ಭಾರತವನ್ನು ಆಳುತ್ತಿದ್ದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಡಳಿತದ ವಿರುದ್ಧ ಕಿತ್ತೂರು ಸಂಸ್ಥಾನದ ರಾಣಿ ಚೆನ್ನಮ್ಮಳ ಹೋರಾಟದ (1828) ಬದುಕುನ್ನು ಕಟ್ಟಿಕೊಡುವ ಐತಿಹಾಸಿಕ ಕಾದಂಬರಿ ಇದು. ಡಾ. ಬಸವರಾಜ ನಾಯ್ಕರ್ ಅವರು ಆಂಗ್ಲ ಭಾಷೆಯಲ್ಲಿ ರಚಿಸಿದ್ದು, ಸಂಸ್ಥಾನದ ಕೆಲ ಕುತಂತ್ರಿಗಳ ಹುನ್ನಾರಕ್ಕೆ ಚೆನ್ಮಮ್ಮ ಬಲಿಯಾದಳು. ತಮ್ಮದೇ ಆದ ಸಂಸ್ಥಾನ ವ್ಯಾಪ್ತಿಯ ಬೈಲಹೊಂಗಲ ಕೋಟೆಯಲ್ಲಿ ಸೆರೆಯಾಳಾಗಿ ಹುತಾತ್ಮಳಾದಳು. ಈ ಕುರಿತ ಐತಿಹಾಸಿಕ ಮಾಹಿತಿ ಒಳಗೊಂಡ ಕೃತಿ ಇದು. ಬ್ರಿಟಿಷರ ದುರಾಡಳಿತ ಹಾಗೂ ಚೆನ್ನಮ್ಮಾಳ ಹೋರಾಟ, ದೇಶಾಭಿಮಾನ, ರಾಜನಿಷ್ಠೆಯನ್ನು ಉಳೀಸಿಕೊಳ್ಳುವ ಎದೆಗಾರಿಕೆ ಇವೆಲ್ಲವನ್ನೂ ಚಿತ್ರಿಸಲಾಗಿದೆ. ಕಥಾ ವಸ್ತು, ಸನ್ನಿವೇಶಗಳ ಜೋಡಣೆ, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸಂಭಾಷಣೆಯ ಗತ್ತು ಇತ್ಯಾದಿ ಅಂಶಗಳಿಂದ ಈ ಕಾದಂಬರಿ ಓದುಗರ ಗಮನ ಸೆಳೆಯುತ್ತದೆ. ಬೆಳಗಾವಿಯ ರಾಣಿ ಕಿತ್ತೂರು ಚೆನ್ನಮ್ಮ ವಿಶ್ವವಿದ್ಯಾಲಯದ ಎಂ.ಎ. ವಿದ್ಯಾರ್ಥಿಗಳಿಗೆ ಈ ಕೃತಿಯು ಪಠ್ಯವಾಗಿತ್ತು.
ಡಾ. ಬಸವರಾಜ ನಾಯ್ಕರ್ ಅವರು ಮೂಲತಃ ಗದಗ (ಜನನ: 01-08-1949) ಜಿಲ್ಲೆಯ ನರಗುಂದದವರು. ತಂದೆ ಶಿವಶಂಕರಪ್ಪ ನಾಯ್ಕರ, ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣ, ನರಗುಂದದಲ್ಲಿ ಪ್ರೌಢಶಿಕ್ಷಣ ಮತ್ತೇ ಧಾರವಾಡದಲ್ಲಿ ಪಿಯುಸಿಯಿಂದ ಕರ್ನಾಟಕ ವಿ.ವಿಯಲ್ಲಿ ಸ್ನಾತಕೋತ್ತರ ಪದವಿ (ಎಂ.ಎ-ಇಂಗ್ಲಿಷ್) ಹಾಗೂ ಕ್ಯಾಲಿಫೋರ್ನಿಯಾದಿಂದ ಡಿ.ಲಿಟ್ ಪದವೀಧರರು. ಗುಲಬರ್ಗಾ ವಿ.ವಿಯಲ್ಲಿ ಸಂಶೋಧನಾ ಸಹಾಯಕರಾಗಿ ವೃತ್ತಿ ಜೀವನ ಆರಂಭಿಸಿ ಅಲ್ಲಿಯೇ ಉಪನ್ಯಾಸಕರಾಗಿ ರೀಡರ್ ಆಗಿ ನಂತರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರೀಡರ್, ಪ್ರೊಫೆಸರ್, ಪ್ರೊಫೆಸರ್ ಎಮಿರಿಟಿಸ್ ಆಗಿ (2011-12) ನಿವೃತ್ತಿಯಾದರು. ಅನುವಾದಿತ ಕೃತಿಗಳು: ಪಡುವಣ ನಾಡಿನ ಪ್ರೇಮವೀರ- 1975, ಜೋಗೀಭಾವಿ-1976, ಕೊಳ್ಳದ ನೆರಳು-1978, ಹುಚ್ಚುಹೊಳೆ-1980, ನಿಗೂಢ ಸೌಧ (11 ಫ್ರೆಂಚ್ ಕಥೆಗಳ ಅನುವಾದ)-1982, ಗೋವರ್ಧನರಾಮ-1984, ಭಾರತೀಯ ಇಂಗ್ಲೀಷ್ ಸಾಹಿತ್ಯ ಚರಿತ್ರೆ-2006, ಕೆಂಪು ...
READ MORE