‘ಗ್ವಾಲಿಮಾರ್ ರಹಸ್ಯ’ ಲೇಖಕ ಅಂತಃಕರಣನ ಕಾದಂಬರಿ. ಈ ಕಾದಂಬರಿ ಬೆಳೆಯುವ ಪರಿ ಅನನ್ಯ, ಅನೂಹ್ಯ, ಥೇಟ್ ಷೆರ್ಲಾಕ್ ಹೋಂ ಕಥೆಯಂತೆ ಹೆಜ್ಜೆ-ಹೆಜ್ಜೆಗೂ ಪ್ಲಾನ್ ಮತ್ತು ಪಿತೂರಿ. ಮಕ್ಕಳು ಮಾಡುವ ಪ್ಲಾನ್ ಗಳು ಜೇಮ್ಸ್ ಬಾಂಡ್ ನಡೆಯನ್ನು ನೆನಪಿಸುತ್ತವೆ ಎನ್ನುತ್ತಾರೆ ವಿಜ್ಞಾನ ಲೇಖಕರು ಡಾ. ಟಿ.ಆರ್. ಅನಂತರಾಮು.
ಈ ಕಾದಂಬರಿಯ ಮೂಲಕ ಅಂತಃಕರಣನ ಅಂತರಂಗದ ತಾಕತ್ತು ಅನಾವರಣವಾಗುತ್ತದೆ. ಇಂದಿನ ಮಾಹಿತಿ ತಂತ್ರಜ್ಞಾನದ ಎಲ್ಲ ಆಯಾಮಗಳನ್ನು ಬಳಸಿಕೊಂಡು ತ್ರಿ-ಡಿ ಪ್ರಿಂಟಿಂಗ್ ಸೇರಿ ಓದುಗರನ್ನು ತುದಿಗಾಲಲ್ಲೇ ನಿಲ್ಲುವಂತೆ ಮಾಡುತ್ತದೆ. ಇಲ್ಲಿಯ ಕಥಾ ಓಟ ಅಂತಃಕರಣ ಅವರ ಭಾಷಾ ಪ್ರೀತಿಗೆ ಸಾಕ್ಷಿಯಾಗುತ್ತದೆ.
ಅಂತಃಕರಣ ತನ್ನ 4ನೇ ಕ್ಲಾಸಿನಿಂದ 'ಎಚ್ಚರಿಕೆ', 'ಜೀವನ್ಮುಖಿ' ಪತ್ರಿಕೆಗಳಲ್ಲಿ ಮತ್ತು ಅಂತರ್ಜಾಲ ಪತ್ರಿಕೆ 'ವಿಶ್ವಕನ್ನಡಿಗ'ದಲ್ಲಿ ವಾರಕ್ಕೆ 2 ಅಂಕಣ ಬರೆಯುತ್ತಿರುವ ಅಂಕಣಕಾರ. ಇದುವರೆಗೆ ಕ್ರೀಡಾಂಕಣಗಳೂ ಸೇರಿದಂತೆ 500 ಅಂಕಣಪ್ರಬಂಧ, 95 ಕವಿತೆ, 78 ಕತೆ, 4 ಕಾದಂಬರಿ ಮತ್ತು 1 ನಾಟಕಗಳನ್ನು ರಚಿಸಿರುವ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಬರೆಯುವ ಲೇಖಕ. 9ನೇ ತರಗತಿಯೊಳಗೆ 4 ಸಮಗ್ರ ಬರಹಗಳ ಕೃತಿಗಳು ಸೇರಿದಂತೆ ಒಟ್ಟು 30 ಕೃತಿಗಳನ್ನು ರಚಿಸಿರುವ ಪುಟ್ಟ ಸಾಹಿತಿ. ಪ್ರಸ್ತುತ ಶಿವಮೊಗ್ಗದ ಲೊಯಲಾ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ. ಕನ್ನಡ ಪ್ರವೇಶ, ಕಾವ ಸಾಹಿತ್ಯ ಪರೀಕ್ಷೆಗಳಲ್ಲಿ ಮತ್ತು ...
READ MORE