ಅಭಿವೃದ್ಧಿ ತರುವ ಅನಾಹುತಗಳನ್ನು ಬಗೆಬಗೆಯಾಗಿ ಚಿತ್ರಿಸುವ ಕಾದಂಬರಿ ’ಬೆಳಕು ಬಂತು’. ಕರೆಂಟನ್ನೇ ಕಾಣದ ಕೋಯ್ನಳ್ಳಿ, ಕೋಯ್ನಾ ನದಿ ದಂಡೆಯ ಮೇಲಿದೆ. ಊರಿಗೆ ಸಮೀಪವೇ ಅಣೆಕಟ್ಟೊಂದು ಏಳುತ್ತದೆ. ಪರಿಣಾಮ ಹಳ್ಳಿಗರಿಗೆ ಮುಳುಗಡೆ ಭೀತಿ. ಸ್ಥಳಾಂತರವಾಗದೇ ಬೇರೆ ವಿಧಿ ಇಲ್ಲ. ಊರಿಗೇನೋ ಕರೆಂಟು ಬರುತ್ತದೆ. ಆದರೆ ಬರುತ್ತಲೇ ಅನಾಹುತಗಳನ್ನೂ ತರುತ್ತದೆ. ವಿದ್ಯುದಾಗಮನವನ್ನು ಜಕಾಪುರೆ ನಿರೂಪಿಸಿರುವ ರೀತಿ ಮನೋಜ್ಞವಾದುದು. ಕೃತಿಗೆ ಡಾ. ಮಾವಿನಕೆರೆ ರಂಗನಾಥ ಅವರ ಮುನ್ನುಡಿ ಇದೆ.
ಗಿರೀಶ್ ಚಂದ್ರಕಾಂತ ಜಕಾಪುರೆ ಅವರು ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಿಯಲ್ಲಿ ಶಿಕ್ಷಕರಾಗಿದ್ದಾರೆ. ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವೀಧರರು. ಕನ್ನಡ, ಹಿಂದಿ, ಮರಾಠಿ, ಇಂಗ್ಲಿಷ್, ಮತ್ತು ಉರ್ದು ಭಾಷೆಯನ್ನು ಬಲ್ಲವರು. ಕಾವ್ಯ, ಕಥಾ ಸಂಕಲನ, ವ್ಯಕ್ತಿಚಿತ್ರ, ಮಕ್ಕಳ ಕಥೆ, ಕಾದಂಬರಿ, ಮಕ್ಕಳ ಪದ್ಯ, ಹಿಂದಿ ಅನುವಾದಗಳು, ಮರಾಠಿ ಕಥೆಗಳ, ಕಾದಂಬರಿಗಳ ಅನುವಾದ, ಪ್ರವಾಸ ಕಥನಗಳು, ಬಿಡಿ ಲೇಖನಗಳು, ಅನುವಾದಿತ ಕಾವ್ಯ ಹೀಗೆ ತಮ್ಮ ಸಾಹಿತ್ಯ ಕೃಷಿಯನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಪ್ರಮುಖ ಕೃತಿಗಳು: ನನ್ನ ದನಿಗೆ ನಿನ್ನ ದನಿಯು, ಮನದ ಮುಂದಣ ಮಾಯೆ (ಗಜಲ್ ಗಳ ಸಂಕಲನ), ಖಾಮೋಶಿ, ಸಾಗರ್ ...
READ MOREಗು.ವಿ.ವಿ. ಸುವರ್ಣ ಪದಕ 2009
ಮಾಸ್ತಿ ಕಾದಂಬರಿ ಪ್ರಶಸ್ತಿ 2011
ಅತ್ತಿಮಬ್ಬೆ ಕಾದಂಬರಿ ಪ್ರಶಸ್ತಿ 2011,