ಸೋತು ಗೆದ್ದವಳು-ತ್ರಿವೇಣಿ ಅವರ ಕಾದಂಬರಿ. 1954ರಲ್ಲಿ ಮೊದಲ ಮುದ್ರಣ ಕಂಡಿತ್ತು. ಮನುಷ್ಯನು ದುರ್ಬಲ. ಸನ್ನಿವೇಶಗಳಿಗೆ ಮನೋದೌರ್ಬಲಕ್ಕೆ ಬಲಿಯಾಗಿ ಹಲವು ಬಾರಿ ಅವನು ಕಾಲು ಜಾರುವುದುಂಟು. ಹಾಗೆ ಎಡವಿ, ಮತ್ತೆ ಎಚ್ಚೆತ್ತ ದಂಪತಿಯ ಜೀವನವನ್ನು ಚಿತ್ರಿಸಲು ಪ್ರಯತ್ನಿಸಲಾಗಿದೆ ಎಂದು ಕೃತಿಯ ಪ್ರಸ್ತಾವನೆಯಲ್ಲಿ ಲೇಖಕಿ ತ್ರಿವೇಣಿ ಸ್ಪಷ್ಟಪಡಿಸಿದ್ದಾರೆ. ಸಂಸಾರದಲ್ಲಿ ಆಕ್ರೋಶಕ್ಕಿಂತ ಸಹಾನುಭೂತಿ-ಕರುಣೆ ಇರಬೇಕು ಎಂಬುದು ಕಾದಂಬರಿಯ ಆಶಯವಾಗಿದೆ.
ತ್ರಿವೇಣಿ ಎಂಬ ಬರಹನಾಮದಿಂದ ಪ್ರಸಿದ್ದರಾದ ಅನುಸೂಯ ಶಂಕರ್ ರವರು ಕನ್ನಡದ ಪ್ರಮುಖ ಲೇಖಕಿಯರಲ್ಲಿ ಒಬ್ಬರು. ತಂದೆ ಬಿ.ಎಮ್. ಕೃಷ್ಣಸ್ವಾಮಿ, ತಾಯಿ ತಂಗಮ್ಮ ಇವರ ಮಗಳಾಗಿ 1928 ರ ಸೆಪ್ಟಂಬರ್ 1 ರಂದು ಮೈಸೂರಿನಲ್ಲಿ ಇವರು ಜನಿಸಿದರು. ಹೈಸ್ಕೂಲ್ ವರೆಗಿನ ಶಿಕ್ಷಣ ಮಂಡ್ಯದಲ್ಲಿ ಹಾಗೂ ಕಾಲೇಜು ಶಿಕ್ಷಣ ಮೈಸೂರಿನಲ್ಲಿ ಆಯಿತು. 1947ರಲ್ಲಿ ಮಹಾರಾಜಾ ಕಾಲೇಜಿನಿಂದ ಮನ:ಶಾಸ್ತ್ರದಲ್ಲಿ ಚಿನ್ನದ ಪದಕದೊಂದಿಗೆ ಬಿ.ಎ.ಪದವಿ ಪಡೆದರು. ಕನ್ನಡದ ಕಣ್ವ ಬಿ.ಎಂ.ಶ್ರೀಯವರ ಸೋದರನ ಪುತ್ರಿಯಾಗಿದ್ದ ತ್ರಿವೇಣಿಯವರು ಸ್ತ್ರೀಯರು ಹೆಚ್ಚಾಗಿ ಬರೆಯದೇ ಇದ್ದ ಕಾಲದಲ್ಲಿ ಬರವಣಿಗೆ ಪ್ರಾರಂಬಿಸಿ ಕೆಲವೇ ವರ್ಷಗಳಲ್ಲಿ ಅಸಾಧಾರಣ ಜನಪ್ರಿಯತೆಯನ್ನು ಗಳಿಸಿದರು. 1953 ರಲ್ಲಿ ತ್ರಿವೇಣಿಯವರ ಮೊದಲನೆಯ ಕಾದಂಬರಿ ಪ್ರಕಟವಾಯಿತು. ಹತ್ತು ವರ್ಷಗಳಲ್ಲಿ ...
READ MORE