'ಬಿಟ್ಟು ಹೋದ ಮನುಷ್ಯ’ ಕೃತಿಯು ಮೊಗಳ್ಳಿ ಗಣೇಶ್ ಅವರ ಕಾವ್ಯಾತ್ಮಕ ಶೈಲಿಯ ವಿಶಿಷ್ಟ ಕಾದಂಬರಿಯಾಗಿದೆ. ಬಿಟ್ಟು ಹೋದ ಮನುಷ್ಯನ ಮುಖ್ಯ ಕಥಾ ವಸ್ತು ನಾಗರೀಕತೆ ಹಾಗೂ ಮನುಷ್ಯ ಸಂಬಂಧಗಳಲ್ಲಿನ ಜಟಿಲತೆ. ಲೇಖಕರೇ ಹೇಳುವಂತೆ "ಗುರಿಯಿಲ್ಲದೆ,ಆದರೆ ಗುರಿ ಇದೆ ಎಂದು ಹುಡುಕಾಡುತ್ತ ಗುರಿತಪ್ಪಿ ಕಳೆದುಹೋಗುವ ಪಾತ್ರಗಳನ್ನು" ಈ ಕಥನ ಒಳಗೊಂಡಿದೆ. ಹಾಗೆಯೇ ಇಲ್ಲಿ ಮಾನವ ಸಂದರ್ಭಗಳು ಸರಣಿಯಂತೆ ಒಂದಕ್ಕೊಂದು ಬೆಸೆದುಕೊಂಡಿವೆ. " ಸಾಂಸಾರಿಕ ಜಂಜಾಟದಿಂದ ಆರಂಭವಾಗುವ ಈ ಕಥನ ವಿಶ್ವಾತ್ಮಕವಾಗಿ ಬೆಳೆದು ಸಂಬಂಧಗಳನ್ನು ಆರ್ದ್ರವಾಗಿ ತಡಕಾಡುತ್ತವೆ." ಕಾದಂಬರಿಯ ಮುಖ್ಯ ಪಾತ್ರಗಳಾದ ಭೌತವಿಜ್ಞಾನಿ ತಂದೆ,ಅವನ ಹೆಂಡತಿ,ಮಗ,ಮೂವರು ಹೆಣ್ಣುಮಕ್ಕಳು ತಮ್ಮದೇ ಹಾದಿಯ ಹುಡುಕಾಟ ಸಂಘರ್ಷಗಳಲ್ಲಿರುವವರು. ಇಲ್ಲಿ ಬರುವ ಯಾವ ಪಾತ್ರಗಳಿಗೂ ಹೆಸರಿಲ್ಲ, ಬದಲಿಗೆ ತಮ್ಮ ಕಾರ್ಯಕ್ಷೇತ್ರ ಸಂಬಂಧಗಳ ಮುಖಾಂತರ ಗುರುತಿಸಲ್ಪಡುತ್ತಾರೆ. ಈ ಕಥನ ಮನುಷ್ಯ ಸಂಬಂಧಗಳ, ನಾನಾ ಭಾವಗಳ ಸಂಕೀರ್ಣ ಚಿತ್ರಶಾಲೆಯಂತಿದೆ. ಮನುಷ್ಯರ ಅನಿವಾರ್ಯ ವಿದಾಯದ ಸಂಕೀರ್ಣ ಪಯಣವನ್ನು ಒಂದು ಸ್ವಪ್ನದಂತೆ ನಿರೂಪಿಸುತ್ತದೆ.
ಕತೆಗಾರ ಮೊಗಳ್ಳಿ ಗಣೇಶ್ ಅವರು ಹುಟ್ಟಿದ್ದು ಚನ್ನಪಟ್ಟಣ ತಾಲ್ಲೂಕಿನ ಸಂತೆಮೊಗೇನಹಳ್ಳಿ. ಬಾಲ್ಯದ ದಿನಗಳನ್ನು ಹಳ್ಳಿಯಲ್ಲಿ ಕಳೆದ ಮೊಗಳ್ಳಿ ಅವರು ತಮ್ಮ ಅನುಭವವನ್ನು ವಿಶಿಷ್ಟ, ವಿನ್ಯಾಸದಲ್ಲಿ ಸೊಗಸಾದ ಕಥೆಗಳನ್ನಾಗಿ ಕಟ್ಟಿಕೊಡಬಲ್ಲರು. ಕನ್ನಡ ಕಥನ ಪರಂಪರೆಗೆ ಹೊಸತನ ನೀಡಿದ ಅವರು ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಜಾನಪದ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರು. ಬುಗುರಿ, ಮಣ್ಣು, ಅತ್ತೆ, ಭೂಮಿ, ಕನ್ನೆಮಳೆ (ಕಥಾ ಸಂಕಲನಗಳು), ಮೊಗಳ್ಳಿ ಕಥೆಗಳು (ಆವರೆಗಿನ ಬಹುಪಾಲು ಕಥೆಗಳ ಸಂಕಲನ), ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಅವರ ಕಥೆಗಳು ನಾಲ್ಕು ಬಾರಿ ಬಹುಮಾನ ಪಡೆದಿವೆ- ಒಂದು ಹಳೆಯ ಚಡ್ಡಿ (1989), ಬುಗುರಿ (1990), ಬತ್ತ (1991), ...
READ MORE