ಲೇಖಕಿ ಡಾ. ಶರಣಮ್ಮ ಪಾಟೀಲ್ ಅವರ ಕಾದಂಬರಿ-ಭೂಗರ್ಭ. ಕೋವಿಡ್-19 ವಿರುದ್ಧ ಹೋರಾಡಿದ ವೈದ್ಯಲೋಕದ ಕೊಡುಗೆ, ತಮ್ಮ ಪ್ರಾಣವನ್ನೇ ಬದಿಗಿರಿಸಿ ವೈದ್ಯಲೋಕದ ನರ್ಸ್ ಗಳು, ವೈದ್ಯರು ರೋಗಿಗಳಿಗೆ ನೀಡಿದ ಸೇವೆ ಸ್ಮರಣೀಯ. ಪೊಲೀಸ್ ಇಲಾಖೆ, ಮಾಧ್ಯಮದ ಎಚ್ಚರಿಕೆ, ಆರೋಗ್ಯ ಇಲಾಖೆ, ಮಹಾನಗರ ಪಾಲಿಕೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರ ಕೊಡುಗೆ, ಸರಕಾರದ ಆದೇಶಗಳು, ಲಾಕ್ ಡೌನ್, ಮಾಸ್ಕ್ , ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸಾವಿನ ಸರಣಿ, ಕೊರೊನಾ ವಾರಿಯರ್ಸ್ ಅಮೋಘ ಸೇವೆ ಇತ್ಯಾದಿ ಕೇಂದ್ರೀಕೃತ ವಸ್ತುವನ್ನು ಒಳಗೊಂಡಿದೆ. ಕುಟುಂಬ,ಪ್ರೇಮ ಸಂಬಂಧ ಗಳ ಸರಮಾಲೆಯೂ ವಿಷಯವಸ್ತುವಾಗಿದೆ. ಸರ್ವಧರ್ಮದ ಜಾತಿಗಳು ಸಾಲುಸಾಲಾಗಿ ಸಾವಿನಂತೆ ಮಲಗಿದ್ದವು. ಈ ಭೂಮಿ ಪರಿಸರ ತನ್ನಷ್ಟಕ್ಕೆ ತಾನೇ ನಿಯಂತ್ರಿಸಿ ಕೊಳ್ಳುತ್ತದೆ. ಯುಗಯುಗ ಕಳೆದರೂ ಈ ಭೂಮಿ ಜಗತ್ತು ಇರುತ್ತೆ. ಮನುಷ್ಯನ ಸಾವು ಅನಿವಾರ್ಯ ಎಂಬ ಅಧ್ಯಾತ್ಮಿಕತೆಯೂ ಇದೆ. ಪ್ರೀತಿ-ಪ್ರೇಮ ಮಿಲನದಿಂದ ಹೊಸಯುಗ ಪ್ರಾರಂಭವಾಗುತ್ತದೆ ಎಂಬ ಭರವಸೆಯ ಎಳೆಯೂ ಕಾದಂಬರಿಯ ಜೀವಾಳವಾಗಿದೆ.
ಲೇಖಕಿ ಡಾ. ಶರಣಮ್ಮ ಪಾಟೀಲ ಅವರು ಮೂಲತಃ ಕಲಬುರಗಿಯವರು. ತಂದೆ ಬಸವಂತರಾವ್ ಗೌಡ .ತಾಯಿ ಸುಭದ್ರಬಾಯಿ. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ಲೇಖಕಿ ತಾಯಿಯ ತವರೂರು ಚಿತ್ತಾಪುರ ತಾಲೂಕಿನ ಕುಂದಗೂಳ ಹಾಗೂ ರಟಗಲ್ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ , ಸೇಡಂ ನಲ್ಲಿ ಪ್ರೌಢಶಿಕ್ಷಣ, ಕಲಬುರಗಿಯಲ್ಲಿ ಹತ್ತನೇ ತರಗತಿ ಶಿಕ್ಷಣ, ಪೂರೈಸಿದರು. ಶರಣಬಸವೇಶ್ವರ ಸಂಸ್ಥಾನದ ಶ್ರೀ ಮಾತೋಶ್ರೀ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪಿಯುಸಿ, ಪದವಿ ಶಿಕ್ಷಣ, ಮುಂದೆ ಗುಲಬರ್ಗಾ ವಿ.ವಿ.ಯಿಂದ ಕನ್ನಡ ವಿಭಾಗದಲ್ಲಿ ಎಂ.ಎ.ಪದವಿ ಪಡೆದರು. ‘ಶೂನ್ಯ ಸಂಪಾದನೆಗಳಲ್ಲಿ ಸ್ತ್ರೀ ಪ್ರಸಂಗಗಳು’ ವಿಷಯವಾಗಿ ಎಂ.ಫಿಲ್ ಹಾಗೂ "ಶೂನ್ಯ ಸಂಪಾದನೆ ಹಾಗೂ ವೀರಶೈವ ...
READ MORE