ಶಿಕ್ಷಣ ತಜ್ಞ ಡಾ. ಸದಾಶಿವ ಒಡೆಯರ ಅವರ ಐತಿಹಾಸಿಕ ಕಾದಂಬರಿ ರಾಣಿ ಚೆನ್ನಮ್ಮ. ಬ್ರಿಟಿಷರ ವಿರುದ್ಧ ಹೋರಾಡಿದ ಮಹಿಳೆಯರ ಪೈಕಿ ಬೆಳಗಾವಿ ಜಿಲ್ಲೆಯ ಕಿತ್ತೂರು ಸಂಸ್ಥಾನದ ರಾಣಿ ಚೆನ್ನಮ್ಮಳಿಗೆ ಅಗ್ರಸ್ಥಾನವಿದೆ. ಧಾರವಾಡದಲ್ಲಿ ಬ್ರಿಟಿಷ್ ಅಧಿಕಾರಿ ಥ್ಯಾಕರೆಯನ್ನು ಸಂಹರಿಸಿದ ಖ್ಯಾತಿ ಈಕೆಯದು. ಮಹಿಳೆಯಾಗಿದ್ದೂ ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿದ್ದರ ಇತಿಹಾಸವಿದೆ. ಐತಿಹಾಸಿಕವಾಗಿ ಮಹತ್ವದ ವಿವರಗಳನ್ನು ಒಳಗೊಂಡ ಕಾದಂಬರಿ ಇದು. ರಾಣಿ ಚೆನ್ನಮ್ಮ ಕೃತಿಯು ಮಲಯಾಳಂ ಭಾಷೆಯಲ್ಲೂ ಅನುವಾದಗೊಂಡಿದೆ.
ಪ್ರೊ. ಸದಾಶಿವ ಒಡೆಯರ ಅವರು ಶಿಕ್ಷಣ ತಜ್ಞರು. ಧಾರವಾಡದ ಮರೇವಾಡ ಗ್ರಾಮದವರು. ತಂದೆ ಶಿವದೇವ ಒಡೆಯರ್, ತಾಯಿ ಗಿರಿಜಾದೇವಿ. ಸದಾಶಿವರ ಪ್ರಾರಂಭಿಕ ಶಿಕ್ಷಣ ಹಾವೇರಿಯಲ್ಲಿ ನಡೆಯಿತು. ಆಟದಲ್ಲಿ ಸದಾ ಮುಂದಿದ್ದ ಅವರಿಗೆ ಬ್ಯಾಡ್ಮಿಂಟನ್, ಟೇಬಲ್ ಟೆನಿಸ್ ಪ್ರಿಯವಾದ ಆಟಗಳಾಗಿದ್ದವು. ಧಾರವಾಡದಲ್ಲಿ 1945ರಲ್ಲಿ ಬಿ.ಎ. (ಆನರ್ಸ್) ಪದವಿ, 1947ರಲ್ಲಿ ಬೆಳಗಾವಿಯ ಲಾ ಕಾಲೇಜಿನಿಂದ ಎಲ್.ಎಲ್.ಬಿ. ಪದವಿ, 1948ರಲ್ಲಿ ಮುಂಬೈ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ಅಹಮದಾಬಾದಿನ ಗುಜರಾತ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. 1949ರಲ್ಲಿ ಸ್ಥಾಪನೆಗೊಂಡ ಕರ್ನಾಟಕ ವಿಶ್ವವಿದ್ಯಾಲಯದ ಅಸಿಸ್ಟೆಂಟ್ ರಿಜಿಸ್ಟ್ರಾರ್ ಆಗಿ ನೇಮಕಗೊಂಡರು. 1951ರಲ್ಲಿ ಸಹಾಯಕ ಕುಲಸಚಿವರಾಗಿ, 1957ರಲ್ಲಿ ಕುಲಸಚಿವರಾಗಿ, ...
READ MORE