ವಿಷವೃತ್ತ ಬೇಲೂರು ರಾಮಮೂರ್ತಿ ಕುತೂಹಲಕಾರಿ ಕಾದಂಬರಿಯಾಗಿದೆ. ಕೆಲಸ ಸಿಗಲಿಲ್ಲ ಎನ್ನುವ ಆತಂಕದಲ್ಲಿದ್ದವನಿಗೆ ಕೆಲಸ ಸಿಕ್ಕಾಗ ಸಂತೋಷವಾದರೂ ಮಾಲೀಕನ ಹುಚ್ಚು ಮಗಳನ್ನು ಮದುವೆಯಾಗಬೇಕು ಎನ್ನುವ ವಿಚಾರ ತಿಳಿದಾಗ ಅಲ್ಲಿಂದ ಹೊರಡುತ್ತಾನೆ. ನಿನಗೆ ಕೆಲಸ ಕೊಡಿಸುತ್ತೀನಿ ಬಾ ಎಂದು ಕರೆದುಕೊಂಡು ಹೋದವರು ಅವನನ್ನು ಒಂದು ಕಡೆ ಕೂಡಿ ಹಾಕಿ ಅವನಿಂದ ತಮಗೆ ಬೇಕಾದ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿರುತ್ತಾರೆ. ಇದೊಂದೇ ಕೆಲಸ ಮುಗಿಸಿ ಇಲ್ಲಿಂದ ಹೊರಟುಬಿಡೋಣ ಅಂದುಕೊಂಡವನಿಗೆ ಅವರೆಲ್ಲಾ ಹೆದರಿಸಿ ಒಂದೊಂದಾಗಿ ತಮ್ಮ ಕೆಲಸಗಳನ್ನು ಮಾಡಿಕೊಳ್ಳುತ್ತಲೇ ಇರುತ್ತಾರೆ. ಹೀಗೆ ವಿಷವೃತ್ತದಲ್ಲಿ ಸೇರಿಕೊಂಡವನು ಹಿಂದಕ್ಕೆ ಬಂದನೇ, ನೆಮ್ಮದಿಯ ಜೀವನ ಕಳೆದನೇ ಎನ್ನುವುದು ವಿಷವೃತ್ತ ಕಾದಂಬರಿಯ ಕುತೂಹಲಕಾರಿ ಸಂಗತಿಗಳು
ಸಾಹಿತಿ ಬೇಲೂರು ರಾಮಮೂರ್ತಿ ಅವರು ಮೂಲತಃ ಮೈಸೂರಿನವರು. ತಮ್ಮ ಹಾಸ್ಯ ಲೇಖನಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರು. ಅವರು 1950 ಜೂನ್ 30ರಲ್ಲಿ ಜನಿಸಿದರು. ‘ಕಥಾ ಕುಸುಮ, ಕಥಾ ಕನ್ನಡಿ, ಕಥಾ ಬಿಂಬ, ಆಕಾಶದಿಂದ ಧರೆಗೆ’ ಅವರ ಕತಾ ಸಂಕಲನಗಳು. ‘ಪ್ರಬಂಧ, ನಾಟಕ, ಕಾದಂಬರಿ, ಹಾಸ್ಯ’ ಪ್ರಕಾರಗಳಲ್ಲಿ ಕೃಷಿ ಸಾಧಿಸಿದ್ದಾರೆ. ‘ಅನರ್ಘ್ಯ ಪ್ರೇಮ, ಅಗೋಚರ, ಜೋಡಿರಾಗ, ಅಪರಾಧಿ ನಾನಲ್ಲ, ಸುಮಂಗಲೆ, ಹೀಗೊಂದು ಸಾರ್ಥಕ ಬದುಕು, ಅಮೃತಗಾನ, ಅತಿಥಿ, ಶರ್ಮಿಳ, ಅಗ್ನಿಜ್ವಾಲೆ, ಅಭಿಷೇಕ, ಅರುಂಧತಿ, ಸಂಬಂಧ ರಾಗ, ಸ್ವರಸಂಗಮ, ತೂಗುಸೇತುವೆ, ಮುತ್ತಿನ ತೆನೆ, ಸಮಾಗಮ, ಕಾಣದ ಊರಲಿ, ಎಂದೂ ನಿನ್ನವನೇ, ಪ್ರೇಮನಿವೇದನೆ, ...
READ MORE