‘ಕವಚ’ ರಾಧಾಕೃಷ್ಣ ಕಲ್ಚಾರ್ ಅವರ ಕಾದಂಬರಿಯಾಗಿದೆ. ಈ ಕೃತಿಯಲ್ಲಿ ಕರ್ಣನ ಕವಚದ ಕುರಿತು ಮಾತನಾಡುತ್ತದೆ. ಕರ್ಣನಿಗೆ ಪೂರ್ವ ಜನ್ಮದಲ್ಲಿ ಸಹಸ್ರ ಕವಚಗಳಿದ್ದುವೆಂದೂ, ಅದನ್ನು ನರ ಮತ್ತು ನಾರಾಯಣರೆಂಬ ಋಷಿಗಳು ಯುದ್ಧದಲ್ಲಿ ಕತ್ತರಿಸುತ್ತ ಬಂದರೆಂಬುದು ಈ ಕೃತಿಯ ಹೂರಣ. ಇನ್ನು ಕರ್ಣ ಧರಿಸಿದ ಕವಚಗಳಲ್ಲಿ ಒಂದು ಕವಚ ಉಳಿದು ಬಂತು. ಅದನ್ನು ಕತ್ತರಿಸುವುದಕ್ಕಾಗಿ ಕೃಷ್ಣಾರ್ಜುನರು ಈ ಜನ್ಮದಲ್ಲಿ ಕಾಣಿಸಿಕೊಂಡರು. ಅಷ್ಟೇ ಅಲ್ಲ, ಜೀವನೊಬ್ಬನಿಗೆ ಅನೇಕ ಕವಚಗಳು, ಕರ್ಣನಂತೆ. ಅವುಗಳನ್ನು ಕಳೆದುಕೊಳ್ಳುತ್ತ, ಕಳೆದುಕೊಳ್ಳುತ್ತ ಸಾಗುವುದೇ ಅವನ ಪಾಡು. ಆ ಕವಚಗಳು ಲೋಹದ ಕವಚಗಳಲ್ಲ. ಕವಚ ಸಾಂಕೇತಿಕ ಅಷ್ಟೇ. ಕರ್ಣನ ಬದುಕೂ ಈ ಕವಚಗಳನ್ನು ಕಳೆದುಕೊಳ್ಳುವ ಪ್ರಕ್ರಿಯೆ. ಅದನ್ನೇ ಕಾದಂಬರಿಯೂ ಧ್ವನಿಸುತ್ತದೆ ಎಂದು ಇಲ್ಲಿ ತಿಳಿಸಿದ್ದಾರೆ.
ರಾಧಾಕೃಷ್ಣ ಕಲ್ಚಾರ್ ಅವರು ಸುಳ್ಯ ತಾಲೂಕಿನ ಪಂಜ ಗ್ರಾಮದ ಕಲ್ಚಾರ್ ಎಂಬಲ್ಲಿ ಜನಿಸಿದರು. ತಂದೆ ಮಾಣಿಪ್ಪಾಡಿ ಕೇಶವ ಭಟ್ಟ, ತಾಯಿ ಕನಕಲಕ್ಷ್ಮಿ. ಪ್ರಸ್ತುತ ವಿಟ್ಲದಲ್ಲಿ ವಾಸವಾಗಿದ್ದಾರೆ. ನಾಡಿನ ಸುಪ್ರಸಿದ್ಧ ಅರ್ಥಧಾರಿ ಕಲಾವಿದರಾಗಿರುವ ರಾಧಾಕೃಷ್ಣ ಕಲ್ಚಾರರು ಉಪನ್ಯಾಸಕ, ಅಂಕಣಕಾರ, ಸಾಹಿತಿ,ವಿಮರ್ಶಕ ,ಭಾಷಣಕಾರ,ಹೀಗೆ ಹತ್ತು ಹಲವು ರಂಗಗಳಲ್ಲಿ ತೊಡಗಿಸಿಕೊಂಡ ಬಿಡುವಿಲ್ಲದ ಸಾಧಕ. ಕೂಡುಮನೆ (ಕಾದಂಬರಿ), ಅವರವರ ದಾರಿ (ಕಥಾಸಂಕಲನ) , ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ - ಇವರ ಕೃತಿಗಳು. ಜೊತೆಗೆ ತರಂಗ,ಉತ್ಥಾನಗಳಲ್ಲಿ ಅಂಕಣಕಾರಾಗಿದ್ದಾರೆ. ಸದ್ಯ ಹೊಸದಿಗಂತ ಪತ್ರಿಕೆಯಲ್ಲಿ ಆ ಲೋಚನ ಹಾಗೂ ತುಷಾರ ಪತ್ರಿಕೆಯಲ್ಲಿ ಉಲಿಯ ಉಯ್ಯಾಲೆ ಅಂಕಣದ ಲೇಖರಾಗಿದ್ದಾರೆ. ಸಿರಿಬಾಗಿಲು ಪ್ರತಿಷ್ಠಾನದ ...
READ MORE