಕ ಗಿರಿಮನೆ ಶ್ಯಾಮರಾವ್ ಅವರ ಮನೋವೈಜ್ಞಾನಿಕ ಕಾದಂಬರಿಗಳ ಸರಣಿಯ ಎರಡನೇ ಕೃತಿ ʻತಲ್ಲಣʼ. ಬುದ್ದಿ ಇದ್ದೂ, ಅವಕಾಶವಿಲ್ಲದೆ ಅಸಹಾಯಕಳೆಂದು ಭಾವಿಸಿ ಅದಕ್ಕಾಗಿ ಹಂಬಲಿಸಿ ತೊಳಲಾಡಿದ ಯುವತಿಯೊಬ್ಬಳ ಮಾನಸಿಕ ತಲ್ಲಣವೇ ಈ ಕೃತಿ. ಪಶ್ಚಿಮಘಟ್ಟದ ಅಂಚಿನಲ್ಲಿರುವ ಬಡವರ, ಕೂಲಿ ಕಾರ್ಮಿಕರ ಮೇಲೆ ನಾನಾ ರೀತಿಯಲ್ಲಿ ಶೋಷಣೆಗಳಾಗುತ್ತಾ ಇರುತ್ತದೆ. ಅವಿದ್ಯಾವಂತಿಕೆಯ ಸೆರಗಿನ ಮರೆಯಲ್ಲಿ ಜೀವಿಸುವ ಇಂತಹ ಜನರ ಬದುಕಿನ ಬಗೆಯನ್ನು, ಸಮಯಕ್ಕೆ ತಕ್ಕಂತೆ ಬದಲಾಗುವ ಮನೋಭಾವದವರ ಬಣ್ಣವನ್ನು ಇಲ್ಲಿ ಲೇಖಕರು ಕತೆಯ ಮೂಲಕ ಅನಾವರಣ ಮಾಡಿದ್ದಾರೆ.
ಗಿರಿಮನೆ ಶ್ಯಾಮರಾವ್ ಆಧುನಿಕ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ವಿನೂತನ ರೀತಿಯ ಬರವಣೆಗೆಗಳಿಂದ ಕನ್ನಡ ಓದುಗ ಆಸಕ್ತರ ನಡುವೆ ಚಿರಪರಿಚಿತರು. ಇವರ ಹುಟ್ಟೂರು ಹಾಸನ ಜಿಲ್ಲೆಯ ಸಕಲೇಶಪುರದ ಗಾಣದಹೊಳೆ ಗ್ರಾಮ. ಪತ್ನಿ ಶಶಿಕಲಾ ಹಾಗು ಪುತ್ರ ಚೇತನ್ ಶರ್ಮ. ಕೃಷಿಕನಾಗಿ 35 ವಸಂತಗಳ ಸುದೀರ್ಘ ಅನುಭವವಿದೆ. ಪಶ್ಚಿಮ ಘಟ್ಟದ ಪ್ರಕೃತಿ, ಜೀವಜಗತ್ತಿನ ಪರಿಚಯ, ಮನುಷ್ಯರ ಮನಸ್ಸಿನ ಅವಲೋಕನ, ವೈಜ್ಞಾನಿಕವಾದ ವೇದದ ಒಳಗನ್ನು ತಿಳಿಯುವ ಕುತೂಹಲ ಇವೆಲ್ಲವೂ ಇವರನ್ನು ಬರವಣಿಗೆಯ ಕ್ಷೇತ್ರದೆಡೆಗೆ ಸೆಳೆದಿದೆ. ಹವ್ಯಾಸಿ ಪತ್ರಿಕಾ ಅಂಕಣಕಾರರಾಗಿದ್ದಾರೆ. ಮಕ್ಕಳ ಸಾಹಿತ್ಯ, ವ್ಯಕ್ತಿತ್ವ ವಿಕಸನ, ಚಿಂತನೆ, ಕಾದಂಬರಿ ಹೀಗೆ ಹಲವಾರು ...
READ MORE