ಕಲ್ಯಾಣ ಶರಣರ ವಿಷಯ ವಸ್ತು ಕೇಂದ್ರಿತ ಕಾದಂಬರಿ-ಮಹಾಮಣಿಹ. ಲೇಖಕ ಲಕ್ಷ್ಮಣ ಕೌಂಟೆ ಅವರು ಶರಣರ ಚಿಂತನೆಯಲ್ಲಿ ಈ ಕಾದಂಬರಿಗೆ ರೂಪು ನೀಡಿದ್ದಾರೆ. ಸಾಮಾಜಿಕ ಮೌಢ್ಯಗಳ ಆವರಣದಲ್ಲಿ ಶರಣರು ಅನುಭವಿಸಿದ ಸಮಸ್ಯೆ-ಅವಮಾನಗಳು, ಎದುರಿಸಿದ ತೀಕ್ಷಣತೆ ಓದುಗರಿಗೆ ಉತ್ತಮ ಜೀವನ ಸಂದೇಶ ನೀಡುತ್ತದೆ.
ಕಾದಂಬರಿಕಾರ ಲಕ್ಷ್ಮಣ ಕೌಂಟೆಯವರು 1958 ಡಿಸೆಂಬರ್ 10 ರಂದು ಜನಿಸಿದರು. ಮೂಲತಃ ಗುಲಬರ್ಗದವರು. ರಂಗಭೂಮಿ ಅವರ ಅಭಿರುಚಿಯ ಕ್ಷೇತ್ರ. ಓದು, ಸಾಹಿತ್ಯ ರಚನೆ, ನಾಟಕ ಅವರ ಒಲವಿನ ಪ್ರವೃತ್ತಿ. ಅವರು ಬರೆದ ನಾಟಕ 'ಕಲೆಯ ಕೊಲೆ ಅರ್ಥಾತ್ ಕಲಾವಿದನ ಕಣ್ಣೀರು' ರಂಗ ಪ್ರದರ್ಶನಗೊಂಡು ಜನ ಮೆಚ್ಚುಗೆಗೆ ಪಾತ್ರರಾಗಿದ್ದರು. ಲೀಲಾತರಂಗ, ಸಂಚಲನ, ಅನುಪರ್ವ, ಸಮರ್ಪಿತ ಮುಂತಾದ ಕಾದಂಬರಿಗಳನ್ನು ರಚಿಸಿದ್ದಾರೆ. ...
READ MORE