ಆ 86ನೇ ಹಳ್ಳಿ

Author : ಬಾಳಾಸಾಹೇಬ ಲೋಕಾಪುರ

Pages 304

₹ 360.00




Year of Publication: 2024
Published by: ಬಿಬಿ ಪಬ್ಲಿಕೇಷನ್
Address: ಬಿಬಿ ಪಬ್ಲಿಕೇಷನ್ ಮೂರನೇ ಮಹಡಿ, ವಿ4, ಆರ್ ಕೆ ಕಾಂಪ್ಲೆಕ್ಸ್, ಕೆಎಸ್‌ಎಸ್‌ಐಡಿಸಿ ಕಾಂಪೌಂಡ್, ಎಲೆಕ್ಟ್ರಾನಿಕ್ ಸಿಟಿ ಮೊದಲ ಹಂತ, ಬೆಂಗಳೂರು- 560100

Synopsys

`ಆ 86ನೇ ಹಳ್ಳಿ’ ಬಾಳಾಸಾಹೇಬ ಲೋಕಾಪುರ ಅವರ ಅನುವಾದಿತ ಕಾದಂಬರಿಯಾಗಿದೆ. ಈ ಕೃತಿಯು ಇಂಗ್ಲಿಷ್ ಮೂಲದಾಗಿದ್ದು, ಸೇನ ದೇಸಾಯಿ ಗೋಪಾಲ್ ಲೇಖಕರಾಗಿದ್ದಾರೆ.  ಕೃತಿ ಕುರಿತು ಬೆನ್ನುಡಿಯಲ್ಲಿ ಲೇಖಕರು ಹೀಗೆಹೇಳಿದ್ದಾರೆ: ‘ಆ 86ನೇ ಹಳ್ಳಿ’ ಕೃತಿಯನ್ನು ಪಥನಮುಖಿ ಕಾದಂಬರಿ ಎಂದು ಕರೆಯಬಹುದು. ಊರು ಮುಳುಗುತ್ತಿದೆ. ಜನ ದಿಕ್ಕೇಡಿಗಳಾಗುತ್ತಿದ್ದಾರೆ. ಅವರು ಕಟ್ಟಿಕೊಂಡ ಭೌತಿಕ ಬದುಕು ಪತನಗೊಳ್ಳುತ್ತಿದೆ. ಮನೆ ಮಾರುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಹೋರಾಟದಲ್ಲಿ ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಮಹಾಪೂರದಲ್ಲಿ ಅಮಾಯಕರು ಹೊಳೆ ಪಾಲಾಗುತ್ತಿದ್ದಾರೆ. ಹಳ್ಳಿಯ ಹೆಮ್ಮೆಯಾದ ವಾಡೆಯಲ್ಲಿ ನೀರು ನುಗ್ಗಿ ಅದು ತನ್ನ ಅದು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಇದೆಲ್ಲವೂ ಪತನವೇ. ಅವರ ಗೋಪುರ ಮಾದರಿ ಸಾಮಾಜಿಕ ಸ್ಥರ ಬಿದ್ದು ಹೋಗುತ್ತಿದೆ. ಇಲ್ಲಿ ರಾಜ ನಾಯಕ ಎನ್ನುವ ದೊಡ್ಡ ಮನೆತನದ ಸಭ್ಯನ ಒಂದು ಸಣ್ಣ ಪ್ರಮಾದದಿಂದ ಉಂಟಾಗುವ ಜಾರುವಿಕೆ ಅವನ ಸಾವಿನಿಂದ ಅಂತ್ಯವಾಗುತ್ತದೆ. ಇನ್ನೊಂದು ಬಗೆಯಲ್ಲಿ ಈ ಕಾದಂಬರಿಯು ಹೊಸ ಮೌಲ್ಯಗಳಿಂದ ಆಶಾವಾದವನ್ನು ಹುಟ್ಟಿಸುತ್ತದೆ. ದಯಾ ಎಂಬ ಧೀರ ಮಹಿಳೆ ಜಾತ್ಯತೀತ ಮನೋಭಾವದ ತಾಯಿ ತನ್ನ ಗಂಡನಿಂದ ಸೂಳೆಯ ಹೊಟ್ಟೆಯಲ್ಲಿ ಹುಟ್ಟಿದ ಹೆಣ್ಣುಮಗುವನ್ನು ತನ್ನ ಮಗಳೆಂದು ಅಪ್ಪಿಕೊಳ್ಳುವ ತನ್ನ ಮಕ್ಕಳಾದ ರೋಹನ ಮತ್ತು ಜೈ ಅವರೊಂದಿಗೆ ಅವಳನ್ನು ಕೂಡಾ ಸರಿ ಸಮವಾಗಿ ಪ್ರೀತಿಸುವ ಮಹಾತಾಯಿಯ ಆದರ್ಶ ಓದುಗರ ಮನ ಗೆಲ್ಲುತ್ತದೆ. ಸಮರ ಚಂದರನಂತಹ ಸಾಧಾರಣ ಸರಕಾರಿ ನೌಕರ ತನ್ನ ಹೋರಾಟ ಮತ್ತು ಜನಮುಖಿ ಧೋರಣೆಯಿಂದ ಎಂಎಲ್‌ಎ ಆಗಿ ಆಯ್ಕೆಯಾಗುವದು ಕೂಡಾ ಆಶಾದಾಯಕವಾಗಿದೆ. ಇನ್ನೊಂದು ಬಗೆಯಲ್ಲಿ ಕಾದಂಬರಿಯ ಕೊನೆಯಲ್ಲಿ ಉಷಾಳಿಗೆ ಮಗುವಾಗುವದು ಬದುಕಿನ ಆಶಾವಾದವನ್ನು ಹೆಚ್ಚಿಸುತ್ತದೆ ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು.

About the Author

ಬಾಳಾಸಾಹೇಬ ಲೋಕಾಪುರ

ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಶಿರಹಟ್ಟಿಯವರಾದ ಲೇಖಕ ಬಾಳಾಸಾಹೇಬ ಲೋಕಾಪುರ 1955ರಲ್ಲಿ ಜನಿಸಿದರು. ನವ್ಯೊತ್ತರ ಸಾಹಿತಿಗಳಾದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಭೂಗೋಳ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ‘ಆಧುನಿಕ ಕನ್ನಡ ಕಥನ ಸಾಹಿತ್ಯದಲ್ಲಿ ಜೈನ ಸಂವೇದನೆ’ ವಿಷಯದಲ್ಲಿ ಪಿಹೆಚ್ ಡಿ ಪಡೆದರು.  ಬಾಗಲಕೋಟೆಯ ಸಕ್ರಿ ಕಾಲೇಜಿನಲ್ಲಿ ಭೂಗೋಳ ಶಾಸ್ತ್ರದ ಉಪನ್ಯಾಸಕರಾದ ಇವರು ಸಾಹಿತ್ಯ ಕ್ಷೇತ್ರದ ಹಲವು ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಕವಣಿಗಲ್ಲು, ಹಾರುವ ಹಕ್ಕಿ ಮತ್ತು ಆಕಾಶ, ತನು ಕರಗದವರಲ್ಲಿ, ಮತ್ತು ಕಂಗಳು ತುಂಬಿದ ಬಳಿಕ ಎಂಬ ಕತಾಸಂಕಲನಗಳು, ಉಧೊ ಉಧೊ, ಹುತ್ತ, ಬಿಸಿಲುಪುರ, ನೀಲಗಂಗಾ ಎಂಬ ಕಾದಂಬರಿಗಳು, ...

READ MORE

Related Books