ವಿ.ಗ.ಕಾನಟಿಕರ್ ಅವರು ಬರೆದಿರುವ ಕೃತಿಯನ್ನುಲೇಖಕ ರಂ.ಶಾ ಅವರು ಕನ್ನಡೀಕರಿಸಿದ್ದಾರೆ. ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಭಾರತೀಯ ಜನಜೀವನದಲ್ಲಿ ಉಂಟಾದ ಧಾರ್ಮಿಕ ಅಲ್ಲೋಲ ಕಲ್ಲೋಲಗಳಿಗೆ ಇಂಗ್ಲೆಂಡ್ ನೇರ ಕಾರಣವಾಯಿತು. ಸಮಾಜ ಸೇವೆ ಮಾಡಲೆಂದು ಅಲ್ಲಿಗೆ ಹೋಗಿ ಕ್ರೈಸ್ತ ಮಿಶನರಿ ಚಟುವಟಿಕೆಗಳ ನಿಜ ಮರ್ಮವೇನೆಂಬುದನ್ನು ಭೋಳೆ ವಿದ್ವತ್ತಿನ ವಿದ್ವಾಂಸನೊಬ್ಬ ಅರಿತ. ಆತ ಕೊನೆಗೂ ಮತಾಂತರವೆಂದರೆ ರಾಷ್ಟ್ರಾಂತರವೆಂಬ ಅರಿವು ಪಡೆದ ಹಿನ್ನೆಲೆಯಲ್ಲಿ ರಚನೆಗೊಂಡ ಪ್ರಶಸ್ತಿ ವಿಜೇತ ಕೃತಿ ಇದು.
ರಂ. ಶಾ. ಎಂದು ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಿತ ಇರುವ ರಂ.ಶಾ. ಲೋಕಾಪುರ ಅವರ ಪೂರ್ಣ ಹೆಸರು ರಂಗನಾಥ ಶಾಮಾಚಾರ್ಯ ಲೋಕಾಪುರ. ಜಮಖಂಡಿ ತಾಲೂಕಿನ ಹುನ್ನೂರಿನಲ್ಲಿ ಜನಿಸಿದ (1935) ರಂಗನಾಥ ಅವರ ತಂದೆ ಬೆಳಗಾವಿ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರು. ಹೈಸ್ಕೂಲಿನಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ರಂ. ಶಾ. ಅವರಿಗೆ ಕನ್ನಡ-ಸಂಸ್ಕೃತ ಭಾಷೆ -ಸಾಹಿತ್ಯದಲ್ಲಿ ಆಸಕ್ತಿ ಬೆಳೆಯಿತು. ಆಗಲೇ ಸಮಕಾಲೀನ ಕನ್ನಡ ಸಾಹಿತ್ಯದ ಅಭ್ಯಾಸದ ಜೊತೆಯಲ್ಲಿ ಪ್ರ. ಗೋ. ಕುಲಕರ್ಣಿ ಅವರಿಂದ ಹಳಗನ್ನಡದ ಪಾಠ ಹೇಳಿಸಿಕೊಂಡರು. ಹೈಸ್ಕೂಲಿನಲ್ಲಿ ಓದುತ್ತಿರುವಾಗಲೇ ಹಿಂದಿ ಭಾಷೆ ಕಲಿತ ಅವರು ಪ್ರೇಮಚಂದರ ಎಂಟು ಹಿಂದಿ ಕಥೆಗಳನ್ನು ...
READ MORE