ಪುಷ್ಪ, ರತ್ನ, ಹಾಗೂ ಲಕ್ಷ್ಮೀ, ಕಾದಂಬರಿಯ ಮೂರು ಸ್ತ್ರೀ ಪಾತ್ರಗಳು. ಇವರಲ್ಲಿ ಇಬ್ಬರು ಜೋಡಿ ಜಡೆ ಹಾಕುತ್ತಾರೆ. ಒಬ್ಬಳದು ಮಾತ್ರ ಒಂಟಿ ಜಡೆ. ಈ ಜಡೆಗಳ ಮೂಲಕವೇ ಧನದಾಹಿತನ, ಅಧಿಕಾರ ಲಾಲಸೆ, ಮನುಷ್ಯರು ಎಸಗುವ ಅನ್ಯಾಯಗಳನ್ನು ಕಟ್ಟಿಕೊಡಲು ಯತ್ನಿಸುವ ಕೃತಿ ಇದು.
ಮರಳುಗಾಡಿನ ಓಯಸಿಸ್ ನಂತೆ ಸಾಧು ಜೀವಗಳು ಕೂಡ ಸುಳಿದಾಡುತ್ತವೆ. ವಿವಿಧ ತಿರುವುಗಳು, ಅನೂಹ್ಯ ಸುಳಿಗಳ ಮೂಲಕ ಸಹೃದಯರನ್ನು ಮತ್ತೆ ಮತ್ತೆ ಓದಿಗೆ ತೊಡಗುವಂತೆ ಮಾಡುತ್ತದೆ ಕಾದಂಬರಿ.
'ಬೀಚಿ' ಎಂಬುದು ರಾಯಸಂ ಭೀಮಸೇನರಾವ್ ಅವರ ಕಾವ್ಯನಾಮ. ಅವರು ಜನಿಸಿದ್ದು 1913ರ ಏಪ್ರಿಲ್ 23ರಂದು ಬಳ್ಳಾರಿ ಜಿಲ್ಲೆಯ ಹರಪನ ಹಳ್ಳಿಯಲ್ಲಿ. ತಂದೆ ರಾಯಸಂ ಶ್ರೀನಿವಾಸರಾವ್, ತಾಯಿ ಭಾರತಮ್ಮ. 'ಬೀಚಿ' ಯವರ ಹೆಸರಿನ ಹಾಗೆ ಅವರ ಸಹಿಯೂ ವಿಚಿತ್ರ- 'ಬಿ' ಕನ್ನಡವಾದರೆ 'ಚಿ' ಇಂಗ್ಲಿಷು. ಸತಿ ಸೂಳೆ, ಸರಸ್ವತಿ ಸಂಹಾರ, ಖಾದಿ ಸೀರೆ, ಹೆಂಣು ಕಾಣದ ಗಂಡ, ಸತ್ತವನು ಎದ್ದುಬಂದಾಗ, ಮೇಡಮ್ಮನ ಗಂಡ, ಏರದ ಬಳೆ, ಬಂಗಾರದ ಕತ್ತೆ, ಮೂರು ಹೆಂಣು ಐದು ಜಡೆ, ಸುನಂದೂಗ ಏನಂತೆ, ಲೇವಡಿ ಟೈಪಿಸ್ಟ್, ಆರಿದ ಚಹಾ, ಬಿತ್ತಿದ್ದೇ ಬೇವು, ಕಾಮಂಣ (ಕಾದಂಬರಿಗಳು). ತಿಂಮನ ತಲೆ, ಆರು ಏಳು ಸ್ತ್ರೀ ಸೌಖ್ಯ, ಅಮ್ಮಾವ್ರ ಕಾಲ್ಗುಣ, ...
READ MORE