ಋಷಿ ಪಂಚಮಿ – ವೇದೋಪನಿಷತ್ತುಗಳನ್ನು ಓದಿದ ಸತ್ಯಕಾಮರು ವಸಿಷ್ಠ, ವಿಶ್ವಾಮಿತ್ರ, ವಾಮದೇವ ಪಂಚಋಷಿಗಳನ್ನು ಕುರಿತು ’ ಋಷಿ ಪಂಚಮಿ’ ಬರೆದರು.
ವೇದ ಋಷಿ ರಹಸ್ಯದ ಬಗ್ಗೆ ಈ ಕೃತಿಯಲ್ಲಿ ಹೀಗೆ ವರ್ಣಿಸಲಾಗಿದೆ. ’ ಚಂದಿರನೆಡೆಗೆ ಬೆರಳು ಸತ್ಯಕಾಮ ಹುಟ್ಟಿನಿಂದ ಬೆಳೆದವರಲ್ಲ. ಬೆಳೆಯಲೆಂದೇ ಹುಟ್ಟಿದವರು. ಅದಕ್ಕೆ ಹುಟ್ಟಿದ ಮನೆಯನ್ನು ತೊರೆದರು. ಹುಟ್ಟಿಲ್ಲವೆಂಬಂತೆ ಬೆಳೆದರು. ಹುಟ್ಟು ಇಲ್ಲವಾಗುವುದೇ ಹುಟ್ಟಿನ ಗುಟ್ಟು. ದೊಡ್ಡವರು ಮನೆ ತೊರೆದಿದ್ದಾರೆ. ಆಯತನಕ್ಕೆ ಅನಿಕೇತನ ಬೇಕು. ಸತ್ಯಕಾಮರು ನಿಕೇತನ ತೊರೆದ ಆನಂತ. ಅವರ ಮೂಲ ಹೆಸರೂ ಅನಂತನೇ. ಅವರು ಬರೆಹಕ್ಕಿಂತ ದೊಡ್ಡವರು. ಬರೆಹ ಅವರಿಗಿಂತ ಚಿಕ್ಕದು. ದೊಡ್ಡದು ದೂರವಿದೆ ಎಂದೇ ಚಿಕ್ಕದಾಗಿ ಕಾಣಿಸುತ್ತದೆ. ಅವರು “ಮುಚ್ಚಳವ ಮೆಚ್ಚುವವರು” ಹೊಸಬರಿಗೆ ಅವರು ಹಳಬರು. ಹಳಬರಿಗೆ ಅವರು ಹೊಸಬರು ಇಬ್ಬರೂ ಅವರ ಕಡೆಗೊಮ್ಮೆ ನೋಡಬೇಕು. ಈ ಕೃತಿ ಚಂದಿರನೆಡೆಗೆ ಬೆರಳು...’
’ಸತ್ಯಕಾಮ’ ಎಂಬುದು ಅನಂತ ಕೃಷ್ಣಾಚಾರ್ಯ ಶಹಾಪುರ ಅವರ ಕಾವ್ಯನಾಮ. ತಮ್ಮ ಕಾದಂಬರಿ ಹಾಗೂ ತಂತ್ರವಿದ್ಯೆ, ಕೃಷಿಯ ಮೂಲಕ ನಾಡಿನ ಮನೆ ಮಾತಾದವರು ’ಸತ್ಯಕಾಮ’. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಗಲಗಲಿಯಲ್ಲಿ 1920ರ ಮಾರ್ಚ್ 2ರಂದು ಜನಿಸಿದರು. (ಕೆಲವು ಕಡೆ ಏಪ್ರಿಲ್ 16 ಎಂದು ದಾಖಲಾಗಿದೆ.) ಆರಂಭಿಕ ಶಿಕ್ಷಣವನ್ನು ಗಲಗಲಿಯಲ್ಲಿ ಪಡೆದ ಅವರು ಮುಲ್ಕಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಶಾಲೆಯ ಗೊಡವೆಗೇ ಹೋಗದೆ ಒಂದು ವರ್ಷ ಗಲಗಲಿಯಲ್ಲಿಯೇ ಕಳೆದರು. 1935ರಲ್ಲಿ ಬಾಗಲಕೋಟೆಯ ಸಕ್ರಿ ಹೈಸ್ಕೂಲಿಗೆ ಸೇರಿದರಾದರೂ ಓದು ಮುಂದುವರಿಸಲಿಲ್ಲ. ಭಾರತದಲ್ಲಿ ಉಪ್ಪಿನ ಸತ್ಯಾಗ್ರಹ ನಡೆಯುತ್ತಿದ್ದ 1930-31ರಲ್ಲಿ ಬಾಲಕ ಅನಂತ ...
READ MORE