ವೈವಸ್ವತ

Author : ರೇಖಾ ಕಾಖಂಡಕಿ

Pages 432

₹ 350.00




Year of Publication: 2016
Published by: ಅಂಕಿತ ಪುಸ್ತಕ
Address: 53, ಗಾಂಧಿ ಬಜಾರ್‍ ಮುಖ್ಯರಸ್ತೆ, ಬಸವನಗುಡಿ , ಬೆಂಗಳೂರು -560004
Phone: 08026617100/ 26617755

Synopsys

ರೇಖಾ ಕಾಖಂಡಕಿ ಅವರ ’ವೈವಸ್ವತ’ ಒಂದು ಕಾದಂಬರಿ. ಈ ಕೃತಿಯು ಚಾರಿತ್ರಿಕ ಕಾದಂಬರಿಯಾಗಿಯೂ, ಕುಟುಂಬದ ಚರಿತ್ರೆಯಾಗಿಯೂ ಕಾಣುವಂತದ್ದು. ಸುಮಾರು ಮೂರ್ನಾಲ್ಕು ಶತಮಾನಗಳ ಕಾಲ ವಲಸೆ ಹೋಗುತ್ತಲೇ ತಾವಿರುವ ಸ್ಥಳವನ್ನು ಬಿಟ್ಟು ಹೊಸ ಸ್ಥಳವನ್ನು ಹುಡುಕುತ್ತಲೇ ಇದ್ದ ಒಂದು ಸಾಹಸೀ ಕುಟುಂಬದ ಇತಿಹಾಸವನ್ನು ದಕ್ಷಿಣ ಭಾರತದ ಚರಿತ್ರೆಯ ಹಿನ್ನೆಲೆಯಲ್ಲಿ ಆಪ್ತವಾಗಿ ಹಾಗೂ ವಿಶ್ವಸನೀಯವಾಗಿ ದಾಖಲಿಸುತ್ತದೆ.

ನೆಲ, ಹೆಜ್ಜೆ, ಕೊನೆಯಿಲ್ಲದ ಹಾದಿ ಎಂಬ ಮೂರು ಭಾಗಗಳಲ್ಲಿ ಹರಡಿಕೊಂಡಿರುವ ಈ ಕಾದಂಬರಿಯ ಸಂಕೀರ್ಣ ಸಂವಿಧಾನದಲ್ಲಿ ಚಾರಿತ್ರಿಕ ಹಾಗೂ ನೈತಿಕ ಎಂದು ಸ್ಥೂಲವಾಗಿ ಗುರುತಿಸಬಹುದಾದ ಪರಸ್ಪರ ಎರಡು ಚೌಕಟ್ಟುಗಳನ್ನು ಸೂಕ್ಷ್ಮವಾಗಿ ಗ್ರಹಿಸಲು ಈ ಕಾದಂಬರಿ ಪೂರಕವಾಗಿದೆ.

ರಾಣಿ ರುದ್ರಮಾದೇವಿ, ಪ್ರತಾಪರುದ್ರರು, ಮುಸನೂರಿ ನಾಯಕರು, ವಿನಾಯಕದೇವ ಪಾತ್ರಗಳು ಐತಿಹಾಸಿಕ ಕಾಕತೇಯ ರಾಜ್ಯದಲ್ಲಿ ಕಂಡು ಬರುತ್ತವೆ. ಮುಸ್ಲಿಂ ಶಾಹಿಗಳಾದ ಅಲ್ಲಾವುದ್ದೀನ್ ಖಿಲ್ಜಿ, ಮಲ್ಲಿಕಾಫರ, ಖುಸ್ರು ಖಾನ, ಉಲಗಾ ಖಾನ, ಒಂದನೆ ಮಹಮ್ಮದ ಶಾ, ವಿಜಾಪುರದ ಆದಿಲ್ ಶಾಹಿ, ನಯಿಝಾಮ ಶಾಹಿ, ವಿಜಯನಗರದ ಬುಕ್ಕರಾಯ, ಕೃಷ್ಣದೇವರಾಯ, ಅಚ್ಯುತರಾಯ, ರಾಮರಾಯ, ತಿರುಮಲರಾಯ, ವೆಂಕಟಾದ್ರಿ ಇವರುಗಳ ಬಗ್ಗೆ ಐತಿಹಾಸಿಕ ನೆಲೆಯಲ್ಲಿಯೇ ಚಿತ್ರಿಸುಚ ಕಥಾನಕವನ್ನು ಈ ಕೃತಿ ಒಳಗೊಂಡಿದೆ.

About the Author

ರೇಖಾ ಕಾಖಂಡಕಿ
(09 June 1951)

ರೇಖಾ ಕಾಖಂಡಕಿಯವರು ಹಲವಾರು ಪ್ರಮುಖ ಕೃತಿಗಳನ್ನು ರಚಿಸಿದ್ದಾರೆ. ಅವರು ಮೂಲತಃ ಬಾಗಲಕೋಟೆಯವರು. ಇವರು ಬರೆದ ಕಥೆಗಳು ಮಲ್ಲಿಗೆ, ಜನಪ್ರಗತಿ, ಪ್ರಜಾಮತ ಮುಂತಾದ ಪತ್ರಿಕೆಗಳಲ್ಲಿ ಬೆಳಕು ಕಂಡವು. ಕಾಲೇಜು ಓದುತ್ತಿದ್ದಾಗ ಬರೆದ ಕೋಟಿ ಕಾದಂಬರಿಯು ಬಾಗಕೋಟೆಯ ಪರಿಸರದ ವಸ್ತು ಇರುವ ಕಾದಂಬರಿ. ಮಲ್ಲಿಗೆ ಮಾಸಪತ್ರಿಕೆಯ ಕಾದಂಬರಿ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆಯಿತು. ನಂತರ ಬರೆದ ಕಾದಂಬರಿಗಳು ಬಂಧನ, ಅರುಣರಾಗ, ಹೊಸಹೆಜ್ಜೆ ಮುಂತಾದವುಗಳು. ಇವರ ಹಲವಾರು ಕಾದಂಬರಿಗಳಲ್ಲಿ ಪ್ರಾದೇಶಿಕ ಭಾಷೆಯ ಸೊಗಡು, ದಟ್ಟ ಅನುಭವ, ಸಾಮಾಜಿಕ ಸ್ಥಿತ್ಯಂತರಗಳು ಮುಂತಾದವುಗಳೇ ವೈವಿಧ್ಯಮಯ ವಸ್ತುಗಳಾಗಿ, ಮೂಲದ್ರವ್ಯಗಳಾಗಿ ಪ್ರಕಟಗೊಂಡಿವೆ. ಆರುಣರಾಗ ಚಲನಚಿತ್ರವಾಗಿ ಪ್ರಖ್ಯಾತಿ ಪಡೆದಿದ್ದರೆ ಲಂಬಾಣಿಗಳ ...

READ MORE

Awards & Recognitions

Related Books