ಪ್ರೇಮಭಿಕ್ಷು

Author : ಪ್ರಭುಶಂಕರ

Pages 112

₹ 75.00




Year of Publication: 2016
Published by: ಅಭಿನವ ಪ್ರಕಾಶನ
Address: 17/18-2, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ಕುವೆಂಪು ಅವರ ಪ್ರೀತಿಯ ಶಿಷ್ಯಂದಿರಲ್ಲಿ ಪ್ರಭುಶಂಕರ ಒಬ್ಬರು. ಸಾಹಿತ್ಯ ಕ್ಷೇತ್ರ ಮತ್ತು ಬೋಧನಾ ವಲಯದಲ್ಲಿ ಅವರ ಸಾಧನೆ ವಿಶಿಷ್ಟವಾದುದು. ’ಪ್ರೇಮಭಿಕ್ಷು’ ಒಲವಿನ ಬುದ್ಧನ ಕುರಿತಾದ ಅವರ ಕಾದಂಬರಿ. ಇದು ಅನೇಕ ವರ್ಷಗಳ ಕಾಲ ವಿದ್ಯಾರ್ಥಿಗಳಿಗೆ ಪಠ್ಯವಾಗಿದ್ದಂತಹ ಮಹತ್ವದ ಕೃತಿ. ಇದನ್ನು ಅಭಿನವ ಪ್ರಕಾಶನವು ಮರು ಪ್ರಕಟಣೆ ಮಾಡಿದೆ. ಪ್ರಭುಶಂಕರರ ಕೃತಿ ಆಚಾರ ತಥಾಗತರ ಜೀವನ ಯಾನದ ಒಂದು ಘಟನೆಯನ್ನು ಮುಖ್ಯವಾಗಿಟ್ಟುಕೊಂಡಿದೆ. 

ಅಂಗುಲಿಮಾಲನ ಪರಿವರ್ತನೆ,  ಬುದ್ದನ ಸಂಚಾರ ಪಥದಲ್ಲಿದ್ದ ಅಂಗುಲಿಮಾಲ ಎಂಬ ದರೋಡೆಕೋರನ ಕುರಿತು ಜನಮಾನಸದಲ್ಲಿದ್ದ ಭಯ, ಉತ್ಪ್ರೇಕ್ಷೆಗಳು ಆತನನ್ನು ರಾಕ್ಷಸನಂತೆ ಕಾಣುವ ಹಾಗೆ ಮಾಡಿದ್ದವು. ಸ್ವತಃ ಪರೀಕ್ಷಿಸದೆ ಯಾವುದನ್ನೂ ನಂಬದ, ಅನುಯಾಯಿಗಳಿಗೂ ಅದನ್ನೇ ಬೋಧಿಸಿದ ಆಚಾರ್‍ಯ ಬುದ್ಧರು, ಜೀವದ ಹಂಗನ್ನು ತೊರೆದು ಆತನಿರುವಲ್ಲಿಗೆ ಹೋಗಿ, ಅವನನ್ನು ತಮ್ಮ ಕರುಣೆಯಿಂದ ಪರಿವರ್ತಿತನಾಗುವಂತೆ ಮಾಡುತ್ತಾರೆ.

ಬುದ್ಧನ ಪೂರ್ವಾಶ್ರಮದ ಜೀವಿತಕಥೆ, ಪರಿವರ್ತನೆಗೊಂಡ ನಂತರದ ಪುಣ್ಯಾಕ್ಷಮಯ  ಜೀವನದ ಸಂಘರ್ಷಮಯ ಪರಿಸ್ಥಿತಿ, ಕರುಣೆಯನ್ನು ಬದುಕಿನಲ್ಲಿ ತಾಳಿ ಬಾಳಬೇಕಾದ ಅಗತ್ಯ, ಬುದ್ದನ ವ್ಯಕ್ತಿತ್ವ ಇವೆಲ್ಲವೂ  ಸೊಗಸಾಗಿ ’ಪ್ರೇಮಭಿಕ್ಷು’ಕೃತಿಯಲ್ಲಿ ಸೊಗಸಾಗಿ ಮೂಡಿಬಂದಿವೆ.

