ಲೇಖಕಿ ಎ.ಪಿ.ಮಾಲತಿ ಅವರು ಬರೆದ ಕಿರು ಕಾದಂಬರಿ-ಅಂಜನ. ಈ ಮೊದಲು ರಾಗಸಂಗಮ ಮಾಸ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು. ಮರೆಯಬೇಕೆಂದಿರುವ ಸಂಗತಿಗಳು ಮತ್ತೆ ಮತ್ತೆ ಕಾಡುತ್ತಾ ಹೋಗುತ್ತವೆ. ಪ್ರಸಕ್ತ ಪರಿಸ್ಥಿತಿಯಲ್ಲಿ ತನಗೆ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲ ಎಂದರೂ ಅದು ಕಾಡುತ್ತಾ ಹೋಗಿ ಬದುಕನ್ನೇ ಅಚ್ಚರಿಗೊಳಿಸುವ ಹಾಗೂ ಈ ಕಹಿ ನೆನಪಿನ ಮಧ್ಯೆಯೂ ಒಳ್ಳೆಯದನ್ನು ಬಯಸುವ ಮನೋಭಾವದ ಕಥಾ ವಸ್ತು ಒಳಗೊಂಡ ಕಾದಂಬರಿ ಇದು. ವರ್ತಮಾನದೊಂದಿಗೆ ಬದುಕಬೇಕು. ಭವಿಷ್ಯತ್ತು ರೂಪಿಸಿಕೊಳ್ಳಬೇಕು. ಆದರೆ, ಭೂತಕಾಲದ ವಿದ್ಯಮಾನಗಳನ್ನು ಮರೆಯುವುದು ಹೇಗೆ? ಎಂಬ ತೊಳಲಾಟವು ಇಡೀ ಕಾದಂಬರಿಯುದ್ದಕ್ಕೂ ಸಂಚಲನ ಮೂಡಿಸುತ್ತದೆ.
ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಸ್ಥಾನ ಹೊಂದಿರುವ ಪ್ರಸಿದ್ಧ ಕತೆ, ಕಾದಂಬರಿಕಾರ್ತಿ ಎ. ಪಿ. ಮಾಲತಿಯವರು ಹುಟ್ಟಿದ್ದು ಭಟ್ಕಳದಲ್ಲಿ 1944 ರ ಮೇ 6 ರಂದು. ಅವರ ಎರಡು ಪತ್ತೆದಾರಿ ಕಾದಂಬರಿಗಳು ಹೊರಬಂದಾದ ಕೇವಲ ಹದಿನೈದರ ವಯಸ್ಸು. ಹಿಂದಿ ಭಾಷೆ ಕಲಿತು ಓದಿದ್ದು ಪ್ರೇಮಚಂದರ ಕಥೆ, ಠಾಕೂರರ ಬಂಗಾಲಿ ಅನುವಾದಗಳು. ಅಧ್ಯಾಪಕರು, ಸಾಹಿತ್ಯಾಸಕ್ತರು, ವಿದ್ಯಾವಂತರಾದ ಪತಿ, ಎ.ಪಿ. ಗೋವಿಂದಭಟ್ಟರಿಂದ ದೊರೆತ ಪ್ರೋತ್ಸಾಹ. ಕೃಷಿ ಜೀವನದ ಜೊತೆಗೆ ಹಳ್ಳಿಯ ಹೆಂಗಸರು ಭತ್ತ ಕುಟ್ಟಲು ಪಡುತ್ತಿದ್ದ ಭವಣೆ ನೋಡಿ ಪ್ರಾರಂಭಿಸಿದ ರೈಸ್‌ಮಿಲ್, ಜೊತೆಗೆ ಹಾಲಿನ ವ್ಯಾಪಾರ. ಜನರೊಡನೆ ಬೆರೆಯುತ್ತಾ ಹೋದಂತೆಲ್ಲ ...
READ MORE