ನಾಟಕ ಕಂಪೆನಿ ನಡೆಸುವವರ ಬದುಕಿನ ಏರಿಳಿತಗಳನ್ನು ಚಿತ್ರಿಸುವ ’ಬಂಗಾರದ ಕತ್ತೆ’ 1950-60ರ ದಶಕದ ವೃತ್ತಿ ರಂಗಭೂಮಿಯ ಸ್ಥಿತಿಗತಿಗೂ ಕನ್ನಡಿ ಹಿಡಿಯುತ್ತದೆ. ಅದಾಗಲೇ ನಾಟಕ ಕಲೆ ಮಾತ್ರವಾಗಿ ಉಳಿಯದೇ ವ್ಯಾಪಾರೀಕರಣಗೊಂಡಿತ್ತು. ಕೆಲವರು ಅದನ್ನು ಹಣ ಮಾಡುವ ಉದ್ಯಮ ಮತ್ತು ಸ್ವೇಚ್ಛೇಚಾರದ ತಾಣವಾಗಿ ಮಾಡಿಕೊಂಡಿದ್ದರು. ಒಂದು ಕಲೆಯ ಅವಸಾನಕ್ಕೆ ಹೇಗೆ ಹೊರಗಿನ ಅಂಶಗಳು ಕಾರಣವೋ ಅಷ್ಟೇ ಒಳಗಿನ ಅಂಶಗಳು ಕೂಡ ಕಾರಣ ಎಂಬುದನ್ನು ಬೀchi ಹೇಳುತ್ತಾ ಹೋಗುತ್ತಾರೆ.
'ಬೀಚಿ' ಎಂಬುದು ರಾಯಸಂ ಭೀಮಸೇನರಾವ್ ಅವರ ಕಾವ್ಯನಾಮ. ಅವರು ಜನಿಸಿದ್ದು 1913ರ ಏಪ್ರಿಲ್ 23ರಂದು ಬಳ್ಳಾರಿ ಜಿಲ್ಲೆಯ ಹರಪನ ಹಳ್ಳಿಯಲ್ಲಿ. ತಂದೆ ರಾಯಸಂ ಶ್ರೀನಿವಾಸರಾವ್, ತಾಯಿ ಭಾರತಮ್ಮ. 'ಬೀಚಿ' ಯವರ ಹೆಸರಿನ ಹಾಗೆ ಅವರ ಸಹಿಯೂ ವಿಚಿತ್ರ- 'ಬಿ' ಕನ್ನಡವಾದರೆ 'ಚಿ' ಇಂಗ್ಲಿಷು. ಸತಿ ಸೂಳೆ, ಸರಸ್ವತಿ ಸಂಹಾರ, ಖಾದಿ ಸೀರೆ, ಹೆಂಣು ಕಾಣದ ಗಂಡ, ಸತ್ತವನು ಎದ್ದುಬಂದಾಗ, ಮೇಡಮ್ಮನ ಗಂಡ, ಏರದ ಬಳೆ, ಬಂಗಾರದ ಕತ್ತೆ, ಮೂರು ಹೆಂಣು ಐದು ಜಡೆ, ಸುನಂದೂಗ ಏನಂತೆ, ಲೇವಡಿ ಟೈಪಿಸ್ಟ್, ಆರಿದ ಚಹಾ, ಬಿತ್ತಿದ್ದೇ ಬೇವು, ಕಾಮಂಣ (ಕಾದಂಬರಿಗಳು). ತಿಂಮನ ತಲೆ, ಆರು ಏಳು ಸ್ತ್ರೀ ಸೌಖ್ಯ, ಅಮ್ಮಾವ್ರ ಕಾಲ್ಗುಣ, ...
READ MORE