’ಶರ್ಮಿಳಾ’ ಕೃತಿಯು ಹಿರಿಯ ಲೇಖಕಿ ಡಾ. ಕಮಲಾ ಹಂಪನಾ ಅವರ ಕಾದಂಬರಿ. ಹೂ ಹಣ್ಣು ಬಿಟ್ಟು ಜೀವ ಸಂಕುಲಕ್ಕೆ ಆಸರೆಯಾಗಿದ್ದ ದೊಡ್ಡ ಮರವೊಂದು ಇದ್ದಕ್ಕಿದ ಹಾಗೆ ಬೀಸಿ ಅಪ್ಪಳಿಸಿದ ಚಂಡಮಾರುತಕ್ಕೆ ಸಿಕ್ಕಿ ಬುಡಸಹಿತ ಧರೆಗುರುಳಿದ ರೂಪಕ ಸ್ಮೃತಿಪಟಲದಲ್ಲಿ ಸುಳಿದು ಹೋಯಿತು. ಚಕ್ರಾರ ಪಂಕ್ತಿರಿವಗಚ್ಛತಿ ಭಾಗ್ಯಪಂಕ್ತಿಃ ಅದೃಷ್ಟದಲೆಗಳು ಏಳುತ್ತವೆ, ಬೀಳುತ್ತವೆ. ಧೃತಿಗೆಡದೆ ಮತ್ತೆ ಚೇತರಿಸಿಕೊಂಡ ಸಂಸಾರದ ಸಂಕಥನ ಈ ಪುಟ್ಟ ಕಾದಂಬರಿಯ ಕೇಂದ್ರ. ಜೀವನದಲ್ಲಿ ಸೋತು ಸುಣ್ಣವಾಗುವ ಪ್ರಸಂಗಗಳನ್ನು ಎಲ್ಲೆಲ್ಲೂ ಕಾಣುತ್ತೇವೆ. ಅಂಥವರು ಹತಾಶರಾಗಿ ಕೈ ಚೆಲ್ಲಿ ಆತ್ಮಹತ್ಯೆಗೆ ಶರಣಾಗದೆ, ಎದೆಗುಂದದೆ ಬದುಕುವ ದಾರಿಗೆ ಹೆಜ್ಜೆ ಹಾಕಬೇಕು. ಅಂಥದೊಂದು ಆತ್ಮಸ್ಥೈರ್ಯದ ಪ್ರತೀಕ ಇಲ್ಲಿರುವ ಕಥಾ ನಾಯಕಿ ಶರ್ಮಿಳೆ. ಇದು ಬಿದ್ದ ಕಥೆಯೊಂದಿಗೆ ಎದ್ದ ಕತೆಯೂ ಆಗಿರುವುದು ಗಮನಾರ್ಹವಾಗಿದೆ ಎಂಬುದು ಲೇಖಕಿಯ ಅಭಿಪ್ರಾಯವಾಗಿದೆ.
ಲೇಖಕಿಯಾಗಿ ಚಿರಪರಿಚಿತರಾಗಿರುವ ಕಮಲಾ ಹಂಪನಾ ಅವರು ಪ್ರಾಕೃತ, ಜೈನಶಾಸ್ತ್ರದಲ್ಲಿ ಪರಿಣಿತರು. ಬೆಂಗಳೂರು ಜಿಲ್ಲೆ ದೇವನಹಳ್ಳಿಯಲ್ಲಿ 1935ರ ಅಕ್ಟೋಬರ್ 28 ರಂದು ಜನಿಸಿದರು. ತಂದೆ ಸಿ. ರಂಗಧಾಮನಾಯಕ್- ತಾಯಿ ಲಕ್ಷಮ್ಮ. ಚಳ್ಳಕೆರೆಯಲ್ಲಿ ಪ್ರಾರಂಭವಾದ ಪ್ರಾಥಮಿಕ ವಿದ್ಯಾಭ್ಯಾಸ ಬೇರೆ ಬೇರೆ ಊರುಗಳಲ್ಲಿ ಮುಂದುವರಿಯಿತು. ತುಮಕೂರಿನಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸವಾಗಿ, ಕಾಲೇಜು ವಿದ್ಯಾಭ್ಯಾಸ ಮೈಸೂರಿನಲ್ಲಿ ಮುಂದುವರೆದು ಬಿ.ಎ. ಆನರ್ಸ್ (1958) ಮಾಡಿದರು. ಕನ್ನಡ ಅಧ್ಯಾಪಕಿಯಾಗಿ (1959) ಶಿಕ್ಷಣ ವೃತ್ತಿಗೆ ಪ್ರವೇಶಿಸಿ, ಬೆಂಗಳೂರು ಮತ್ತು ಮೈಸೂರು ಮಹಾರಾಣಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಬೆಂಗಳೂರಿನ ವಿಜಯನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದರು. ಸರ್ಕಾರಿ ...
READ MORE