ಕಾದಂಬರಿಕಾರ ಅರುಣಕುಮಾರ ಪಾಟೀಲ ಅವರ ಚೊಚ್ಚಲ ಕಾದಂಬರಿ ಖಜಾನೆ. ಕಾದಂಬರಿ ಖಜಾನೆಯು ಬಹಳ ಕುತೂಹಲ ಮತ್ತು ರೋಚಕತೆ ಹೊಂದಿದೆ.ನಾಲ್ಕು ಜನ ಯುವಕರು ಜೀವನದಲ್ಲಿ ಏನನ್ನಾದರೂ ಸಾಧಿಸಲು ಬಯಸಿ, ಖಜಾನೆ ಹುಡುಕುವ ಕತೆ ರೋಚಕವಾಗಿದೆ. ಇಲ್ಲಿ ನಿಗೂಢತೆ ಇದೆ. ಪಶ್ಚಿಮ ಘಟ್ಟ ಕಾಡುಗಳ ವೈಭವ ಇದೆ. ವಾಸ್ತವಿಕತೆ, ನೈಜತೆ ಇದೆ. ಸ್ವರಾಜ್ಯ ಪರಿಕಲ್ಪನೆ, ಬಂಡವಾಳ ಶಾಹಿಗಳ ಧ್ವನಿ ಎತ್ತಿ ಬದುಕು ಕಟ್ಟಿಕೊಳ್ಳುವ ರೀತಿ ಬಹಳ ರೋಚಕವಾಗಿದೆ.
ವಿಜ್ಞಾನಿ ನಿಕೋಲಾ ಟೆಸ್ಲಾ ಹೇಳಿದರು, “ನೀವು ಬ್ರಹ್ಮಾಂಡದ ರಹಸ್ಯಗಳನ್ನು ಕಂಡುಹಿಡಿಯಲು ಬಯಸಿದರೆ, ಶಕ್ತಿ, ಆವರ್ತನ ಮತ್ತು ಕಂಪನದ ವಿಷಯದಲ್ಲಿ ಯೋಚಿಸಿ." ನಿಗೂಢ, ರೋಚಕ, ಸಾಹಸಮಯ, ಹೋರಾಟ, ಬ್ರಹ್ಮಾಂಡ, ಪ್ರಕೃತಿ, ಯುವ ಪೀಳಿಗೆಯ ಸಾಧನೆ. ಮೊದಲ ಪುಟದಿಂದ ಕೊನೆಯ ಪುಟದವರೆಗು ರೋಚಕತೆ ಇದೆ. ಮನಸ್ಸಿನ ಅದ್ಭುತ ಶಕ್ತಿಯನ್ನು ತಿಳಿಸುವ ಕಾದಂಬರಿ. ನಮ್ಮ ಶಕ್ತಿ, ಭಾವನೆ, ಆಲೋಚನೆ, ಮನಸ್ಸು ಒಂದೇ ದಿಕ್ಕಿನಲ್ಲಿ ಸಂಘಟಿತವಾದರೆ ನೀವು ಕೈ ಎತ್ತಿ ಬೆಟ್ಟವನ್ನು ಆ ಕಡೆ ಸರೆದು ಬಿಡು ಅಂದರೆ ಸರಿದು ಬಿಡುತ್ತದೆ. ಎನ್ನುವುದನ್ನು ರೋಚಕವಾಗಿ ವಿವರಿಸಿದ್ದಾರೆ.
ಅರುಣಕುಮಾರ ಪಾಟೀಲ ಅವರು ಸಿಂದಗಿ ಮೂಲದವರು. ಎಂಜಿನಿಯರಿಂಗ್ ಪದವೀಧರರು. ಇವರು ಸಾಹಿತ್ಯಾಸಕ್ತರಾಗಿದ್ದು, ಪ್ರವಆಸ, ಪ್ರಯಾಣವನ್ನು ಹವ್ಯಾಸವನ್ನಾಗಸಿಕೊಂಡಿದ್ದಾರೆ. ಕೃತಿ: ಖಜಾನೆ ...
READ MORE