ಆಡುಕಳ -ಶ್ರೀಧರ ಬಳಗಾರ ಬರೆದ ಕಾದಂಬರಿ. ಉತ್ತರ ಕನ್ನಡದ ಯಲ್ಲಾಪುರದ ಬಳಿಯಿರುವ ಹಳ್ಳಿ. ಈ ಹಳ್ಳಿಯ ಸುತ್ತಮುತ್ತಲು ನಡೆಯುವ ಈ ಕಾದಂಬರಿಯ ಸನ್ನಿವೇಶಗಳು ಉತ್ತರ ಕರ್ನಾಟಕದ ಜನಜೀವನ-ಮನಸ್ಥಿತಿ-ಪ್ರಾದೇಶಿಕ ವಿಭಿನ್ನತೆಯ ಕುರಿತು ಸಮಗ್ರ ಚಿತ್ರಣವನ್ನು ನೀಡುತ್ತದೆ.ಈ ಪ್ರದೇಶದ ಸಣ್ಣ ಸಮುದಾಯವೊಂದರ ನಿತ್ಯದ ಬದುಕಿನ ವಿವರಗಳು, ಬದಲಾಗುತ್ತಿರುವ ಸಮಾಜದlಲ್ಲಿಯ ಮೌಲ್ಯದ ಸಂಘರ್ಷ ಇತ್ಯಾದಿ ಓದುಗರನ್ನು ಚಿಂತನೆಗೆ ಪ್ರೇರೇಪಿಸುತ್ತದೆ.
ಲೇಖಕ ಶ್ರೀಧರ ಬಳಗಾರ ಅವರ ಊರು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಸಮೀಪದಲ್ಲಿರುವ ಬಳಗಾರ. ಕುಮಟಾದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಅಧೋಮುಖ', 'ಮುಖಾಂತರ', `ಇಳೆ ಎಂಬ ಕನಸು', 'ಒಂದು ಫೋಟೋದ ನೆಗೆಟಿವ್', 'ಅಮೃತಪಡಿ' ಎಂಬ ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಜೊತೆಗೆ 'ಕೇತಕಿಯ ಬನ', 'ಆಡುಕಳ' ಎಂಬ ಕಾದಂಬರಿಗಳು, 'ರಥ ಬೀದಿ' ಮತ್ತು 'ಕಾಲಪಲ್ಲಟ' ಅಂಕಣ ಬರಹಗಳು, ಹಾಗೇ ಕೆಲವು ಕಥೆಗಳು ಇಂಗ್ಲಿಷ್, ತಮಿಳು, ಹಿಂದಿಗೆ ಭಾಷಾಂತರಗೊಂಡಿವೆ. ಇನ್ನು ಕರ್ನಾಟಕ ವಿಶ್ವವಿದ್ಯಾಲಯ ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿಯ ಪದವಿ ಪಠ್ಯಕ್ಕೆ (ಕನ್ನಡ) ಸೇರ್ಪಡೆಯಾಗಿವೆ. ...
READ MORE