ಲೇಖಕಿ ವೈ.ಕೆ.ಸಂಧ್ಯಾ ಶರ್ಮ ಅವರ ಸಾಮಾಜಿಕ ಕಾದಂಬರಿ ‘ನೃತ್ಯ ಸರಸ್ವತಿ’. ನೃತ್ಯ ಸರಸ್ವತಿ ವೈ.ಕೆ ಸಂಧ್ಯಾ ಶರ್ಮ ಕಾದಂಬರಿಯಾಗಿದೆ. ಸರಸ್ವತಿ' ಶಾಂತಲೆಯ ಅನನ್ಯ ವ್ಯಕ್ತಿತ್ವದ ಚಿತ್ರಣದೊಂದಿಗೆ ಆಕೆ ಒಬ್ಬ ಸಾಮಾನ್ಯ ಹೆಣ್ಣಾಗಿ ಅನುಭವಿಸಿದ ಭಾವ ಸಂಘರ್ಷ-ಮಾನಸಿಕ ವಿಶ್ವವ ತುಮುಲಗಳನ್ನು ಮನಮುಟ್ಟುವಂತೆ ತೆರೆಯ ಮೇಲೆ ಕಟ್ಟಿಕೊಡುವುದು ಖ್ಯಾತ ಚಲನಚಿತ್ರ ನಿರ್ದೇಶಕ ಶ್ರೀ ಪುಟ್ಟಣ್ಣ ಕಣಗಾಲರ ದಿವ್ಯ ಕನಸಾಗಿತ್ತು. ಅದನ್ನು ಸಾಕಾರಗೊಳಿಸುವಂತೆ ಅದಕ್ಕೆ ಕಥೆ-ಚಿತ್ರಕಥೆಯನ್ನು ಬರೆದವರು ಪ್ರಸಿದ್ಧ ಲೇಖಕಿ ಶ್ರೀಮತಿ ವೈ.ಕೆ.ಸಂಧ್ಯಾ ತರ್ಮ, ಆದರೆ ಕಾರಣಾಂತರಗಳಿಂದ ಅದು ಚಲನಚಿತ್ರವಾಗಲಿಲ್ಲ. ಮುಂದೆ ಅದನ್ನೇ 'ಸಂಧ್ಯಾಶರ್ಮ ಕಾದಂಬರಿಯಾಗಿ ಅಕ್ಷರರೂಪಕ್ಕಿಳಿಸಿದ ಕೃತಿಯೇ ಈ ನೃತ್ಯ ಸರಸ್ವತಿ, ಹೆಣ್ಣಾಗಿ ಅನುಭವಿಸಿದ ಶಾಂತಲೆಯ ಒಳತೋಟಿಯ, ಅಂತರಂಗದ ಏರಿಳಿತದ ಭಾವಪೂರ್ಣ ಜೀವನಚಿತ್ರ ಇಲ್ಲಿ ಹೃದಯಸ್ಪರ್ಶಿಯಾಗಿ ಒಡಮೂಡಿದೆ.
ಕಳೆದ 52 ವರ್ಷಗಳಿಂದ ಕನ್ನಡ ಸಾರಸ್ವತಲೋಕದಲ್ಲಿ ಜನಪ್ರಿಯ ಲೇಖಕಿಯಾಗಿ ಖ್ಯಾತಿ ಪಡೆದಿರುವ ವೈ.ಕೆ.ಸಂಧ್ಯಾ ಶರ್ಮ ಅವರು ವೈ.ಕೆ. ಕೇಶವಮೂರ್ತಿ ಮತ್ತು ವೈ.ಕೆ. ಅಂಬಾಬಾಯಿಯವರ ಪುತ್ರಿಯಾಗಿ ಬೆಂಗಳೂರಿನಲ್ಲಿ ಜನಿಸಿದರು. ಪ್ರೌಢಶಾಲೆಯಲ್ಲಿದ್ದಾಗಲೇ ಬರವಣಿಗೆ ಆರಂಭಿಸಿದ ಇವರು, ಬೆಂಗಳೂರಿನ ಕರ್ನಾಟಕ ವಾರ್ತಾ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಫ್ರೀಲಾನ್ಸ್ ಜರ್ನಲಿಸ್ಟ್ ಆಗಿ ವಿವಿಧ ಪತ್ರಿಕೆಗಳಲ್ಲಿ ನೃತ್ಯ-ನಾಟಕಗಳ ಕಲಾ ವಿಮರ್ಶಕಿಯಾಗಿ, ಅಂಕಣ ಬರಹಗಾರ್ತಿಯಾಗಿ ಕಾರ್ಯನಿರತರಾಗಿದ್ದಾರೆ. ಪ್ರಜಾಮತ ವಾರಪತ್ರಿಕೆ (1975-76) , ಪ್ರಜಾಪ್ರಭುತ್ವ ವಾರಪತ್ರಿಕೆಗಳಲ್ಲಿ (1977-1980) ಮತ್ತು ಇಂಚರ (1980-82) ಮಾಸಪತ್ರಿಕೆಯಲ್ಲಿ ಸಹಾಯಕ ಸಂಪಾದಕಿಯಾಗಿ ಸೇವೆ ಸಲ್ಲಿಸಿರುವ ಅನುಭವ ಇವರಿಗಿದೆ. ಪ್ರಸ್ತುತ ಅಂತರ್ಜಾಲದ ‘’ ...
READ MOREhttps://epaper.vishwavani.news/bng/e/bng/26-03-2023/16- ವಿಶ್ವವಾಣಿ