ಲೇಖಕ ಹಾಗೂ ಸಾಹಿತಿ ನಿಡಸಾಲೆ ಪುಟ್ಟಸ್ವಾಮಯ್ಯ ಅವರ ಕಾದಂಬರಿ-ರಾಜಾವಾರ್ಡ್. ಸಾಹಿತಿ ಟಿ.ಎಸ್. ನಾಗರಾಜ್ ಅವರು ಕೃತಿಗೆ ಮುನ್ನುಡಿ ಬರೆದು ‘ಪ್ರೀತಿ-ಪ್ರೇಮ-ಪ್ರಣಯಗಳನ್ನು ಬದಿಗಿಟ್ಟು, ನಮ್ಮ ನಡುವೆ ತಿಳಿದೂ ತಿಳಿಯದಂತೆ ಬೇರು ಬಿಡುತ್ತಿರುವ ಒಂದು ಜ್ವಲಂತ ಸಮಸ್ಯೆಯನ್ನು ವಸ್ತುವಾಗಿರಿಸಿ ರಚಿಸಿರುವ ರಾಜಾವಾರ್ಡ್ ಕಾದಂಬರಿ ಪ್ರಸ್ತುತ ಸನ್ನಿವೇಶದಲ್ಲಿ ಸ್ವಾಗತಾರ್ಹ ಕೃತಿ. ಕೂಡುಕುಟುಂಬಗಳು ಆಧುನಿಕತೆಯ ಅಬ್ಬರದಲ್ಲಿ ಕಣ್ಮರೆಯಾಗಿ, ವೃದ್ಧರು ಅಂದರೆ ಹಿರಿಯ ತಲೆಗಳು ಅನುಭವಿಸುತ್ತಿರುವ ಯಾತನಾಮಯ ಬದುಕನ್ನು ಎಳೆಎಳೆಯಾಗಿ ಸರಳವಾಗಿ ತಮ್ಮ ಕಾದಂಬರಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಜೆ.ಬಿ. ನಾಗರಾಜ್ ಅವರ ‘ಪರಿತ್ಯಕ್ತ ರೋಗಿಗಳ ಕರುಣಾಜನಕ ಕಥೆ’ ಎಂಬ ಲೇಖನದಿಂದ ಪ್ರಭಾವಿತರಾಗಿ ಕಾದಂಬರಿ ಬರೆದಿರುವುದಾಗಿ ಲೇಖಕರು ಹೇಳಿಕೊಂಡಿದ್ದಾರೆ. ವಿನೂತನ ವಸ್ತುವಿನಿಂದಾಗಿ, ಸಮಾಜಮುಖಿ ನಿರೂಪಣೆಯಿಂದಾಗಿ, ವಸ್ತುವಿನ ಆಳಕ್ಕೆ ಇಳಿದು ವ್ಯಕ್ತಪಡಿಸುವ ಲೇಖಕರ ಆಪ್ತ ಭಾವನೆಗಳಿಂದಾಗಿ ಕೃತಿ ಆತ್ಮೀಯವಾಗುತ್ತದೆ’ ಎಂದು ಪ್ರಶಂಸಿಸಿದ್ದಾರೆ.
ಲೇಖಕ ನಿಡಸಾಲೆ ಪುಟ್ಟಸ್ವಾಮಯ್ಯ ಅವರು ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ನಿಡಸಾಲೆ (ಜನನ: 05-02-1951) ಗ್ರಾಮದವರು. ತಂದೆ- ಮುಳವಾಗಲಯ್ಯ, ತಾಯಿ- ನಿಂಗಮ್ಮ. ನಿಡಸಾಲೆಯಲ್ಲಿ ಪ್ರಾಥಮಿಕ, ಹುಲಿಯೂರುದುರ್ಗದಲ್ಲಿ ಪ್ರೌಢಶಾಲೆಯವರೆಗೆ ವ್ಯಾಸಂಗ ಪೂರ್ಣಗೊಳಿಸಿದರು. 1968ರಲ್ಲಿ ಬೆಂಗಳೂರಿನ ಐ.ಟಿ.ಐ.ನಲ್ಲಿ ತರಬೇತಿ ಪಡೆದು, 1969ರಿಂದ ಕೃಷಿ ಇಲಾಖೆಯಲ್ಲಿ ಉದ್ಯೋಗ ಆರಂಭಿಸಿದರು. ರೇಣುಕಾಚಾರ್ಯ ಸಂಜೆ ಕಾಲೇಜಿನಲ್ಲಿ ಪಿ.ಯು.ಸಿ ತೇರ್ಗಡೆ ಯಾಗಿ ಬಿ.ಕಾಂ.ಗೆ ಸೇರ್ಪಡೆಯಾದರು. ಹಿರಿಯ ಸಾಹಿತಿ ಬಿ.ಜಿ. ಸತ್ಯಮೂರ್ತಿಯವರ ಒಡನಾಟದಲ್ಲಿ 1971ರಿಂದ ಸಾಹಿತ್ಯ ಕೃಷಿ ಆರಂಭಿಸಿದ ಅವರು ಸಣ್ಣ ಕಥೆ, ನಾಟಕ, ಕಾದಂಬರಿ ಸೇರಿದಂತೆ ಸಾಹಿತ್ಯ ವಿವಿಧ ಪ್ರಕಾರಗಳಲ್ಲಿ ಕೃತಿ ರಚಿಸಿದ್ದಾರೆ. ಕೃತಿಗಳು: ಗೊಲ್ಲಳ್ಳಿ ತೋಟ’, ‘ಸಾಧನೆಯ ...
READ MORE