ಕಾದಂಬರಿಗಾರ್ತಿ ಶಶಿಕಲ ರಾವ್ ಅವರ ಚೊಚ್ಚಲ ಕಾದಂಬರಿ ಪುನರುಕ್ತಿ. ಈ ಕೃತಿಯಲ್ಲಿ ಲೇಖಕಿಯೇ ಹೇಳಿರುವಂತೆ, ಈ ಪುನರುಕ್ತಿಯ ನಾಮಕರಣ ವಿಶಿಷ್ಟ ಹಾಗೂ ವಿಶೇಷ. ಇಲ್ಲಿಯ ಪ್ರಮುಖ ಪಾತ್ರಗಳಾದ ಡಾ.ಭವಾನಿ, ಸೀತೆ, ಸುಜಯ, ಶ್ಯಾಮಲಾಬಾಯಿ, ಎಲ್ಲರೂ ಜೀವನದಲ್ಲಿ ಒಂದೊಂದು ರೀತಿಯ ಕಷ್ಟಪಡುತ್ತಾರೆ. ಆದರೆ ಭಾವನಾತ್ಮಕವಾಗಿ ನೊಂದು ನರಳಿದ ದುಃಖ ಸಂಕಟವೆಲ್ಲಾ ಒಂದೇ. ಈ ನೋವು ಎಲ್ಲರಲ್ಲೂ ಪುನಃ ಕಾಣಿಸಿದ್ದರಿಂದಲೇ ಈ ಕಾದಂಬರಿ ಶೀರ್ಷಿಕೆಯನ್ನು ‘ಪುನರುಕ್ತಿ’ ಎಂದು ಇಡಲು ತೀರ್ಮಾನಿಸಿದೆ ಎಂದಿದ್ದಾರೆ.
ಕೃತಿಯ ಪರಿವಿಡಿಯಲ್ಲಿ ಹೀಗಾಗಬಾರದಿತ್ತು, ಅಮ್ಮನ ಅತೀಂದ್ರಿಯ ಅರಿವು, ಶಂಕರನ ನಿವೇದನೆ, ಭದ್ರ ಬುನಾದಿ, ಬದಲಾದ ಭವಾನಿ, ಗ್ರೇಟ್ ಎಸ್ಕೇಪ್, ಸ್ನೇಹ ಸಿಂಚನ, ಶಾಂತಿ ಅರಸುತ್ತಾ.., ದೈವ ಸಹಾಯ.., ಧೈರ್ಯಶಾಲಿ, ಚೈತ್ರದ ಸಂತಸ, ಸ್ನೇಹ ಸಿಂಚನ, ಕರುಳ ಬಳ್ಳಿ, ಕಲೆಯ ಬೀಡು, ಉತ್ತರಾಧಿಕಾರಿ?, ಮರಳಿ ಬಂದಳು ಸೀತೆ?, ಅಶ್ವಿನಿ ದೇವತೆ, ಆಶ್ರಯ ನೀಡಿದ ಗುರುದ್ವಾರ ಸೇರಿದಂತೆ 24 ಶೀರ್ಷಿಕೆಗಳ ಕತೆಗಳಿವೆ.
ಲೇಖಕಿ ಶಶಿಕಲ ರಾವ್ ಅವರಿಗೆ ಬಾಲ್ಯದಿಂದಲೂ ಕನ್ನಡದಲ್ಲಿ ಬರೆದು ಪತ್ರಿಕೆಗಳಿಗೆ ಕಳುಹಿಸುವ ಅಭ್ಯಾಸವಿತ್ತು. ವಿಜ್ಞಾನ ವಿಷಯದಲ್ಲಿ ಪದವಿಯನ್ನು ಪಡೆದರೂ ಕನ್ನಡದಲ್ಲಿ ಬರೆಯುವ ಹವ್ಯಾಸವನ್ನು ಹೊಂದಿದ್ದರು. ಹಲವು ವರ್ಷಗಳಿಂದ ಕನ್ನಡದ ಕಂಪಿಲ್ಲದ ನಾಡಿನಲ್ಲಿ ಇರಬೇಕಾಗಿದ್ದರೂ, ಪತ್ರಿಕೆ, ಕಾದಂಬರಿಗಳನ್ನು ತರಿಸಿಕೊಂಡು ಓದುತ್ತಲೇ ಕನ್ನಡದ ಮೇಲಿನ ಆಸಕ್ತಿಯನ್ನು ಕಾಪಾಡಿಕೊಂಡವರು. ಕೃತಿ: ಪುನರುಕ್ತಿ ...
READ MORE