ಸಲಾಉದ್ದೀನರ ಮಗನಾದ ಅಹಮ್ಮದ ಕಾದಂಬರಿಯ ಮುಖ್ಯ ಪಾತ್ರಧಾರಿಯಾದರೂ ಕಾದಂಬರಿಯ ಹೆಚ್ಚು ಭಾಗವನ್ನು ಆವರಿಸಿದವರು ಸಲಾಉದ್ಧೀನರು. ಮುಂಬೈ ಬದುಕಿನ ಚಿತ್ರಣವನ್ನು ಅಹಮ್ಮದ ಎಳೆಎಳೆಯಾಗಿ ಬಿಚ್ಚಿಡುತ್ತಲೇ ಅಂದಿನ ಮುಂಬೈ ಪರಿಸ್ಥಿತಿ, ಅಲ್ಲಿ ನಡೆಯುತ್ತಿದ್ದ ಕೊಲೆ, ಖೂನಿಗಳ ಚಿತ್ರಣ, ಅಂದಿನ ದೇಶದ ಪರಿಸ್ಥಿತಿಯನ್ನು ಎಳೆಯಾಗಿ ಬಿಚ್ಚಿಡುತ್ತಾನೆ. ಅಂದಿನ ಸನ್ನಿವೇಶಗಳು ಅಹಮ್ಮದರ ಮೇಲೆ ಹೇಗೆಲ್ಲ ಪರಿಣಾಮ ಬೀರಿದವು ಎಂಬುದನ್ನು ಅಹಮ್ಮದನು ಓದುಗರಿಗೆ ನೀಡುತ್ತಾನೆ. ಶಿವಮೊಗ್ಗದ ಕರ್ನಾಟಕ ಲೇಖಕರ ಸಂಘವು ಕುವೆಂಪು ಅವರ ಹೆಸರಿನಲ್ಲಿ ಕೊಡುವ ಅತ್ಯುತ್ತಮ ಕಾದಂಬರಿ- 2019ನೇ ಸಾಲಿನ ಪುಸ್ತಕ ಬಹುಮಾನವು ಈ ಕೃತಿಗೆ ಸಂದಿದೆ.
ಸಾಹಿತಿ, ಚಿಂತಕ, ಕನ್ನಡ ಸಾಹಿತ್ಯ ಆಕಾಡೆಮಿ ಸದಸ್ಯರಾದ ರಾಜಶೇಖರ ಮಠಪತಿ (ರಾಗಂ) ಅವರು ಹುಟ್ಟಿದ್ದು ಬೆಳಗಾಂವ ಜಿಲ್ಲೆಯ ತೆಲಸಂಗದಲ್ಲಿ. ಕರ್ನಾಟಕದ ಗಡಿಯ ಊರಾದ ಚಡಚಣದಲ್ಲಿ ಪ್ರಾಥಮಿಕದಿಂದ ಪದವಿಪೂರ್ವದ ಶಿಕ್ಷಣ, ನಂತರ ಬಿಜಾಪೂರ ಮತ್ತು ಸೊಲ್ಲಾಪುಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣ, ಕ.ವಿ.ವಿ ಧಾರವಾಡದಿಂದ ಆಂಗ್ಲ ಸಾಹಿತಿ, ಸಿನಿಮಾ ನಿರ್ದೇಶಕ,ಪತ್ರಕರ್ತ, ಕೆ.ಎ.ಅಬ್ಬಾಸರನ್ನು ಕುರಿತು ಪಿ.ಹೆಚ್.ಡಿ - ಹೀಗೆ ಶೈಕ್ಷಣಿಕ ಬದುಕಿನ ಹಲವು ಹಂತಗಳನ್ನು ಗಳಿಸಿದ್ದಾರೆ. ಇದುವರೆಗೆ ಅವರು ಕನ್ನಡ, ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬರೆದ ಕೃತಿಗಳ ಸಂಖ್ಯೆ ಅರವತ್ತು ಅಂಕಿಯನ್ನು ದಾಟುತ್ತದೆ. ಕಾವ್ಯ, ಕತೆ, ನಾಟಕ, ಪ್ರಬಂಧ, ಅಂಕಣ, ಸಂಶೋಧನೆ, ...
READ MORE