“ಪುಣ್ಯಾಕ್ಷ ಅದು ಮುಗಿದ ಕತೆ. ಕರ್ಮಚಕ್ರಕ್ಕೆ ಸಿಕ್ಕಿ ನೀನು ಸುತ್ತುತ್ತಲೇ ಇದ್ದೀಯ ಎಂದೆ. ಈ ದಿನದ ರೀತಿ ಬೇರೆ. ನೀನು ಅದನ್ನು ಮುಗಿಸಿದ್ದೀಯೆ.' “ಕರುಣಾಳು ಗುರುದೇವ. ನೀವು ಕರುಣಾಳು. ಜನ ಒಂದು ಕಣ್ಣನ್ನಾದರೂ ಏಕೆ ಉಳಿಸಿದ್ದಾರೋ ಎನ್ನುತ್ತಿದ್ದೆ. ಈಗ    ಅರಿವಾಯಿತು,  ನಿಮ್ಮ ಮುಖವನ್ನು ನೋಡುತ್ತಿರುವ ಸೌಭಾಗ್ಯಕ್ಕಾಗಿ, ತಂದೆ ನಿಮ್ಮ ಮುಖವನ್ನು ನೋಡುತ್ತ ನೋಡುತ್ತ ಸಾಯುತ್ತೇನೆ.” 'ನೀನೀಗ ಸಾಯುವುದಿಲ್ಲ. ಸತ್ತರೇನಾದಂತಾಯಿತು? ನೀನು ಖಂಡಿತ ಉತ್ತಮಗೊಳ್ಳುತ್ತಿಯಾ. ನೀನು ಮಾಡಬೇಕಾದ ಕೆಲಸ ಬಹಳ  ಇದೆ ಮಗು.' ಬುದ್ಧದೇವ ದಿಗಂತದ ಕಡೆ ನೋಡುತ್ತಾ ಹೇಳಿದ: “ಪುಣ್ಯಾಕ್ಷ, ನಿನ್ನ ಕತೆ ಪ್ರೇಮದ ಶಾಸನವಾಗುತ್ತದೆ. ನೀನು ಪ್ರೇಮ ಶಾಂತಿಯ ಸಂದೇಶವನ್ನು ಹೊತ್ತು ನಾಡಿನ ಮೂಲೆ ಮೂಲೆಗಳಿಗೆ ಹೋಗುತ್ತೀಯ..! ಜನ ನಿನಗೆ ಭಿಕ್ಷೆ ನೀಡುತ್ತಾರೆ. ನೀನು ಅವರಿಗೆ ಪ್ರೇಮಭಿಕ್ಷೆಯನ್ನು ಕೊಡುತ್ತೀಯೆ. ವರ್ಷ ಉರುಳಲಿ, ಶತಮಾನಗಳು ಉರುಳಲಿ. ಒಂದೊಂದು ಹೃದಯವೂ ಬೆಳಕಿನ , ಆಕರವಾಗುವವರೆಗೆ ಶಾಂತಿದೂತರು ಹೀಗೆ ಹೋಗುತ್ತಲೇ ಇರುತ್ತಾರೆ. ಇಂದಲ್ಲ ನಾಳೆ, ನನ್ನ ಹೃದಯದಲ್ಲಿ ನಿರ್ವಾಣದ ಕಡಲು ಉಕ್ಕಿ ಹರಿದಂತೆ, ಒಂದೊಂದು ಜೀವದ ಹೃದಯದಲ್ಲೂ ಉಕ್ಕಿ ಹರಿಯುತ್ತದೆ.' ಇಂತಹ ಕಾದಂಬರಿಯ ಕೆಲವು ಸಾಲುಗಳು ಪ್ರಭುಶಂಕರರ ಸಾಹಿತ್ಯ ಕೃಷಿಯ ಮಹತ್ವವನ್ನು ಸಾರುವಂತದ್ದು. 

 

About the Author

ಪ್ರಭುಶಂಕರ
(15 February 1929)

ಬರಹಗಾರರಾದ ಪ್ರಭುಶಂಕರ ಅವರು ಜನಿಸಿದ್ದು 1929  ಫೆಬ್ರುವರಿ 15ರಂದು. ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಇವರು ಕುವೆಂಪು ಅವರ ಮಾರ್ಗದರ್ಶನದಲ್ಲಿ ‘ಕನ್ನಡದಲ್ಲಿ ಭಾವಗೀತೆ’ ಪ್ರಬಂಧ ಮಂಡಿಸಿ ಪಿಎಚ್‌ಡಿ ಪದವಿ ಪಡೆದರು.  ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಇವರು  ಅಮೆರಿಕ ಭೇಟಿಯ ಕುರಿತು ’ಅಮೆರಿಕಾದಲ್ಲಿ ನಾನು ಮತ್ತು ಶಾಂತಿ’ ಎಂಬ ಪ್ರವಾಸ ಕಥನ ರಚಿಸಿದ್ದಾರೆ. ಅವರ ಕೆಲವು ಕೃತಿಗಳು- ಕನ್ನಡದಲ್ಲಿ ಭಾವಗೀತೆ, ಅಂಗುಲೀಮಾಲ, ಆಮ್ರಪಾಲಿ, ಖಲೀಲ್ ಗಿಬ್ರಾನ್, ಕಾವ್ಯಯೋಗ, ಅಮೆರಿಕದಲ್ಲಿ ನಾನು ಶಾಂತಿ, ನಿವೇದಿತಾ, ಜನ-ಮನ, ಚಿಂತೆ-ಚಿಂತನೆ, ಮಂದಹಾಸ ಮೀಮಾಂಸೆ ಇತ್ಯಾದಿ.  ...

READ MORE

Related Books