ಅಡ್ಡ ಹಾದಿ ಭದ್ರಾವತಿ ರಾಮಾಚಾರಿ ಕಾದಂಬರಿಯಾಗಿದೆ. ಪ್ರಸ್ತುತ ಈ ಕಾದಂಬರಿ ಸಾರ್ವತ್ರಿಕ ಜೀವನದ ಹಲವು ಆಯಾಮಗಳನ್ನು ಎಳೆ ಎಳೆಯಾಗಿ ವಿವರಿಸುತ್ತ, ವಿಸ್ತಾರಗೊಳಿಸುತ್ತ ತನ್ನದೇ ಆದ ಪರಿಹಾರಗಳನ್ನು ಸೂಚಿಸುವಲ್ಲಿ ಯಶಸ್ವಿಯಾಗುತ್ತದೆ. ಕುಮಾರ್ ಭದ್ರಾವತಿಯವರ ಹತ್ತು ಹಲವು ಬರಹಗಳನ್ನು, ಕೃತಿಗಳನ್ನು ಓದಿ ಮೆಚ್ಚಿದ ನೀವು ಇದನ್ನೂ ಸ್ವಾಗತಿಸುತ್ತೀರೆಂಬ ನಂಬಿಕೆ ನನಗಿದೆ. ಕಾದಂಬರಿಯ ವಸ್ತು, ಪಾತ್ರಗಳ ವೈವಿದ್ಯಮಯ ಸೃಷ್ಟಿ ನನ್ನನ್ನು ಬಹಳವೇ ಕಾಡಿತು, ಸರಳ ಸುಲಲಿತವಾದ ಶೈಲಿಯಲ್ಲಿ 'ಅಡ್ಡ ಹಾದಿ' ಕಾದಂಬರಿ ಹಲವು ಕಾರಣಗಳಿಂದ ಆಪ್ಯಾಯಮಾನವೆನಿಸುತ್ತದೆ.
ಕುಮಾರ್ ಭದ್ರಾವತಿ ತಂದೆ ದಿ. ನಿಂಗೇಗೌಡ ತಾಯಿ ದಿ. ಹೊಂಬಮ್ಮ. ಬಿ.ಎ, ಬಿ.ಲಿಬ್ ಸೈನ್ಸ್, ಎಂ.ಲಿಬ್ ಸೈನ್ಸ್ ವಿದ್ಯಾರ್ಹತೆ ಪಡೆದು ಕರ್ನಾಟಕ ಸರ್ಕಾರ ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದಾರೆ. ಕರ್ನಾಟಕ ರಾಜ್ಯದ ವಿವಿಧ ಪತ್ರಿಕೆಗಳಲ್ಲಿ 40 ಕ್ಕೂ ಹೆಚ್ಚು ಕಥೆಗಳು ಪ್ರಕಟವಾಗಿವೆ. ರಂಗಭೂಮಿ ,ಸಂಪಾದಕೀಯ ಮಂಡಳಿಯಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ. ಕಾದಂಬರಿಗಳು ಮೇಡಂ ಹೇಳಿದ ಕಥೆ (ಮಕ್ಕಳ ಕಾದಂಬರಿ) 1989, (2015 ರಲ್ಲಿ ಚಲನಚಿತ್ರವಾದ ಕಾದಂಬರಿ), ಮಿಸ್ಟರ್ ಎಕ್ಸ್ (ಪತ್ತೆದಾರಿ ಕಾದಂಬರಿ) 1990 , ಬಣ್ಣದ ಚಿಟ್ಟೆ (ಮಕ್ಕಳ ಸಾಹಿತ್ಯ) 1991 , ನಮ್ಮ ಚಂದಿರ (ಮಕ್ಕಳ ...
READ MORE