ಕರ್ನಾಟಕ ರಾಜ್ಯ ಸರ್ಕಾರದ ಪದವಿ ಪೂರ್ವ ಶಿಕ್ಷಣ ಮಂಡಳಿಯು (1973-74) ಪಠ್ಯವಾಗಿಸಿದ್ದ ಅಶೋಕ ಚಕ್ರ ಕಾದಂಬರಿಯನ್ನು ಮಿರ್ಜಿ ಅಣ್ಣಾರಾಯ ಅವರು ಬರೆದಿದ್ದಾರೆ. ಕೃತಿಯ ಪ್ರಸ್ತಾವನೆಯಲ್ಲಿ ‘ದೇಶಕ್ಕೆ ಸ್ವಾತಂತ್ಯ್ರ ಬಂದಿದೆ. ಆದರೆ, ಸ್ವರಾಜ್ಯ ಬಂದಿಲ್ಲ. ಹಳ್ಳಿ ಹಳ್ಳಿಯಲ್ಲೂ ಬಡ ರೈತರ ಸುತ್ತಲೂ ಅವರ ಅಜ್ಞಾನದ ಲಾಭವನ್ನು ಹೊಂದಿ ಕೊಬ್ಬಿರುವ ಘಟಸರ್ಪವೊಂದು ಸುರುಳಿ ಸುತ್ತಿ ಕೂತಿದೆ. ಅದೊಂದು ವಿಷ ವರ್ತುಲ. ಅದರ ಭೀಕರತೆಯನ್ನು ಚಿತ್ರಿಸಲು ಹಾಗೂ ಹಳ್ಳಿಯ ವಾಸ್ತವತೆಯನ್ನು ಕೊಡಲು ಇಲ್ಲಿ ಪ್ರಯತ್ನಿಸಲಾಗಿದೆ' ಎಂದು ಲೇಖಕರು ಸ್ಪಷ್ಟಪಡಿಸಿದ್ದಾರೆ.
ಪ್ರಸಿದ್ಧ ಸಾಹಿತಿಗಳು, ಸಮಾಜ ಸುಧಾರಕರೂ ಆದ ಮಿರ್ಜಿ ಅಣ್ಣಾರಾಯರು ಹುಟ್ಟಿದ್ದು (ಜನನ 25-03-1918, ಮರಣ: 11-12-1975) ಬೆಳಗಾವಿ ಜಿಲ್ಲೆಯ ಶೇಡಬಾಳದಲ್ಲಿ. ಕನ್ನಡ ಭಾಷೆಯ ಜೊತೆಗೆ ಮರಾಠಿ, ಹಿಂದಿ, ಇಂಗ್ಲಿಷ್, ಗುಜರಾತಿ ಭಾಷೆಗಳಲ್ಲಿ ಪ್ರಭುತ್ವ. ಪಡೆದಿದ್ದರು. ನಿಸರ್ಗ’ ಇವರು ಬರೆದ ಮೊದಲ ಕಾದಂಬರಿ. ಭಾಷೆಯ ಹೊಸತನ, ಸರಳ ನಿರೂಪಣೆಯಿಂದ ಕೂಡಿದ ಕಾದಂಬರಿ. ಚಾರಿತ್ರಿಕ ಕಾದಂಬರಿಗಳು: ಸಾಮ್ರಾಟ್ ಶ್ರೇಣಿಕ, ಚಾವುಂಡರಾಯ. ಪೌರಾಣಿಕ ಕಾದಂಬರಿ- ಋಷಭದೇವ. ಕಥಾಸಂಕಲನಗಳು-ಪ್ರಣಯ ಸಮಾ, ಅಮರ ಕಥೆಗಳು, ವಿಜಯಶ್ರೀ. ಶೈಕ್ಷಣಿಕ ಗ್ರಂಥಗಳು-ಭಾಷಾ ಶಿಕ್ಷಣ, ಲೇಖನ ಕಲೆ, ಮೂಲ ಶಿಕ್ಷಣದ ಮೌಲ್ಯಮಾಪನ. ವಿಮರ್ಶಾ ಕೃತಿಗಳು-ದತ್ತವಾಣಿ, ವಿಮರ್ಶೆಯ ಸ್ವರೂಪ, ಭರತೇಶನ ...
READ MORE