ಅಬಲೆಯಲ್ಲ ಸಬಲೆ

Author : ವಿಜಯ ಪದ್ಮಶಾಲಿ



Year of Publication: 2022
Published by: ಸುಮಾ ಪ್ರಕಾಶನ
Address: ನಂ. 53, 5ನೇ ಟೆಂಪಲ್‌ ರಸ್ತೆ, ಸಿದ್ಧಾಂತಿ ಬ್ಲಾಕ್‌ ಮಲ್ಲೇಶ್ವರಂ, ಬೆಂಗಳೂರು- 560 003
Phone: 8073147961

Synopsys

"ಅಬಲೆಯಲ್ಲ ಸಬಲೆ"ದ ಕಥೆ ನೈಜ ಜೀವನದ ಸುತ್ತ ಹೆಣೆದ ಕಥೆಯೇನೋ ಅನಿಸುವಷ್ಟು ಸಹಜವಾಗಿ ಮೂಡಿ ಬಂದಿರುವುದು. ಹಾಗೆ ಈ ಕಾದಂಬರಿಯಲ್ಲಿ ಹೆಣ್ಣಿನ ಭಾವನೆಗಳನ್ನು, ಒಳಮನದ ಪಲ್ಲಟಗಳನ್ನು ದಟ್ಟವಾಗಿಯೇ ಚಿತ್ರಿಸಲಾಗಿದೆ. ಕೌಟುಂಬಿಕ ಸಂಬಂಧದ ವಿನ್ಯಾಸವೇ ಈ ಕಥೆಯ ಮೂಲವಸ್ತು. ಪ್ರಸ್ತುತ ಕಾಲಮಾನಕ್ಕೆ ಅತ್ತೆಯ ದೌರ್ಜನ್ಯ, ಗಂಡನ ದಬ್ಬಾಳಿಕೆ ಇದು ತುಸು ಅತಿಶಯವೆನಿಸಿದರೂ ಹತ್ತು ವರ್ಷದ ಹಿಂದಿನ ಸ್ತ್ರೀಯರ ಜೀವನಕ್ಕಂತೂ ಕನ್ನಡಿ ಹಿಡಿದಂತಿದೆ. ಆದರೂ ಇಂದಿನ ದಿನಮಾನಗಳಲ್ಲಿಯೂ ಈ ರೀತಿಯ ದೌರ್ಜನ್ಯಗಳು ಇಲ್ಲವೇ ಇಲ್ಲ ಎಂಬುದನ್ನು ಸಹಾ ಸಾರಾಸಗಟಾಗಿ ತಳ್ಳಿ ಹಾಕುವಂತೆಯೂ ಇಲ್ಲ ಎಂಬುದನ್ನು ಓದುಗರು ಗಮನಿಸಿಕೊಳ್ಳಬೇಕು. ಸ್ತ್ರೀಯರ ಜೀವನವನ್ನು ನಿಶ್ಚಿತವಾಗಿ ಗಮನಿಸುವ ನಾನು ಸಹ ಅನೇಕ ಈ ರೀತಿಯ ಘಟನೆಗಳನ್ನು ಕಣ್ಣಾರೆ ನೋಡಿರುವುದರಿಂದ ಈ ಮಾತಿಗೆ ಒತ್ತು ನೀಡಬೇಕಾಗಿದೆ ಎಂದು ಪುಸ್ತಕದ ಮುನ್ನುಡಿಯಲ್ಲಿ ಸುಜಾತ ತಿಳಿಸಿದ್ದಾರೆ.

About the Author

ವಿಜಯ ಪದ್ಮಶಾಲಿ
(03 July 1969)

ಕವಯತ್ರಿ ವಿಜಯ ಪದ್ಮಶಾಲಿ ಅವರು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಯಲ್ದೂರಿನವರು. ತಂದೆ ರಂಗಸಂದ್ರಂ ಹನುಮಂತಪ್ಪ ತಾಯಿ ವೆಂಕಟಮ್ಮ.  ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರೆ. ಪುಸ್ತಕಗಳನ್ನು ಓದುವುದು ಅವರ ನೆಚ್ಚಿನ ಹವ್ಯಾಸ. ಕತೆ, ಕವನ, ಲೇಖನ, ಷಟ್ಪದಿ, ಮುಕ್ತಕ, ಚುಟುಕು, ಹನಿಗವನ ಬರೆಯುವುದರಲ್ಲಿ ಆಸಕ್ತಿ ಹೊಂದಿದವರು. ಹದಿನೈದು ವರ್ಷಗಳಿಂದ ಸ್ಥಳೀಯ ಪತ್ರಿಕೆಗಳಿಗೆ ಪದಬಂಧ ರಚನೆಕಾರರು. ’ಭಾವೋಲ್ಲಾಸ’ ಅವರ ಪ್ರಥಮ ಕವನ ಸಂಕಲನ. ಕಾವ್ಯ ಕಲ್ಪವಲ್ಲಿ ಎಂಬುದು ಕಾವ್ಯನಾಮ. ಪ್ರಶಸ್ತಿಗಳು :  ತ್ರಿಕಾಲಜ್ಞಾನಿ ಕೈವಾರ ತಾತಯ್ಯ ರಾಷ್ಟ್ರ ಪ್ರಶಸ್ತಿ ,ಕನ್ನಡ ಸಾಹಿತ್ಯರತ್ನ ರಾಜ್ಯ ಪ್ರಶಸ್ತಿ, ಸಾಹಿತ್ಯ ಸುಮ ಪ್ರಶಸ್ತಿ  ಕೃತಿಗಳು :  ಭಾವೋಲ್ಲಾಸ ಕವನ ಸಂಕಲನ , ...

READ MORE

Related Books