ಗ್ರಾಮೀಣ ಬದುಕಿನ ನೆಲೆಗಳಲ್ಲಿ ಬದಲಾಗುತ್ತಿರುವ ನೈತಿಕ ನಿಲುವುಗಳ ಬಿಕ್ಕಟ್ಟನ್ನು ಚಿತ್ರಿಸುವ ಕಾದಂಬರಿ. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಪಾತ್ರಗಳು ಮನದ ಕದವನ್ನು ತಟ್ಟದೆ ಇರಲಾರವು. ಸಂಘರ್ಷಗಳ ಹಾದಿಯಲ್ಲಿ ಪ್ರೀತಿಯಿಂದ ಬದಲಾವಣೆ ಹೇಗೆ ಸಾರ್ಥೈಕ್ಯವಾಗುತ್ತದೆ ಎಂಬುದನ್ನು ‘ಜೀವಯಾನ’ ಕಾದಂಬರಿಯಲ್ಲಿ ನಿರೂಪಿಸಿದ್ದಾರೆ ಲೇಖಕ ‘ದ್ವಾರನ ಕುಂಟೆ ಪಾತಣ್ಣ’.
ದ್ವಾರನಕುಂಟೆ ಪಾತಣ್ಣ ಅವರು 1951 ಮಾರ್ಚ್ 14 ರಂದು ತುಮಕೂರು ಜಿಲ್ಲೆಯ ದ್ವಾರನಕುಂಟೆಯಲ್ಲಿ ಜನಿಸಿದರು. ಬಿ.ಎಸ್. ಸಿ, ಡಿ.ಎಂ.ಇ ಪದವೀಧರರಾದ ಇವರು ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಪಾರವಾದ ಸೇವೆಯನ್ನು ಸಲ್ಲಿಸಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಇದರ ಸದಸ್ಯರಾಗಿ, ಸ್ವಾಭಿಮಾನಿ ಕರ್ನಾಟಕ ಕ್ಷೇತ್ರದ ರಾಜ್ಯಾಧ್ಯಕ್ಷರಾಗಿ, ಕನ್ನಡ ಸಂಘರ್ಷ ಸಮಿತಿಯ ಉಪಾಧ್ಯಕ್ಷರಾಗಿ ಅಮೂಲ್ಯವಾದ ಸೇವೆಯನ್ನು ಸಲ್ಲಿಸಿದ್ದಾರೆ. 18 ಕೃತಿಗಳನ್ನು ರಚಿಸಿ ಅಕ್ಷರ ಲೋಕಕ್ಕೆ ಅರ್ಪಿಸುವ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಮಹತ್ತರ ಕೊಡುಗೆಯನ್ನು ನೀಡಿದ್ಧಾರೆ. ಇವರ ಸಾಧನೆಗೆ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶ್ರೀಮತಿ ಪದ್ಮಾವತಮ್ಮ ದತ್ತಿ ಪ್ರಶಸ್ತಿ, ...
READ MOREಪುರುಷ ಪ್ರದಾನ ವ್ಯವಸ್ಥೆಯಲ್ಲಿ ಶತಮಾನಗಳಿಂದಲೂ ಸ್ತ್ರೀ ಸ್ವಾತಂತ್ರ್ಯಕ್ಕೆ ಚೌಕಟ್ಟು ವಿಧಿಸಲಾಗಿದೆ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ; ಮೀರಿ ಲಿಂಗ ತಾರತಮ್ಯಗಳಿಂದ ಆಕೆಗೆ ಇಂದಿಗೂ ಅದೆಷ್ಟೋ ವಿಚಾರಗಳಲ್ಲಿ ನಿರ್ಬಂಧವಿದೆ. ಅವುಗಳನ್ನು ಮೀರುವವರನ್ನು ಬೇರೆಯದ್ದೇ ಆದ ರೀತಿಯಲ್ಲಿ ಕಂಡು ಬಿಂಬಿಸಲಾಗುತ್ತದ ಗಂಡಿಗಿಲ್ಲದ ಮಡಿ, ಮೈಲಿಗೆಗಳ ಪರಿಕಲ್ಪನ, ಧಾರ್ಮಿಕ ಆಚರಣೆ ಮುಂತಾದವನ್ನು ಹೆಣ್ಣಿಗಷ್ಟೇ ಸೀಮಿತಗೊಳಿಸಲಾಗಿದೆ. ದುರಂತವೆಂದರೆ ಇಂದಿಗೂ ಹೆಣ್ಣನ್ನು ಸಹಜೀವಿ ಎಂದೂ ಪರಿಗಣಿಸದಷ್ಟರ ಮಟ್ಟಿಗೆ ದೌರ್ಜನ್ಯ - ಎಸಗುತ್ತಿರುವುದೂ ಇಲ್ಲದಿಲ್ಲ. ಇಂತಹದ್ದೇ ಸೂಕ್ಷ್ಮ ನವಿರು ಹೆಣಿಗೆ 'ಜೀವಯಾನ'. ಇಲ್ಲಿನ ರಾಧಿಕಾ ಮತ್ತು ರ್ಭಗಂ ಪಾತ್ರಧಾರಿಗಳು ಸಾಮುದಾಯಿಕ ಪ್ರಾತಿನಿಧ್ಯದ ಪ್ರತಿಮೆಗಳು, ಕಟ್ಟುಪಾಡುಗಳನ್ನು ಮೀರುವ, ಅದರಿಂದ ಎದುರಾಗುವ ಸಂಕಷ್ಟಗಳ ಬಲೆಯಲ್ಲಿ ಮತ್ತೆ ಸಿಕ್ಕು, ನರಳುವ, ಅದಾಗ್ಯೂ - ಉತ್ಕಟ ಜೀವನ ಪ್ರೀತಿ ಹೊಂದುವ ಬಗೆ ಓದುಗರ ಮನಕಲಕುತ್ತದೆ. ವ್ಯವಸ್ಥೆ ಹಣ್ಣನ್ನು ಹೇಗಲ್ಲ ಶೋಷಿಸುತ್ತದೆ ಎಂಬುದನ್ನು ಲೇಖಕರು ಕಣ್ಣಿಗೆ ಕಟ್ಟಿದಂತೆ ಚಿತ್ರಿಸಿದ್ದಾರೆ. ತನ್ನ ಗ್ರಾಮೀಣ ಭಾಷಾ ಸೊಗಡು, ಸರಳ ನಿರೂಪಣೆ, ವೈವಿಧ್ಯಮಯ ಕಥಾಹಂದರದಿಂದ ಕಾದಂಬರಿ ವಿಶೇಷ ಎನಿಸುತ್ತದೆ.
ಕೃಪೆ : ಪ್ರಜಾವಾಣಿ (2020 ಜನವರಿ 26)