ಲೇಖಕ ಬೆನ್ಯಾಮಿನ್ ಅವರ ಮಲೆಯಾಳಂ ಕಾಂದಬರಿಯನ್ನು ಲೇಖಕ ಅಶೋಕಕುಮಾರ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ನತದೃಷ್ಟನೊಬ್ಬರ ನೈಜ ಜೀವನ ಆಧರಿಸಿದ ಕಾದಂಬರಿ-ಆಡುಜೀವನ. ಬದುಕು ಹಸನಾಗುವುದೆಂಬ ಹಂಬಲ ಹೊತ್ತು ಸೌದಿಅರೇಬಿಯಾಕ್ಕೆ ತೆರಳಿದ ನಜೀಬ್ ಎಂಬ ಯುವಕ ಮರಳುಗಾಡಿನಲ್ಲಿ ಸಿಲುಕಿ ಅಲ್ಲಿನ ಜನರಿಂದ ಶೋಷಣೆಗೊಳಗಾಗಿ ಅನುಭವಿಸುವ ನರಕ ಯಾತನೆಯ ಸತ್ಯಕಥೆ. ನಿರಾಶೆಯಲ್ಲೂ ಹತಾಶನಾಗದೆ, ಬದುಕಬೇಕೆಂಬ ಆಸೆ ತೊರೆಯದೆ, ದೈವವಿಶ್ವಾಸವಿರಿಸಿಕೊಂಡು ಅಲ್ಲಿಂದ ಪಾರಾಗಿ ಬಂದ ಅನನ್ಯ ಕತೆ. ನರನಿಗೆ ನರನನ್ನೆ ಬಿಟ್ಟ ಬೇಟೆಯಾಡಲು.... ಎಂಬ ಕವಿವಾಣಿಯನ್ನು ನೆನಪಿಗೆ ತರುವ ವ್ಯಥೆಯ ಕತೆ.
ಬಹರೈನ್‌ನಲ್ಲಿ ಒಂದು ಕಂಪೆನಿಯ ಉನ್ನತ ಹುದ್ದೆಯಲ್ಲಿರುವ ’ಬೆನ್ಯಾಮಿನ್’ ಲೇಖಕರಾದುದೂ ಒಂದು ರೋಚಕ ಕತೆ. ಗಲ್ಫ್‌ನಲ್ಲಿ ದುಡಿಯುವ ಅನೇಕ ಭಾರತೀಯರಂತೆ ತಾವೂ ಅನುಭವಿಸಿದ ಏಕಾಂಗಿತನ, ಏಕತಾನತೆ, ದೀರ್ಘ ವಿಶ್ರಾಂತಿಯ ವೇಳೆಗಳ ಶೂನ್ಯತೆಗಳಿಂದ ಪಾರಾಗಲು ಓದುವ ಹುಚ್ಚು ಹತ್ತಿಸಿಕೊಂಡು, ಅಲ್ಲಿಂದ ಬರವಣಿಗೆಯತ್ತ ಧುಮುಕಿದ ಬಗೆಯನ್ನು ಅವರು ಈ ಕಾದಂಬರಿಯ ಕೊನೆಯಲ್ಲಿ ವಿವರಿಸಿದ್ದಾರೆ
ವೃತ್ತಿಯಿಂದ ವೈದ್ಯರಾಗಿರುವ ಡಾ. ಅಶೋಕ್ ಕುಮಾರ್ ಅವರು ಮಲಯಾಳಂ ಹಾಗೂ ತಮಿಳು ಭಾಷೆಯಿಂದ ಕನ್ನಡಕ್ಕೆ ಅನುವಾದಿಸುವಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಬೆಂಗಳೂರಿನ ನಿವಾಸಿ ಆಗಿರುವ ಡಾ. ಅಶೋಕ್ ಕುಮಾರ್ ಅವರು ಶಸ್ತ್ರವೈದ್ಯರು. ಮಲಯಾಳಂ ಕವಯತ್ರಿ ಕಮಲಾದಾಸ್ ಅವರ ಕವಿತೆಗಳನ್ನು ಅವರು ಕನ್ನಡೀಕರಿಸಿದ್ದಾರೆ. ...
READ MORE