ಎಂ.ಆರ್. ಶ್ರೀನಿವಾಸ ಮೂರ್ತಿ ಅವರು ಬರೆದ ಕಾದಂಬರಿ-ರಂಗಣ್ಣನ ಕನಸಿನ ದಿನಗಳು. ತಿಮ್ಮಪ್ಪರಾಯನ ಕಥೆ, ಜಂಭದ ಕೋಳಿ, ಕನಸು ದಿಟವಾಯಿತು, ಉಗ್ರಪ್ಪನ ವಾದ, ನಿರ್ಗಮನ ಸಮಾರಂಭ ಹೀಗೆ ಒಟ್ಟು 30 ಪ್ರಕರಣಗಳಡಿ ಇಡೀ ಕಾದಂಬರಿಯನ್ನು ಕಟ್ಟಿಕೊಡಲಾಗಿದೆ. ರಂಗಣ್ಣ ಎಂಬ ಪಾತ್ರವೇ ಕಾದಂಬರಿಯುದ್ದಕ್ಕೂ ವಿಜೃಂಭಿಸುತ್ತದೆ. ಈತ ಶಿಕ್ಷಕ. ಇಲಾಖೆಯಿಂದ ಅನುಭವಿಸುವ ಯಾತನೆಗಳು, ಸಂಬಳದ ಕಿರಿಕಿರಿ, ಸಾರ್ವಜನಿಕರ ನಿಂದೆಗಳು, ಶಿಕ್ಷಕರನ್ನು ಆಡಳಿತ ನಡೆಸಿಕೊಳ್ಳುವ ದೋಷಪೂರಿತ ನಿಯಮಗಳು ಎಲ್ಲವೂ ಕಾದಂಬರಿಯ ಪ್ರಮುಖ ವಸ್ತುಗಳೇ ಆಗಿವೆ. ಉತ್ತಮವಾದ ಶಿಕ್ಷಣ ವ್ಯವಸ್ಥೆಗೆ ಯಾವ ರೀತಿಯ ಕ್ರಮ ಕೈಗೊಳ್ಳಬೇಕು, ಆಡಳಿತ ವ್ಯವಸ್ಥೆ ಇರಬೇಕು ಎಂಬ ಆಶಯವೂ ಕಾದಂಬರಿಯಲ್ಲಿದೆ. ಈ ಕಾದಂಬರಿ 1951ರಲ್ಲಿ ಸತ್ಯಶೋಧನ ಪ್ರಕಟಣಾ ಮಂದಿರ ಪ್ರಕಾಶನವು ಪ್ರಕಟಿಸಿತ್ತು.
ಇಪ್ಪತ್ತನೆ ಶತಮಾನದ ಐವತ್ತರ ದಶಕದ ಸಾಮಾಜಿಕ ಗ್ರಾಮೀಣರ ಬದುಕಿನ ಚಿತ್ರಣ, ಅಂದಿನ ರಾಜಕೀಯ ಸ್ಥಿತಿ, ಶಾಲೆಗಳಲ್ಲಿ ಕೆಲಸ ನಿರ್ವಸುತ್ತಿದ್ದ ಮಾಸ್ತರರ ಬದುಕಿನ ಯಾತನೆಗಳು ಮತ್ತು ಬವಣೆಗಳ ಕುರಿತು ಹಾಸ್ಯದ ಮೂಲಕ ಲೇಖಕ ಎಂ.ಆರ್. ಶ್ರೀನಿವಾಸಮೂರ್ತಿ ಅವರು ಚಿತ್ರಿಸಿದ್ದಾರೆ.
ಅಂದಿನ ಅಲ್ಪ ಸಂಬಳದ ಕುರಿತು, ಮೇಲಾಧಿಕಾರಿಗಳ ದರ್ಪದ ಆದೇಶಗಳು, ಕೆಳಹಂತದ ನೌಕರರ ಪಾಡು.. ಹೀಗೆ ಒಟ್ಟಾರೆಯಾಗಿ, ಶಿಕ್ಷಣ ವ್ಯವಸ್ಥೆಯ ಅಂದಿನ ಏರುಪೇರುಗಳನ್ನು ಸಮಗ್ರವಾಗಿ ಈ ಕೃತಿಯಲ್ಲಿ ಕಾಣ ಸಿಗುತ್ತವೆ. ಈ ಕೃತಿ ಎಂಟು ಮುದ್ರಣಗಳನ್ನು ಕಂಡಿದೆ.
ವಿದ್ವಾಂಸರು, ಸಾಹಿತಿಗಳು, ಆಧುನಿಕ ಕನ್ನಡದ ನಿರ್ಮಾತೃಗಳಲ್ಲಿ ಒಬ್ಬರಾದ ಎಂ. ಆರ್. ಶ್ರೀನಿವಾಸಮೂರ್ತಿ ಅವರು ಹುಟ್ಟಿದ್ದು ಮೈಸೂರಿನಲ್ಲಿ. ಉಪಾಧ್ಯಾಯರಾಗಿ, ಮುಖ್ಯೋಪಾಧ್ಯಾಯರಾಗಿ, ರೇಂಜ್ ಇನ್‌ಸ್ಪೆಕ್ಟರ್ ರಾಗಿ ಜಿಲ್ಲಾ ವಿದ್ಯಾಧಿಕಾರಿಗಳಾಗಿ ಸೇವೆ ಸಲ್ಲಿಸಿ 1947ರಲ್ಲಿ ನಿವೃತ್ತಿ ಪಡೆಯುತ್ತಾರೆ. ಪ್ರಚಂಡ ವಾಗ್ಮಿ, ಉತ್ತಮ ಶಿಕ್ಷಕರು, ಸಮರ್ಥ ಅಧಿಕಾರಿಯಾದ ಅವರು ಸಂಸ್ಕೃತ, ಹಳಗನ್ನಡಗಳ ಅಭ್ಯಾಸದ ಅನುಭವದಿಂದ ರಚಿಸಿದ ಕೃತಿಗಳು.. ವಿದ್ಯಾರ್ಥಿ ದೆಸೆಯಲ್ಲಿಯೇ ರಚಿಸಿದ ಕಾದಂಬರಿ ‘ಸಾವಿತ್ರಿ.’ ಸ್ಕೌಟ್ ಬಾಲಕರ ಅಭಿನಯಕ್ಕೆಂದು ರಚಿಸಿದ ನಾಟಕ ‘ಕಂಠೀರವ ವಿಜಯ.’ ’ಧರ್ಮದುರಂತ, ನಾಗರಿಕ’ ಎಂಬ ನಾಟಕಗಳನ್ನು ರಚಿಸಿದ್ದಾರೆ. ಮಹಾತ್ಯಾಗ ಮತ್ತೊಂದು ಕಾದಂಬರಿ. ’ರಂಗಣ್ಣನ ಕನಸಿನ ದಿನಗಳು’ ಮತ್ತೊಂದು ಕೃತಿ. ಕನ್ನಡ ...
READ MORE