“ಮನುಷ್ಯ ಒಂದೇ ಸಲಕ್ಕೆ ಸತ್ತು ಹೋದರೆ ಪರವಾಗಿಲ್ಲ. ಆದರೆ ಕ್ಷಣ ಕ್ಷಣಕ್ಕೂ ಮಾನಸಿಕವಾಗಿ ಸಾಯಕೂಡದು” “ಅಜ್ಞಾನ ರಾಜ್ಯವಾಳುತ್ತಿರುವ ದೇಶದಲ್ಲಿ ಜ್ಞಾನದ ಬಗ್ಗೆ ಮಾತಾಡುವುದಕ್ಕಿಂತ ಮೌನವಾಗಿ ಇರುವುದೇ ಮೇಲು” ಇಂತಹ ಅನೇಕ ಜ್ಞಾನೋಕ್ತಿಗಳ ಮೂಲಕ ಓದುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಾರೆ ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್. ಈ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ರವಿ ಬೆಳಗೆರೆ.
ತೆಲುಗಿನ ಖ್ಯಾತ ಲೇಖಕ, ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ಬಹುತೇಕ ಕೃತಿಗಳು ಕನ್ನಡದಲ್ಲೂ ಅನುವಾದಗೊಂಡು ಜನಪ್ರಿಯವಾಗಿವೆ. ಇವರ ಕೃತಿಗಳನ್ನು ವಂಶಿ, ಸರಿತಾ ಜ್ಞಾನಾನಂದ, ಬೇಲೂರು ರಾಮಮೂರ್ತಿ, ರವಿ ಬೆಳಗೆರೆ, ಯತಿರಾಜ್ ವೀರಾಂಬುದಿ ಮುಂತಾದವರು ಕನ್ನಡಕ್ಕೆ ಅನುವಾದಿಸಿದ್ದಾರೆ. ...
READ MORE