‘ಇಂಗಳೇಶ್ವರ ಗಿರಿ ಅಳಿಯದು ಸಿರಿ’ ಕೃತಿಯು ನಾಗಣ್ಣ ಮಹಾದೇವಪ್ಪ ಚಿಗರಿ ಅವರ ಕಾದಂಬರಿಯಾಗಿದೆ. ಕಾದಂಬರಿ ತನ್ನ ಓಟದಲ್ಲಿ ನಾನಾ ರೀತಿಯ ಭಾಷಿಕ ಪ್ರಯೋಗ ಮತ್ತು ನಿರೂಪಣೆಯ ಧಾಟಿಯನ್ನು ಒಳಗೊಂಡಿದೆ. ಸಾಧಾರಣವಾಗಿ ಕತೆ ಕಾದಂಬರಿಗಳಲ್ಲಿ ಎದುರಾಗುವ ವಾಕ್ಯರಚನಾಕ್ರಮವನ್ನು ಇಲ್ಲಿ ಬೇರೆ ಬೇರೆ ರೀತಿಯಲ್ಲಿ ಲೇಖಕರು ಕಟ್ಟಿಕೊಡುತ್ತಾರೆ. ಕಂಡದ್ದು ಕಾಣದ್ದರ ನಡುವಿನ ಬದುಕು, ಸಂದಿಗ್ಧತೆ, ಹಿಂಸೆಯ ಬೇರೆಬೇರೆ ಮುಖಗಳನ್ನು ಶೋಧಿಸುವುದು ಕಾದಂಬರಿಯ ಹಿಂದಿನ ದರ್ಶನವೆನ್ನಬಹುದು. ಗತಿ-ಸ್ಥಿತಿ (condition and situation) ಎರಡೂ ಬೇರೆಬೇರೆಯಲ್ಲ. ಕಂಡದ್ದು ಕಾಣದ್ದು ಕೂಡ ಬೇರೆಬೇರೆಯಲ್ಲ, ಒಂದಕ್ಕಿಂತ ಇನ್ನೊಂದು ಮುಖ್ಯವಲ್ಲ ಎಂದಿದ್ದಾರೆ ಲೇಖಕ ನಾಗಣ್ಣ. ಒಟ್ಟಾರೆಯಾಗಿ ಇ ಕೃತಿಯು ಇಂಗಳೇಶ್ವರ ಗ್ರಾಮದ ಐತಿಹಾಸಿಕ ಸಾಮಾಜಿಕ, ಸಾಂಸ್ಕೃತಿಕ ಹಾಗೂ 12ನೇಯ ಶತಮಾನದದಲ್ಲಿ ಉಂಟಾದ ಶರಣರ ಕ್ರಾಂತಿ ಹಗೂ ಸಾಹಿತ್ಯದ ಎಲ್ಲವನ್ನು ಈ ಗ್ರಂಥದಲ್ಲಿ ಕಟ್ಟಿಕೊಟ್ಟಿದ್ದಾರೆ. ಇಂಗಳೇಶ್ವರದ ಸುಂದರ ಭಕ್ತಿ ಪರಂಪರೆಯಲ್ಲಿ ಜಗಜ್ಯೋತಿ ಬಸವಣ್ಣನವರ ಹುಟ್ಟು ಹಾಗೂ ಅವರು ಮಾಡಿದ ಧಾರ್ಮಿಕ ಸಾಮಾಜಿಕ ಸಪ್ತ ಕ್ರಾಂತಿಗಳನ್ನು ಕೂಲಂಕುಷವಾಗಿ ಜಾಣ್ಮೆಯಿಂದ ಚಿತ್ರಿಸಿದ್ದಾರೆ. ಅದು ಅಲ್ಲದೆ, ಅಕ್ಕನಾಗಮ್ಮ, ಚನ್ನಬಸವಣ್ಣ, ಹಾಗೂ ಹಲವಾರು ಪವಾಡ ಪುರುಷರ ಬಗ್ಗೆಯೂ ಸಹ ಉಲ್ಲೇಖಿಸಿದ್ದಾರೆ.
ನಾಗಣ್ಣ ಮಾಹಾದೇವಪ್ಪ ಚಿಗರಿ ಮೂಲತಃ ಇಂಗಳೇಶ್ವರದವರು. ಎಂ.ಎ ಪದವೀಧರರು. ವ್ಯವಸಾಯ ಅವರ ವೃತ್ತಿಯಾಗಿದ್ದು ಬರವಣಿಗೆ ಆಸಕ್ತಿದಾಯಕ ಕ್ಷೇತ್ರವಾಗಿದೆ. ಕೃತಿಗಳು: ಇಂಗಳೇಶ್ವರ ಗಿರಿ ಅಳಿಯದು ಸಿರಿ ...
READ MORE