‘ನಾತಿಚರಾಮಿ’ ಕೃತಿಯು ಎನ್. ಸಂಧ್ಯಾರಾಣಿ ಅವರ ಕಾದಂಬರಿಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ಸಾಲುಗಳು ಹೀಗಿವೆ; ಮದುವೆಯ ಪ್ರಮಾಣದಲ್ಲಿ ‘ನಾತಿಚರಾಮಿ’ ನಿನ್ನ ಹೊರತಾಗಿ ಅಲ್ಲ ಎನ್ನುವ ಮಾತು ಧರ್ಮ, ಅರ್ಥ, ಮೋಕ್ಷಗಳ ಜೊತೆಯಲ್ಲಿ ಕಾಮಕ್ಕೂ ಅನ್ವಯವಾಗುತ್ತದೆ. ಈ ಪ್ರಮಾಣವು ಗೌರಿಯ ಪಾಲಿಗೆ ನಂಬಿಕೆ, ಭರವಸೆ ಆಗಬೇಕಿತ್ತು, ಆದರೆ ಅದು ಒಂದು ಅಗೋಚರ ಬಂಧನವೂ ಆಗಿರುತ್ತದೆ. ಆ ಬಂಧನ ಕೇವಲ ಮಾಡಿದ ಆ ಪ್ರಮಾಣದ್ದಲ್ಲ, ಬಾಲ್ಯದಿಂದಲೂ ಸಮಾಜದಿಂದ ಕಲಿಸಲ್ಪಟ್ಟ ಸೋ ಕಾಲ್ಡ್ ಮೌಲ್ಯಗಳದ್ದು, ನಂಬಿಕೆಗಳದ್ದು, ನಿರೀಕ್ಷೆಗಳದ್ದು. ಗಂಡ ಬಿಟ್ಟು ಹೋದಮೇಲೆ ಸಹ ದಾಂಪತ್ಯದ ಈ ಪ್ರಮಾಣವನ್ನು ಕಳಚಿಕೊಳ್ಳುವುದು ಗೌರಿಗೆ ಸಲೀಸಲ್ಲ. ಇದು, ಗೌರಿ ಅವುಗಳನ್ನು ದಾಟುವ ಕಥೆ, ಆ ಮೂಲಕ ಬದುಕಿನ ಸಮೀಕರಣದಲ್ಲಿ ತನ್ನನ್ನು ತಾನು ಪಡೆದುಕೊಳ್ಳುವ ಕಥೆ ಇದಾಗಿದೆ.
ಪತ್ರಕರ್ತೆ, ಲೇಖಕಿ, ಸಿನಿಮಾ ವಿಮರ್ಶಕಿ ಸಂಧ್ಯಾರಾಣಿ ಅವರು ಕೋಲಾರ ಜಿಲ್ಲೆಯ ಬಂಗಾರಪೇಟೆಯವರು. ಚಿನ್ನದ ಗಣಿ ಕೆ.ಜೆ.ಎಫ್‌ನಲ್ಲಿ ಪದವಿ ಶಿಕ್ಷಣ ಪಡೆದಿರುವ ಇವರು ಪ್ರಸ್ತುತ ಹವ್ಯಾಸಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ಕೆಲವು ಇ-ಪತ್ರಿಕೆಗಳ ಅಂಕಣಕಾರ್ತಿಯಾಗಿರುವ ಇವರು ಬರೆದಿರುವ ಪ್ರಮುಖ ಕೃತಿಗಳೆಂದರೆ ಯಾಕೆ ಕಾಡುತಿದೆ ಸುಮ್ಮನೆ(ಅಂಕಣ ಬರಹಗಳು), ತುಂಬೆ ಹೂ (ಜೀವನ ಚರಿತ್ರೆ), ಪೂರ್ವಿ ಕಲ್ಯಾಣಿ (ನಾಟಕ) ಮುಂತಾದವು. ರಾಷ್ಟ್ರ ಪ್ರಶಸ್ತಿ ವಿಜೇತ ನಾತೀಚರಾಮಿ ಸಿನಿಮಾಕ್ಕೆ ಚಿತ್ರಕತೆ ಬರೆದಿದ್ದರು. ...
READ MORE