ರಕ್ತರಾತ್ರಿ

Author : ತ.ರಾ.ಸು. (ತ.ರಾ. ಸುಬ್ಬರಾವ್)

Pages 192

₹ 150.00




Year of Publication: 2015
Published by: ಹೇಮಂತ ಸಾಹಿತ್ಯ
Address: # 972 ಸಿ, 62ನೇ ಅಡ್ಡರಸ್ತೆ, 10ನೇ ಮುಖ್ಯ, 63ನೇ ಅಡ್ಡರಸ್ತೆ, 4ನೇ ಎಂ. ಬ್ಲಾಕ್, 4ನೇ ಇ-ಬ್ಲಾಕ್ , ಮಂಜುನಾಥ ನಗರ, ರಾಜಾಜಿನಗರ, ಬೆಂಗಳೂರು-560010

Synopsys

ಖ್ಯಾತ ಕಾದಂಬರಿಕಾರ ತ.ರಾ.ಸು. ಅವರಿಗೆ ಜನಪ್ರಿಯತೆ ತಂದು ಕೊಟ್ಟ ಕಾದಂಬರಿ-ರಕ್ತರಾತ್ರಿ. ದಳವಾಯಿ ಮುದ್ದಣ್ಣನು ದಳವಾಯಿ ದೇಸಣ್ಣನ ತಲೆ ಕಡಿಯುತ್ತಾನೆ. ಮುಂದೆ ತಪ್ಪೊಪ್ಪಿಗೆ ನೆವದಲ್ಲಿ ಶರಣಾಗುವಂತೆ ನಾಟಕವಾಡಿ ಓಬ್ಬಣ್ಣನಾಯಕನನ್ನು ಹತ್ಯೆ ಮಾಡುತ್ತಾನೆ. ಲಿಂಗಣ್ಣ ನಾಯಕ ಅರಮನೆಯಿಂದ ಹೊರ ತೆರಳುತ್ತಾನೆ. ಆದರೆ, ಮುಂದೆ ನಡೆಯುವ ವಿದ್ಯಮಾನಗಳ ಪರಿಣಾಮ, ಲಿಂಗಣ್ಣ ನಾಯಕನೇ ಪಟ್ಟವೇರಬೇಕು ಎಂಬ ಒತ್ತಡ ಉಂಟಾಗುತ್ತದೆ. ಭುವನಪ್ಪನವರ ಮಗ ಪರುಶುರಾಮಪ್ಪ ಮತ್ತು ದೇಸಣ್ಣನವರ ಮಗ ಭರಮಣ್ಣ ಅವರು ಕೂಡಿ ಲಿಂಗಣ್ಣ ನಾಯಕರನ್ನು ಮನವೊಲಿಸುತ್ತಾರೆ. ಆದರೂ ಮುದ್ದಣ್ಣನೇ ಆಡಳಿತ ಸೂತ್ರವನ್ನು ತನ್ನ ಕೈಯಲ್ಲಿರಿಸಿಕೊಂಡಿರುತ್ತಾನೆ. ತನ್ನ ಅನುಮತಿ ಇಲ್ಲದೇ ಯಾರನ್ನೂ ಭೇಟಿ ಮಾಡದಂತೆ ನೋಡಿಕೊಳ್ಳುತ್ತಾನೆ. ಒಂದು ಸಲ ಲಿಂಗಣ್ಣ ನಾಯಕನು ಆಶ್ರಮಕ್ಕೆ ಹೋಗಿ ಸ್ವಾಮೀಜಿ ಅವರನ್ನು ಭೇಟಿ ಮಾಡುತ್ತಾರೆ. ಇದರಿಂದ, ಕುಪಿತಗೊಂಡ ಮುದ್ದಣ್ಣ, ಅರಮನೆಯ ಮೇಲೆಯೇ ದಾಳಿ ಮಾಡುತ್ತಾನೆ. ಈ ರೀತಿಯ ಐತಿಹಾಸಿಕ ಸಂಗತಿಗಳ ಕಥಾ ಹಂದರವೇ ಈ ಕಾದಂಬರಿ.

About the Author

ತ.ರಾ.ಸು. (ತ.ರಾ. ಸುಬ್ಬರಾವ್)
(12 June 1906 - 10 April 1984)

ತಳುಕು ರಾಮಸ್ವಾಮಯ್ಯ ಸುಬ್ಬರಾಯ(ತ.ರಾ.ಸು) ಹುಟ್ಟಿದ್ದು 1906 ಜೂನ್ 12 ಚಿತ್ರದುರ್ಗ ಜಿಲ್ಲೆಯ ಚೆಳ್ಳೆಕೆರೆ ತಾಲ್ಲೂಕಿನ ತಳುಕು ಎಂಬ ಗ್ರಾಮದಲ್ಲಿ. ಮೂಲ ಆಂಧ್ರಪ್ರದೇಶದವರು. ತಂದೆ ರಾಮಸ್ವಾಮಯ್ಯ ಅವರು ತಳುಕು ಗ್ರಾಮಕ್ಕೆ ಬಂದು ನಂತರ ಚಿತ್ರದುರ್ಗದಲ್ಲಿ ಪ್ಲೀಡರ್ ಆಗಿದ್ದರು. ಸುಬ್ಬಾರಾಯರು ಇಂಟರ್ ಮೀಡಿಯೆಟ್ನಲ್ಲಿದ್ದಾಗ ದೇಶದ ಸ್ವಾತಂತ್ಯ್ರ ಚಳವಳಿಯಲ್ಲಿ ಧುಮುಕಿದರು. ಪ್ರಮುಖ ಕೃತಿಗಳು: ಕಂಬನಿಯ ಕುಯಿಲು, ರಕ್ತರಾತ್ರಿ, ದುರ್ಗಾಸ್ತಮಾನ, ನೃಪತುಂಗ, ಸಿಡಿಲ ಮೊಗ್ಗು, ಶಿಲ್ಪಶ್ರೀ, ಕಸ್ತೂರಿ ಕಂಕಣ, ತಿರುಗುಬಾಣ-, ಈ ಕಾದಂಬರಿಗಳು ಬರೆಹಾ ಕೌಶಲ್ಯಕ್ಕೆ ಹಿಡಿದ ಕನ್ನಡಿ. ಚಲನಚಿತ್ರವಾದ ಕಾದಂಬರಿಗಳು: ಚಂದವಳ್ಳಿಯ ತೋಟ, ಹಂಸಗೀತೆ (1956ರಲ್ಲಿ ಬಸಂತ ಬಹಾರ್ ಹೆಸರಲ್ಲಿ ಹಿಂದಿ ಚಲನಚಿತ್ರವಾಗಿತ್ತು.) ನಾಗರಹಾವು, ...

READ MORE

Related Books