ಬೀದರ ಜಿಲ್ಲೆಯ ಭಾಲ್ಕಿಯ ಚೆನ್ನಬಸವ ಪಟ್ಟದ್ದೇವರ ಜೀವನವನ್ನು ಆಧರಿಸಿ ಲೇಖಕ ಲಕ್ಷ್ಮಣ ಕೌಂಟಿ ಅವರು ಬರೆದ ಕಾದಂಬರಿ ಇದು. ಚೆನ್ನಬಸವ ಪಟ್ಟದ್ದೇವರ ಬದುಕು ಪರಿಶುದ್ಧ. ಶರಣರ ನಡೆ-ನುಡಿಯನ್ನೇ ತಮ್ಮ ಜೀವಾಳವಾಗಿರಿಸಿಕೊಂಡು ಬಂದವರು. ರಜಾಕಾರರ ಹಾವಳಿ ಮಧ್ಯೆಯೂ ರಹಸ್ಯವಾಗಿ ಕನ್ನಡ ಶಾಲೆಗಳನ್ನು ತೆರೆದು ಕನ್ನಡ ಕಲಿಸಿದವರು. ಮಾತ್ರವಲ್ಲ; ಕೋಮು ಸಾಮರಸ್ಯದ ಜೀವನ ಸಂದೇಶ ನೀಡುತ್ತಲೇ ಇದ್ದವರು. ಕನ್ನಡ ಸಾಹಿತ್ಯ ಲೋಕ, ಭಾಷೆ ಬೆಳವಣಿಗೆಗೆ ಭಾಲ್ಕಿಯ ಪಟ್ಟದ್ದೇವರ ಮಠದ ಕೊಡುಗೆಯನ್ನೂ ಸಹ ಇಲ್ಲಿ ಉಲ್ಲೇಖಿಸಿದ್ದು, ಒಟ್ಟಿನಲ್ಲಿ, ಈ ಕಾದಂಬರಿಯ ಮೂಲಕ ಪಟ್ಟದ್ದೇವರ ಮಠದ ಅವಿಶ್ರಾಂತ ಮಾನವೀಯ ಕಳಕಳಿಯನ್ನು ಬಿಂಬಿಸಲಾಗಿದೆ.
ಕಾದಂಬರಿಕಾರ ಲಕ್ಷ್ಮಣ ಕೌಂಟೆಯವರು 1958 ಡಿಸೆಂಬರ್ 10 ರಂದು ಜನಿಸಿದರು. ಮೂಲತಃ ಗುಲಬರ್ಗದವರು. ರಂಗಭೂಮಿ ಅವರ ಅಭಿರುಚಿಯ ಕ್ಷೇತ್ರ. ಓದು, ಸಾಹಿತ್ಯ ರಚನೆ, ನಾಟಕ ಅವರ ಒಲವಿನ ಪ್ರವೃತ್ತಿ. ಅವರು ಬರೆದ ನಾಟಕ 'ಕಲೆಯ ಕೊಲೆ ಅರ್ಥಾತ್ ಕಲಾವಿದನ ಕಣ್ಣೀರು' ರಂಗ ಪ್ರದರ್ಶನಗೊಂಡು ಜನ ಮೆಚ್ಚುಗೆಗೆ ಪಾತ್ರರಾಗಿದ್ದರು. ಲೀಲಾತರಂಗ, ಸಂಚಲನ, ಅನುಪರ್ವ, ಸಮರ್ಪಿತ ಮುಂತಾದ ಕಾದಂಬರಿಗಳನ್ನು ರಚಿಸಿದ್ದಾರೆ. ...
READ MORE